Advertisement

ಇನ್ಫಿಯ ಕೋಟ್ಯಧಿಪತಿ ಉದ್ಯೋಗಿಗಳ ಸಂಖ್ಯೆ ಹೆಚ್ಚಳ

08:04 PM Jun 03, 2020 | Sriram |

ಹೊಸದಿಲ್ಲಿ: ಐಟಿ ಕಂಪೆನಿಯಲ್ಲಿ ಇರೋದು, ಅದರಲ್ಲೂ ಇನ್ಫೋಸಿಸ್‌ನಲ್ಲಿ ಕೆಲಸ ಮಾಡೋದು ಅಂದರೆ ಸಹಜವಾಗಿ ಕೈ ತುಂಬ ಸಂಪಾದಿಸ್ತಾರೆ ಅನ್ನೋದು ಸಾಮಾನ್ಯವಾಗಿದೆ. ಈ ಸುದ್ದಿ ಓದಿದ್ರೆ ಅದೇನೂ ಸುಳ್ಳಲ್ಲ ಅನ್ನೋದು ಖಚಿತವಾಗಬಹುದು.

Advertisement

ಕಾರಣ ಇನ್ಫಿಯ ಉದ್ಯೋಗಿಗಳಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆಯಂತೆ. ಕಳೆದ ವರ್ಷ ಇಂತಹವರ ಸಂಖ್ಯೆ 64 ಇದ್ದು, ಈ ವರ್ಷ ಅವರ ಸಂಖ್ಯೆ 74ಕ್ಕೇರಿದೆ. ಉದ್ಯೋಗಿಗಳು ಹೊಂದಿದ ಷೇರು ಮೌಲ್ಯ ಏರಿಕೆ, ವೇತನ ಏರಿಕೆ, ಭತ್ಯೆಗಳ ಏರಿಕೆ ಇತ್ಯಾದಿಗಳಿಂದ ಉದ್ಯೋಗಿಗಳ ಆದಾಯ ವೃದ್ಧಿಯಾಗಿದೆ ಎಂದು ಹೇಳಲಾಗಿದೆ. ಸದ್ಯ ಇನ್ಫಿಯಲ್ಲಿ 1.89 ಲಕ್ಷ ಮಂದಿ ಉದ್ಯೋಗಿಗಳಿದ್ದಾರೆ.

ಅತ್ಯುತ್ತಮ ಉದ್ಯೋಗಿಗಳಿಗೆ, ಸಾಧನೆ ತೋರಿದವರಿಗೆ ಕಂಪೆನಿ ಷೇರು ಆಧರಿತ ಪ್ರಯೋಜನಗಳನ್ನು ನೀಡುತ್ತದೆ. ಇನ್ನು ಸರಾಸರಿ ಸಂಭಾವನೆ ಶೇ.10ರಷ್ಟು ಏರಿಕೆಯಾಗಿದ್ದು 6.82 ಲಕ್ಷ ರೂ.ಗಳಿಗೆ ತಲುಪಿದೆ. ಇನ್ನು ಕಂಪೆನಿ ಸಿಇಒ ಸಲೀಲ್‌ ಪಾರೇಖ್‌ ಅವರ ಸಂಭಾವನೆ ಕಳೆದ ವರ್ಷಕ್ಕಿಂತ ಈ ವರ್ಷ ಶೇ.39ರಷ್ಟು ಏರಿಕೆಯಾಗಿದೆ. ಇದರಿಂದ ಅವರ ವೇತನ 34.27 ಕೋಟಿ ರೂ. ಆಗಿದೆ ಕಳೆದ ವರ್ಷ ಅವರ ವೇತನ 24.67 ಕೋಟಿ ರೂ. ಆಗಿತ್ತು. ಅವರ ಭತ್ಯೆಯೇ ವಾರ್ಷಿಕ 16.85 ಕೋಟಿ ರೂ. ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next