Advertisement

ಇನ್‌ಕ್ರೆಡಿಬಲ್‌ ಟ್ರೆಶರ್ಸ್‌ : ಭಾರತೀಯ ಪಾರಂಪರಿಕ ತಾಣಗಳ ಕೈಪಿಡಿ ಬಿಡುಗಡೆ

08:33 PM Aug 28, 2021 | Team Udayavani |

ನವದೆಹಲಿ: ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ವತಿಯಿಂದ ಗುರುತಿಸಲ್ಪಟ್ಟಿರುವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಭಾರತದ ಸ್ಥಳಗಳು/ಕಟ್ಟಡಗಳ ಚಿತ್ರಸಹಿತ ಮಾಹಿತಿಯುಳ್ಳ ಆಂಗ್ಲ ಕೈಪಿಡಿಯೊಂದು ಬಿಡುಗಡೆಯಾಗಿದೆ. “ಇನ್‌ಕ್ರೆಡಿಬಲ್‌ ಟ್ರೆಶರ್ಸ್‌’ ಹೆಸರಿನ ಈ ಪುಸ್ತಕವನ್ನು ಯುನೆಸ್ಕೋ ಹಾಗೂ “ಮ್ಯಾಪ್‌ಇನ್‌’ ಎಂಬ ಪ್ರಕಾಶನ ಸಂಸ್ಥೆ ಜಂಟಿಯಾಗಿ ಬಿಡುಗಡೆ ಮಾಡಿದೆ.

Advertisement

ಜುಲೈನಲ್ಲಿ 13ನೇ ಶತಮಾನದಲ್ಲಿ ನಿರ್ಮಿಸಲಾಗಿರುವ, ಭಾರತೀಯ ಶಿಲ್ಪಕಲೆಯ ಉತ್ಕೃಷ್ಟತೆಯ ನಮೂನೆಯಾದ ತೆಲಂಗಾಣದ ರಾಮಪ್ಪ ದೇಗುಲ ಹಾಗೂ ಗುಜರಾತ್‌ನ ಧೋಲಾವಿರಾ ಪ್ರಾಂತ್ಯ, ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನಪಡೆದಿದ್ದವು. ಇವೂ ಸೇರಿದಂತೆ, ಆ ಪಟ್ಟಿಯಲ್ಲಿ ಭಾರತದ ಒಟ್ಟು 40 ಸ್ಥಳಗಳಿವೆ. ಅವೆಲ್ಲವನ್ನೂ ಈ ಒಂದು ಪುಸ್ತಕದಲ್ಲಿ ಅತ್ಯುತ್ತಮ ಫೋಟೋಗಳು, ಸವಿವರವಾದ ಮಾಹಿತಿಯನ್ನು ಸೇರಿಸಿ ಅಂದವಾಗಿ ಪ್ರಕಟಿಸಲಾಗಿದೆ.

ಇದನ್ನೂ ಓದಿ :ಸರ್ಕಾರದ ಸುಳ್ಳುಗಳನ್ನು ತಡೆಯಲು ನಾಗರಿಕರು ಕಟಿಬದ್ಧರಾಗಿ : ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌

“ಭಾರತದಲ್ಲಿ ಅನೇಕ ಪ್ರಾಚೀನ, ಕಲಾತ್ಮಕ ಕುರುಹುಗಳಿವೆ. ಯುನೆಸ್ಕೋ ಪಟ್ಟಿಯಲ್ಲಿ ಸೇರಿರುವ ಇಂಥ ಭಾರತೀಯ ತಾಣಗಳ ಬಗ್ಗೆ ಅರಿಯುವುದರಿಂದ ನಮ್ಮ ದೇಶದ ಅತ್ಯದ್ಭುತ ಸಂಸ್ಕೃತಿಯ ಪರಿಚಯವಾಗಿ, ದೇಶದ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗುತ್ತದೆ. ಈ ಪುಸ್ತಕದಲ್ಲಿ ಪ್ರತ್ಯೇಕವಾಗಿಯೇ ಉಲ್ಲೇಖೀಸಲಾಗಿರುವ ಭಾರತದ 40 ಪಾರಂಪರಿಕ ತಾಣಗಳು ಈ ದೇಶದ ಇತಿಹಾಸವನ್ನು ಮೆಲುಕು ಹಾಕುವಂತೆ ಮಾಡುತ್ತವೆ. ಹಾಗಾಗಿ, ಇತಿಹಾಸದ ಓದುಗರಿಗೆ ಈ ಪುಸ್ತಕ ಉಪಯೋಗವಾಗುತ್ತದೆ” ಎಂದು ನವದೆಹಲಿಯಲ್ಲಿರುವ ಯುನೆಸ್ಕೋ ಕಚೇರಿಯ ನಿರ್ದೇಶಕ ಇರಿಕ್‌ ಫಾಲ್ಟ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next