Advertisement
ಆಟಿಕೂಟ, ಕೆಸರ್‌ಡೊಂಜಿ ದಿನ ಎಂಬಿತ್ಯಾದಿ ಕೂಟಗಳ ಮೂಲಕ ಮಣ್ಣಿನಾಟವನ್ನು ಮತ್ತೆ ನೆನಪಿಸುವ ಪ್ರಯತ್ನಗಳು ನಡೆಯುತ್ತಿವೆೆ. ವರ್ಷಂಪ್ರತಿ ಗ್ರಾಮಗಳಲ್ಲಿ ಸಂಘ ಸಂಸ್ಥೆಗಳು ಜಾನಪದ ಆಟಗಳನ್ನು ಆಯೋಜಿಸಿ ಬಹುಮಾನ ವಿತರಿಸಿ ಸಂಭ್ರಮ ಸಡಗರ ಹಂಚಿಕೊಳ್ಳಲಾಗುತ್ತಿದೆ.
ಎಲ್ಲ ಜನಾಂಗಳಲ್ಲೂ, ಪ್ರದೇಶ ಗಳಲ್ಲೂ ಹಿಂದಿನ ದಿನಗಳಿಂದಲೇ ಪ್ರಚಲಿತವಾಗಿರುವ ಅನೇಕ ಜಾನಪದ ಆಟಗಳಿವೆ. ಆಟಗಳು ಪ್ರಾಚೀನ ಸಂಸ್ಕೃತಿಯನ್ನು ತಕ್ಕಮಟ್ಟಿಗೆ ಬಿಂಬಿಸುವುದು ಕೂಡ ಆಗಿದೆ. ಅಜ್ಜಿಯಾಟ, ತೋಳತೊಟ್ಟಿಲಾಟ, ಕೋಳಿಕಾದುವಿಕೆ, ಕುದುರೆ ಆಟ, ಬೀಸು ಹೊಡೆತ, ಉಪ್ಪಾಟ, ಕಪ್ಪೆಲಾಗ, ಉಸಿರು ಕಟ್ಟಿಸುವುದು, ಟೊಂಕ ಹಾಕುವುದು, ಕಾಗೆ-ಗಿಳಿ, ಕಬಡ್ಡಿ, ಹುಲಿದನ, ಪುಣಿಚ್ಚೆಲ್ ಆಟ, ಪಲ್ಲಿಪತ್, ಮರಕೋತಿಯಾಟ, ನೇಲಾಟ, ಅವಿತುಕೊಳ್ಳುವಾಟ, ದುರ್ಸುಬಾಣ, ನೀರಮೇಲೆ ಕಪ್ಪೆಲಾಗ, ತಪ್ಪಂಗಾಯಿ, ಚೆಂಡು ಹೊಡೆತ, ಕುಟ್ಟಿದೊಣ್ಣೆ, ಏಳುಪಲ್ಲೆ ಯಾಟ, ಬುಗುರಿ, ಜುಬುಲಿ, ಗೋಲಿಯಾಟ, ಏಳು ಗುಳಿಯ ಆಟ, ಕಣ್ಣಾ ಮುಚ್ಚಾಲೆ, ಗಾಡಿ ಯಾಟ, ಮೊದಲಾದ ಹೊರಾಂಗಣ ಆಟಗಳಿವೆ.
Related Articles
Advertisement
ಸರಕಾರ ಯುವಜನ ಇಲಾಖೆ ಮೂಲಕ ವರ್ಷಂಪ್ರತಿ ಯುವಜನ ಮೇಳ ಹಮ್ಮಿಕೊಂಡು ಉತ್ತೇಜನ ನೀಡುತ್ತಿದೆ. ಜಿಲ್ಲಾ, ರಾಜ್ಯಮಟ್ಟದ ಸ್ಪರ್ಧೆ ಏರ್ಪಡಿಸಿ ರಾಜ್ಯದ ವಿವಿಧ ಭಾಗದ ಕಲಾ ಪ್ರಕಾರಗಳನ್ನು ಪ್ರದರ್ಶಿಸುವ ಅವಕಾಶ ನೀಡಲಾಗಿದೆ. ಇದು ಯುವ ಸಮು ದಾಯ ಪಾಲ್ಗೊಳ್ಳಲು ಇರುವ ವೇದಿಕೆ. ಹಾಗಾಗಿ ಇಲ್ಲಿ ಗ್ರಾಮೀಣ ಪ್ರದೇಶದ ಸಂಸ್ಕೃತಿಯನ್ನು ಪರಿಚಿಸುವ ಅವಕಾಶ ದೊರೆಯುತ್ತದೆ. ಇದರ ಜತೆಗೆ ಶಾಲಾ ಕಾಲೇಜುಗಳಲ್ಲಿ ವಿವಿಧ ಘಟಕಗಳ ಮೂಲಕ ಜಾನಪದ ಆಟೋಟ, ನೃತ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
- ಕಿರಣ್ ಕುಂಡಡ್ಕ