Advertisement

ಮಂಗಳೂರಿನಲ್ಲಿ ಹೆಚ್ಚುತ್ತಿದೆ ಹೆಲ್ತ್‌ ಟೂರಿಸಂ

12:30 AM Feb 07, 2019 | |

ಮಂಗಳೂರು: ಪ್ರತಿಷ್ಠಿತ ಆಸ್ಪತ್ರೆಗಳನ್ನು ಹೊಂದಿರುವ ಮಂಗಳೂರಿಗೆ ಈಗ ವಿದೇಶಗಳಿಂದ ಚಿಕಿತ್ಸೆಗೆ ಬರುತ್ತಿರುವ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿದೆ! ಈ ಮೂಲಕ ಮೆಡಿಕಲ್‌ ಟೂರಿಸಂನಲ್ಲಿ ನಗರ ಮುಂಚೂಣಿಯಲ್ಲಿದೆ. ಕಳೆದ 3  ವರ್ಷಗಳಲ್ಲಿ  ನಗರಕ್ಕೆ 240ಕ್ಕೂ ಹೆಚ್ಚು ವಿದೇಶೀಯರು ಬಂದು ವಿವಿಧ ಚಿಕಿತ್ಸೆ ಪಡೆದಿದ್ದಾರೆ. 2018-19ರಲ್ಲಿ 121 ಮಂದಿ ಬಂದಿದ್ದಾರೆ. ವಿದೇಶೀಯರನ್ನು ಆಕರ್ಷಿಸುವಲ್ಲಿ ನಗರದ ಕೆಎಂಸಿ ಆಸ್ಪತ್ರೆ, ಕುಂಟಿಕಾನ ಎ.ಜೆ. ಆಸ್ಪತ್ರೆ, ಕೊಡಿಯಾಲ್‌ಬೈಲ್‌ನ ಯೇನ ಪೊಯಾ ಆಸ್ಪತ್ರೆಗಳು ಮುಂಚೂಣಿಯಲ್ಲಿವೆ. ಅಮೆರಿಕದಂತಹ ಮುಂದು ವರಿದ ದೇಶ ಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ಬಂದಿದ್ದಾರೆ.  

Advertisement

ಚೆನ್ನೈ, ಬೆಂಗಳೂರು ಹೊರತಾಗಿ ಮಂಗಳೂರಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ಲಭ್ಯವಾಗುತ್ತಿರುವುದು ವಿದೇಶೀ ಯರು ಇಲ್ಲಿಗೆ ಬರಲು ಕಾರಣ. ಜತೆಗೆ ಇಲ್ಲಿನ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ, ಹೈಫೈ ಸೌಲಭ್ಯ, ಉತ್ತಮ ಕೇರ್‌ ಟೇಕರ್‌ ವ್ಯವಸ್ಥೆಯಿಂದ ವಿದೇಶೀಯರು ಆದ್ಯತೆ ನೀಡುತ್ತಿದ್ದಾರೆ.   

3 ಆಸ್ಪತ್ರೆಗಳಲ್ಲಿ 240 ಮಂದಿಗೆ ಚಿಕಿತ್ಸೆ
ಕರಾವಳಿಗೆ ಚಿಕಿತ್ಸೆಗೆ ಆಗಮಿಸುವವರಲ್ಲಿ ಕೊಲ್ಲಿ ಪ್ರಜೆಗಳೇ ಅಧಿಕ. ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಪೈಕಿ ಬಹ್ರೈನ್‌, ಬೆಲ್ಜಿಯಂ, ಡೆನ್ಮಾರ್ಕ್‌, ಇಂಗ್ಲೆಂಡ್‌, ಫ್ರಾನ್ಸ್‌, ಇರಾಕ್‌, ಕೀನ್ಯಾ, ಕತಾರ್‌, ಯುಎಸ್‌ಎಯ ತಲಾ ಓರ್ವರು, ಬಾಂಗ್ಲಾದೇಶದ ನಾಲ್ವರು,  ಯೆಮನ್‌, ಯುಎಇಯ ತಲಾ ಇಬ್ಬರು, ಒಮನ್‌ನ 14 ಮಂದಿ ಸೇರಿದ್ದಾರೆ. 2016-17ರಲ್ಲಿ 10, 2017-18ರಲ್ಲಿ 16 ಹಾಗೂ 2018-19ರಲ್ಲಿ 8 ಮಂದಿ ಇಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಎ.ಜೆ. ಆಸ್ಪತ್ರೆಯಲ್ಲಿ 2016-17ರಲ್ಲಿ 10, 2017-18ರಲ್ಲಿ ಹೊರ ರೋಗಿಗಳಾಗಿ 40, ಒಳರೋಗಿ ವಿಭಾಗದಲ್ಲಿ 15, 2018-19ರಲ್ಲಿ ಹೊರ ರೋಗಿಗಳಾಗಿ 43 ಹಾಗೂ ಒಳ ರೋಗಿಗಳಾಗಿ 30 ಮಂದಿ ವಿದೇಶಿಗರು ವಿವಿಧ ರೀತಿಯ ಶಸ್ತ್ರಚಿಕಿತ್ಸೆ, ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ ಬಹುತೇಕರು ಕೊಲ್ಲಿ ಪ್ರಜೆಗಳು ಯೇನಪೊಯಾ ಆಸ್ಪತ್ರೆಯಲ್ಲಿ 2016-19ರವರೆಗೆ ಒಟ್ಟು 68 ಮಂದಿ ವಿದೇಶಿಗರು ಚಿಕಿತ್ಸೆ ಪಡೆದಿದ್ದಾರೆ. ಒಮಾನ್‌ನ 21, ಸೊಮಾಲಿಯಾದ 5, ಕೀನ್ಯಾದ 6, ಯೆಮನ್‌ನ 21, ಬಹ್ರೈನ್‌ನ 1, ಸೌದಿ ಅರೇಬಿಯಾದ 6 ಹಾಗೂ ದುಬಾಯಿಯ 8 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ 2018-19ರಲ್ಲೇ ಅಧಿಕವಾಗಿದ್ದು, 40 ಮಂದಿ ಚಿಕಿತ್ಸೆಗಾಗಿ ಬಂದಿದ್ದಾರೆ. 
ಕಂಕನಾಡಿ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ವರ್ಷಕ್ಕೆ ಒಂದೆರಡು ಮಂದಿ, ಫಳ್ನೀರ್‌ ಯುನಿಟಿ ಆಸ್ಪತ್ರೆಯಲ್ಲಿ 2016-17ರಲ್ಲಿ ಸುಮಾರು 5 ಮಂದಿ ಚಿಕಿತ್ಸೆ ಪಡೆದಿದ್ದಾರೆ. 

ಬೆಸ್ಟ್‌ ಯಾಕೆ? 
ವೈದ್ಯಕೀಯ ವೆಚ್ಚ ಕಡಿಮೆ 
ಆಸ್ಪತ್ರೆಗೆ ದಾಖಲಾದ ಬಳಿಕ
ತ್ವರಿತ ಅವಧಿಯಲ್ಲಿ ಚಿಕಿತ್ಸೆ
ಹಿರಿಯ ವೈದ್ಯರ ಗಮನ 
ಸ್ನೇಹಮಯಿ ವೈದ್ಯರು

Advertisement

ಮಾಹಿತಿ ಪ್ರದರ್ಶಿಸಿ
ಕಳೆದ 3 ವರ್ಷದಲ್ಲಿ ಚಿಕಿತ್ಸೆಗೆ ಬರುವ ವಿದೇಶೀಯರ ಸಂಖ್ಯೆ ಹೆಚ್ಚಾಗಿದೆ.ಹೆಚ್ಚು. ಇದು ಇನ್ನಷ್ಟು ಹೆಚ್ಚಲು ವಿಮಾನ ನಿಲ್ದಾಣದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಮಾಹಿತಿ ಪ್ರದರ್ಶಿಸಬೇಕು.  
ಡಾ| ಪದ್ಮನಾಭ ಕಾಮತ್‌, ಹೃದ್ರೋಗ ತಜ್ಞರು ಕೆಎಂಸಿ ಆಸ್ಪತ್ರೆ ಮಂಗಳೂರು

ಹೆಲ್ತ್‌ ಟೂರಿಸಂ ಬೆಳೆಯುತ್ತಿದೆ
ವೈದ್ಯಕೀಯ ಪ್ರವಾಸೋದ್ಯಮಕ್ಕೆ ನಗರ ತೆರೆದು ಕೊಳ್ಳುತ್ತಿದೆ.  ಗಲ್ಫ್, ಆಫ್ರಿಕಾಗಳಿಂದ ರೋಗಿಗಳು ಬರುತಿ ¤ದ್ದಾರೆ. ಎ.ಜೆ., ಕೆಎಂಸಿ, ಯುನಿಟಿ ಆಸ್ಪತ್ರೆಗಳಿಗೆ ವಿದೇಶಿ ಪ್ರಜೆಗಳು ಹೆಚ್ಚಾಗಿ ಬರುತ್ತಿದ್ದಾರೆ.
-ಡಾ| ಸಚ್ಚಿದಾನಂದ ರೈ, ಅಧ್ಯಕ್ಷರು, ಐಎಂಎ ಮಂಗಳೂರು ಘಟಕ

 ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next