Advertisement
ಅಂಪಾರು ಜಂಕ್ಷನ್‌ನ ಅನತಿ ದೂರದಲ್ಲಿಯೇ ಸಿದ್ದಾಪುರ ಕಡೆಗೆ ಸಂಚರಿಸುವ ಮಾರ್ಗದ ಬದಿ ಬರೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಕಳೆದ ಆಗಸ್ಟ್‌ನಲ್ಲಿ ಸುರಿದ ಮಳೆಗೆ ಈ ಬರೆ ಕುಸಿಯಲು ಆರಂಭವಾಗಿದೆ.
Related Articles
Advertisement
ಸೈಡ್‌ವಾಲ್‌ಗೂ ಅಪಾಯ
ಸುಮಾರು 50 ಮೀ. ದೂರದವರೆಗೆ ಉದ್ದಕ್ಕೂ ಬರೆ ಕುಸಿದಿದೆ. ಈ ಹಿಂದೆ ಜಂಕ್ಷನ್ ಕಾಮಗಾರಿ ವೇಳೆ ಬರೆ ಕುಸಿಯದಿರಲೆಂದು ನಿರ್ಮಿಸಿದ ಸೈಡ್‌ವಾಲ್ ಮೇಲೂ ಭಾರೀ ಪ್ರಮಾಣದಲ್ಲಿ ಬರೆಯ ಮಣ್ಣು ಕುಸಿದಿದೆ. ಅದಲ್ಲದೆ ಒಂದೆಡೆ ಸೈಡ್‌ವಾಲ್ ಕೂಡ ವಾಲಿಕೊಂಡಿದೆ. ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಸೈಡ್‌ವಾಲ್‌ಗೂ ಅಪಾಯ ಎದುರಾಗುವ ಸಾಧ್ಯತೆಗಳಿವೆ.
ದುರಸ್ತಿಗೆ ಮನವಿ: ನಾವು ಅಂಪಾರು ಗ್ರಾ.ಪಂ.ನಿಂದ ಈಗಾಗಲೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಬರೆ ಕುಸಿಯುತ್ತಿರುವ ಬಗ್ಗೆ, ದುರಸ್ತಿ ಮಾಡುವಂತೆ ಮನವಿ ಮಾಡಿಕೊಂಡಿದ್ದೇವೆ. ಅದಲ್ಲದೆ ಹೆದ್ದಾರಿಗೆ ಕುಸಿಯುವ ಭೀತಿಯಲ್ಲಿದ್ದ ಒಂದೆರಡು ಅಪಾಯಕಾರಿ ಮರಗಳನ್ನು ತೆಗೆಯಲು ಅರಣ್ಯ ಇಲಾಖೆಯವರಿಗೆ ಮನವಿ ಮಾಡಿದ್ದೆವು. – ಅಶೋಕ ಕೆ., ಅಂಪಾರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ
ಶೀಘ್ರ ದುರಸ್ತಿಗೆ ಕ್ರಮ: ಅಂಪಾರಿನ ಹೆದ್ದಾರಿ ಬದಿ ಬರೆ ಕುಸಿದಿರುವ ಬಗ್ಗೆ ಈಗಾಗಲೇ ಭೇಟಿ ನೀಡಿ, ಪರಿಶೀಲಿಸಿದ್ದೇವೆ. ಪ್ರಾಕೃತಿಕ ವಿಕೋಪದಡಿ ದುರಸ್ತಿ ಮಾಡಲು ಕ್ರಮ ಕೈಗೊಂಡಿದ್ದು, ಮಳೆ ಕಡಿಮೆಯಾದ ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದು. – ದುರ್ಗಾದಾಸ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಕುಂದಾಪುರ