Advertisement

ಜನತೆ ನಿರ್ಲಕ್ಷ್ಯಕ್ಕೆ ಹೆಚ್ಚುತ್ತಿದೆ ಕೋವಿಡ್ ಸೋಂಕು

04:06 PM Sep 22, 2020 | Suhan S |

ಚನ್ನಪಟ್ಟಣ: ಲಾಕ್‌ಡೌನ್‌ ತೆರವುಗೊಂಡ ನಂತರ ವೈರಸ್‌ ಹರಡುವಿಕೆ ಹೆಚ್ಚಾಗುತ್ತಿದ್ದರೂ, ಜನತೆ ನಿರ್ಲಕ್ಷ್ಯ ವಹಿಸಿರುವುದರಿಂದ ನಿತ್ಯ ಪಾಸಿಟಿವ್‌ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.ಆದರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ.

Advertisement

ಆರಂಭದಲ್ಲಿ ಅನುಸರಿಸಿದ ನಿಯಮಗಳನ್ನು ಇದೀಗ ಜನ ಗಾಳಿಗೆ ತೂರಿದ್ದಾರೆ, ಮುಖಕ್ಕೆ ಮಾಸ್ಕ್ ಇಲ್ಲ. ಇದ್ದರೂ ಅದು ಬಾಯಿ ಮುಚ್ಚುತ್ತಿಲ್ಲ. ಎಲ್ಲೆಡೆಕಾಣಿಸುತ್ತಿದ್ದ ಸ್ಯಾನಿಟೈಸರ್‌ಗಳು ಈಗ ಕಾಣಿಸುತ್ತಿಲ್ಲ. ಕೆಲವು ಕಡೆ ಕಾಟಾಚಾರಕ್ಕೆ ಕಳಪೆದ್ರಾವಣವನ್ನು ಅಲ್ಲಲ್ಲಿ ಇರಿಸಲಾಗಿದೆ. ಕೋವಿಡ್ ಸಾಮಾನ್ಯ ಖಾಯಿಲೆ ಅಲ್ಲದಿದ್ದರೂ, ಇದೀಗ ಸಾಮಾನ್ಯ ಖಾಯಿಲೆ ಎನ್ನುವಂತೆ ಬದಲಾಗಿಬಿಟ್ಟಿದೆ. ಮಾಸ್ಕ್ ಬಳಕೆ ಕಡ್ಡಾಯ ಎನ್ನುವ ನಿಯಮವಿದ್ದರೂ, ಯಾರೂ ಬಳಕೆ ಮಾಡುತ್ತಿಲ್ಲ. ಹೀಗಾದರೆ ಕೋವಿಡ್ ಸಲೀಸಾಗಿ ದೇಹ ಪ್ರವೇಶಿಸಲು ಜನರೇ ಅನುವು ಮಾಡಿ ಕೊಡುತ್ತಿದ್ದಾರೆ.

ಇನ್ನು ಸಾಮಾಜಿಕ ಅಂತರವಂತೂ ಕೇಳಲೇಬೇಡಿ. ಹಾಗೆಂದರೇನು ಎನ್ನುವ ಪ್ರಶ್ನೆ ಹುಟ್ಟು ಹಾಕುವಂತಿದೆ ಜನರ ನಡವಳಿಕೆ ನಿತ್ಯ ಪೇಟೆ, ಬೀದಿ, ಬಜಾರ, ಅಂಗಡಿ, ಹೋಟೆಲ್‌, ಬಸ್‌, ಆಟೋ ನಿಲ್ದಾಣ ಹೀಗೆ ಎಲ್ಲೆಂದರಲ್ಲಿ ಯಾವುದೇ ಆತಂಕವಿಲ್ಲದೆ ನಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೋವಿಡ್ ಒಕ್ಕರಿಸುವ ಮುನ್ನ ರಸ್ತೆಗಳಲ್ಲಿ ವಾಹನ ಸಂಚಾರ ಹೇಗೆ ಇತ್ತೋ, ಇಗಲೂ ಅದೇರೀತಿಯಲ್ಲಿದೆ. ಇನ್ನಾದರೂ ಜನ ಈ ನಿರ್ಲಕ್ಷ್ಯ ಮನೋಭಾವ ಬಿಟ್ಟು ಕೋವಿಡ್ ಹರಡದಂತೆ ನಿಯಮ ಪಾಲಿಸಲು ಜನ ಮುಂದಾಗಬೇಕಿದೆ.

ಮಾಸ್ಕ್ ಬಳಕೆ ದಿನಕಳೆ ದಂತೆಕಡಿಮೆಯಾಗುತ್ತಿದೆ. ಇದರಿಂದ ಕೋವಿಡ್ ಹರಡುವ ಭೀತಿ ಹೆಚ್ಚಾಗಿದೆ.ಜನನಿಬಿಡ ಪ್ರದೇಶಗಳಲ್ಲಿ ಅಂತರಕಾಪಾಡಿ ಕೊಳ್ಳಲಾಗುತ್ತಿಲ್ಲ. ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಸಂಬಂಧ ಪಟ್ಟವರುಕ್ರಮ ವಹಿಸಬೇಕು. ರಾಜೇಶ, ಚನ್ನಪಟ್ಟಣ ನಿವಾಸಿ

ಮಾಸ್ಕ್ , ಸ್ಯಾನಿಟೈಸರ್‌ ಬಳಕೆ ಸೇರಿದಂತೆ ಸರ್ಕಾರ ವಿಧಿಸಿರುವ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸಲಾಗುತ್ತಿದೆ. ಆದರೂ ಸಮರ್ಪಕ ಪಾಲನೆಯಾಗುತ್ತಿಲ್ಲ. ಈ ಬಗ್ಗೆಕಠಿಣ ಕ್ರಮಕೈಗೊಂಡು ದಂಡ ವಿಧಿಸಲಾಗುವುದು. ಶಿವನಂಕಾರಿಗೌಡ, ಪೌರಾಯುಕ್ತ

Advertisement

 

ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next