Advertisement

ಬೀದಿ ನಾಯಿಗಳಿಂದ ಹೆಚ್ಚುತ್ತಿರುವ ಅಪಘಾತ !

12:33 PM Aug 22, 2022 | Team Udayavani |

ಉಡುಪಿ: ಮಣಿಪಾಲ, ಉಡುಪಿ ನಗರದ ಸುತ್ತಮುತ್ತ ಬೀದಿ ನಾಯಿ ಗಳಿಂದಾಗಿ ಅಪಘಾತ ಸಂಖ್ಯೆ ಹೆಚ್ಚುತ್ತಿದ್ದು ಇತ್ತೀಚೆಗೆ ಖಾಸಗಿ ಆಸ್ಪತ್ರೆ ಮೂಲಗಳ ಪ್ರಕಾರ ಬೈಕ್‌, ಸ್ಕೂಟರ್‌ಗೆ ನಾಯಿಗಳು ಅಡ್ಡ ಬಂದು ನಿಯಂತ್ರಣ ತಪ್ಪಿ ಬೀಳುತ್ತಿದ್ದಾರೆ. ಇದರಿಂದ ಕೈ, ಕಾಲು ಮುರಿದುಕೊಂಡು ಆಸ್ಪತ್ರೆ ಸೇರುವರ ಸಂಖ್ಯೆ ಹೆಚ್ಚುತ್ತಿದೆ.

Advertisement

ಮಣಿಪಾಲ ಆರ್‌ಎಸ್‌ಬಿ ಭವನ, ಅಂಚೆ ಕಚೇರಿ, ಕೆನರಾ ಬ್ಯಾಂಕ್‌ ವೃತ್ತ ಕಚೇರಿ, ಪೊಲೀಸ್‌ ಠಾಣೆ, ಪರ್ಕಳ ಪೇಟೆ, ಉಡುಪಿ ಸಿಟಿ ಬಸ್‌ ನಿಲ್ದಾಣ, ಬನ್ನಂಜೆ, ಅಜ್ಜರಕಾಡು ಪಾರ್ಕ್‌, ಚಿಟಾ³ಡಿ ಜಂಕ್ಷನ್‌, ಮಲ್ಪೆ ಜಂಕ್ಷನ್‌, ಬೀಚ್‌ ಸಮೀಪ, ಬಂದರು ಬಳಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಬೀದಿ ನಾಯಿಗಳ ಸಂಖ್ಯೆ ಹೆಚ್ಚಳ

ನಗರ ಭಾಗದಲ್ಲಿ ಬೀದಿ ನಾಯಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಪ್ರತೀವರ್ಷ ಸಂತಾನಹರಣ ಚಿಕಿತ್ಸೆ ಹೆಸರಲ್ಲಿ ನಗರಸಭೆ ಲಕ್ಷಾಂತರ ರೂ., ವ್ಯಯಿಸಲಾಗುತ್ತಿದ್ದರೂ ಬೀದಿನಾಯಿಗಳ ವಿಷಯದಲ್ಲಿ ಫ‌ಲಿತಾಂಶ ಉತ್ತಮವಾಗಿಲ್ಲ. ನಗರ ಭಾಗದಲ್ಲಿ ಹೊಟೇಲ್‌, ಸಭಾಂಗಣಗಳ ಬಳಿ ಸಿಗುವ ಆಹಾರ ತ್ಯಾಜ್ಯವು ಬೀದಿನಾಯಿಗಳು ಗ್ರಾಮಾಂತರ ಭಾಗದಿಂದ ವಲಸೆ ಬರಲು ಕಾರಣ ಎನ್ನಲಾಗುತ್ತಿದೆ.

ಒಮ್ಮೆಲೆ ಎಗರುವ ನಾಯಿಗಳು

Advertisement

ಬೈಕ್‌, ಸ್ಕೂಟರ್‌ ಚಾಲನೆ ಸಂದರ್ಭ ನಿಧಾನಗತಿಯ ವೇಗದಲ್ಲಿದ್ದರೂ ತಿರುವು, ನೇರ ರಸ್ತೆಗಳಲ್ಲಿ ಒಮ್ಮೆಲೆ ಎರಗುವ ಬೀದಿ ನಾಯಿಗಳಿಂದ ತಬ್ಬಿಬ್ಟಾಗುವ ಸವಾರರು ಸ್ಕಿಡ್‌ ಆಗಿ ಬೀಳುತ್ತಾರೆ. ಬಹುತೇಕರಿಗೆ ಕೈ, ಕಾಲು, ಬೆನ್ನು, ಭುಜಕ್ಕೆ ಹೆಚ್ಚಿನ ಪೆಟ್ಟುಗಳು ಸಂಭವಿಸುತ್ತಿವೆ. ಇತ್ತೀಚೆಗೆ ಖಾಸಗಿ ಆಸ್ಪತ್ರೆ ಗಳಲ್ಲಿ 35ರಿಂದ 50 ವರ್ಷದವರೆಗಿನ ವಯೋಮಾನದವರು ಇದರಿಂದ ಗಾಯಗೊಂಡು ಚಿಕಿತ್ಸೆ ಪಡೆದುಕೊಂಡವರ ಸಂಖ್ಯೆ ಹೆಚ್ಚಿದೆ ಎಂದು ಕೆಲವು ಆಸ್ಪತ್ರೆ ಮೂಲಗಳು ತಿಳಿಸಿವೆ. ಹೆಲ್ಮೆಟ್‌ ಧರಿಸದಿದ್ದಲ್ಲಿ ಗಂಭೀರ ಪರಿಣಾಮದ ಗಾಯಗಳೂ ಉಂಟಾಗಿವೆ.

ಮರು ಟೆಂಡರ್‌ ಕರೆಯಲಾಗಿದೆ: ಬೀದಿನಾಯಿಗಳು ಹೆಚ್ಚಿದ್ದು, ಇದರಿಂದ ನಾಗರಿಕರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ. ನಗರದಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಸಂತಾನ ಹರಣ ಚಿಕಿತ್ಸೆ ವ್ಯವಸ್ಥಿತವಾಗಿ ನಡೆಸಲು ಕ್ರಮ ತೆಗೆದುಕೊಂಡಿದ್ದೆವು. ಕೆಲವು ದಿನಗಳ ಹಿಂದೆ ಟೆಂಡರ್‌ ಪಡೆದವರು ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾರೆ. ಈಗ ಮತ್ತೂಮ್ಮೆ ಹೊಸ ಟೆಂಡರ್‌ ಕರೆಯಲಾಗಿದೆ. –ಸುಮಿತ್ರಾ ನಾಯಕ್‌, ಅಧ್ಯಕ್ಷರು, ಉಡುಪಿ ನಗರ ಸಭೆ

Advertisement

Udayavani is now on Telegram. Click here to join our channel and stay updated with the latest news.

Next