ಹೊಸಕೋಟೆ: ತಾಲೂಕಿನಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿದಿನ ಅಂದಾಜು 50ಜನರ ತಪಾಸಣೆಕೈಗೊಳ್ಳಲಾಗುತ್ತಿದೆ. ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರಲ್ಲಿ ಸೋಂಕು ದೃಢಪಡುತ್ತಿದ್ದು, ಕೆಲವರು ಆಸ್ಪತ್ರೆಗೆ ದಾಖ ಲಾದರೆ ಉಳಿದವರು ಹೋಂ ಕ್ವಾರಂಟೈನ್‌ಗೆಒಳಪಡುತ್ತಿದ್ದಾರೆ.
739 ಪಾಸಿಟಿವ್: ಸರ್ಕಾರಿ ಆಸ್ಪತ್ರೆಯಲ್ಲಿ ಅ.3ರ ವರೆಗೂ 4,667 ಜನರ ಗಂಟಲು, ಮೂಗಿನ ದ್ರಾವಣ ಸಂಗ್ರಹಿಸಿದ್ದು 3,923 ಜನರಿಗೆ ನೆಗೆಟಿವ್, 739 ಪಾಸಿಟಿವ್ ಕಂಡುಬಂದಿದ್ದು 267 ತಪಾಸಣಾ ವರದಿಗಳು ಬಾಕಿಯಿವೆ. ಸರಕಾರಿ ಆಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ಪ್ರಸ್ತುತ 27 ಸೋಂಕಿತರಿದ್ದು, ಇದುವರೆ ದಾಖಲಾಗಿದ್ದ 142 ಸೋಂಕಿತರಲ್ಲಿ 103 ಮಂದಿ ಬಿಡುಗಡೆ ಹೊಂದಿದ್ದು, 12 ಸೋಂಕಿತರನ್ನು ಇತರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಹೋಂ ಕ್ವಾರಂಟೈನ್‌ಗೆ ಒಳಪಡುವವರಿಗೆ 14 ದಿನಗಳಿಗೆ ರೋಗ ನಿರೋಧಕ ಮಾತ್ರೆ17 ದಿನಗಳ ವರೆಗೆ ಹೊರಗಡೆ ಓಡಾಡದಂತೆ ಸೂಚಿಸಲಾಗುತ್ತಿದೆ. 14 ದಿನಗಳ ನಂತರ ಸ್ವತ: ತಪಾಸಣೆ ಕೈಗೊಂಡು ಯಾವುದೇ ರೀತಿಯ ಸಮಸ್ಯೆಗಳು ಕಂಡುಬಂದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲು ತಿಳಿಸಲಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ತಪಾಸಣೆ ವರದಿ ವಿಳಂಬವಾಗುತ್ತಿದ್ದು, ತಪಾಸಣೆಗೆ ಒಳಗಾದವರು ಸುಮಾರು 5ರಿಂದ 6 ದಿನ ಕಾಯ ಬೇಕಾಗಿದ್ದು,ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರಿಗೂ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿವೆ.
10ಕ್ಕೂ ಹೆಚ್ಚು ಮಂದಿ ಮೃತ: ಜನರು ಮಾಸ್ಕ್ ಧರಿಸದೆ ಅನವಶ್ಯಕವಾಗಿ ಓಡಾಡುವುದು,ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು, ಮುಂಜಾಗ್ರತಾ ಕ್ರಮ ಕೈಗೊಳ್ಳುವುದರಲ್ಲಿ ತೀವ್ರ ನಿರ್ಲಕ್ಷ್ಯ ತೋರುತ್ತಿರುವುದು ಸಹ ಸೋಂಕಿನ ಪ್ರಮಾಣ ಹೆಚ್ಚಳಕ್ಕೆ ಕಾರಣ ವಾಗುತ್ತಿದೆ. ಮತ್ತೂಂದೆಡೆ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ತಪಾಸಣೆ ಮಾಡಿಸಿ ಕೊಳ್ಳದಿರುವುದು ಅನಾಹುತಗಳಿಗೆ ಕಾರಣವಾಗುತ್ತಿದೆ ಎಂದು ಬಹುತೇಕ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಕಳೆದ15 ದಿನಗಳಲ್ಲಿ10ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದು ಜನರಲ್ಲಿ ಭೀತಿ ಮೂಡಿಸಿದೆ. ಈಗಲಾದರೂ ಎಚ್ಚೆತ್ತು ಸರಕಾರ ವಿಧಿಸಿರುವ ನಿರ್ಬಂಧಗಳನ್ನು ಪಾಲಿಸಲು ಗಮನಹರಿಸಬೇಕಾಗಿದೆ.
ಎಂವಿಜೆ ಆಸ್ಪತ್ರೆಯಲ್ಲಿ 14 ಐಸಿಯು, 14 ವೆಂಟಿಲೇಟರ್ ವಾರ್ಡ್‌ಗಳೊಂದಿಗೆಕ್ವಾರಂಟೈನ್‌ಗೆ ಒಳಪಟ್ಟ 400 ಸೋಂಕಿತರಿಗೆ ಚಿಕಿತ್ಸೆ ನೀಡುವ ಸೌಲಭ್ಯಕಲ್ಪಿಸಲಾಗಿದೆ. ಇದರೊಂದಿಗೆ ತಪಾಸಣೆಗೆ ಒಳಗಾಗಿ ವರದಿಗೆಕಾಯುತ್ತಿರುವ ಜನರಿಗೆ 20 ವಾರ್ಡ್‌ಗಳಿವೆ.ಕನಿಷ್ಠ 10 ದಿನಗಳ ವರೆಗೂ ಸೋಂಕಿತರು ದಾಖಲಾಗಬೇಕಾಗಿದ್ದು, ಆಸ್ಪತ್ರೆ ವತಿಯಿಂದ ಉಚಿತವಾಗಿ ಪೌಷ್ಟಿಕ ಆಹಾರ ನೀಡಲಾಗುತ್ತಿದೆ.
–ಡಾ.ಧರಣಿ, ಇಒ