Advertisement

ಮಡಕೆ ಚಿತ್ತಾರ ಬೇಡಿಕೆ ಹೆಚ್ಚಳ

10:09 PM Jul 16, 2019 | mahesh |

ಮಾರುಕಟ್ಟೆಯಲ್ಲಿ, ಮನೆಗಳಲ್ಲಿ ಅಲಂಕಾರಕ್ಕಾಗಿ ಬಳಸುವ ಪಾಂಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆಲಂಕಾರಿಕ ವಸ್ತುಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಪಾಟ್‌ ಪೈಂಟಿಂಗ್‌ನಂತಹ ಕೋರ್ಸ್‌ ಗಳೂ ಮಹತ್ವ ಪಡೆಯುತ್ತಿವೆ. ಕಲೆಯಲ್ಲಿ ಆಸಕ್ತಿಯಿರುವವರಿಗೆ ಸೂಕ್ತವಾದ ಕೋರ್ಸ್‌ ಆಗಿದೆ. ಹವ್ಯಾಸಕ್ಕಾಗಿ ಮಾಡುವ ಇದನ್ನು ವೃತ್ತಿಯನ್ನಾಗಿ ಬದಲಾಯಿಸಿಕೊಳ್ಳಬಹುದು.

Advertisement

ಪಾಟ್‌ ಪೈಂಟಿಂಗ್‌ ಎಂದರೆ
ಪಾಟ್‌ ಪೈಂಟಿಂಗ್‌ ಎಂದರೆ ಮಡಕೆ ಮತ್ತು ಇನ್ನಿತರ ವಸ್ತುಗಳ ಮೇಲೆ ಪೈಂಟಿಂಗ್‌ ಮಾಡುವುದು. ಇದು ಅತ್ಯಂತ ಸೂಕ್ಷ್ಮವಾದ ಕೆಲಸವಾಗಿದ್ದು, ಪೈಂಟಿಂಗ್‌ನಲ್ಲಿ ಆಸಕ್ತಿಯಿರುವವರು ಇದನ್ನು ಕಲಿಯಬಹುದು.

ಪಾಟ್‌ ಪೈಂಟಿಂಗ್‌ಗೆ ಇತ್ತೀಚೆಗೆ ಮಹತ್ವ ಹೆಚ್ಚಾಗಿದ್ದು, ಅದರ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಕಲೆಯ ಮೇಲಿನ ಆಸಕ್ತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆಲಂಕಾರಿಕ ವಸ್ತುಗಳ ತಯಾರಿಕಾ ಕಂಪೆನಿಗಳಲ್ಲಿ ಪಾಂಟ್‌ ಪೈಟಿಂಗ್‌ಗೆ ಹೆಚ್ಚು ಅವಕಾಶವಿದೆ. ಜತೆಗೆ ಇಲ್ಲಿ ಚಿತ್ರಕಲೆಗೆ ಹೆಚ್ಚು ಮಹತ್ವ ದೊರೆಯುವುದರಿಂದ ಆಯಿಲ್‌ ಪೈಂಟಿಂಗ್‌, ಗ್ಲಾಸ್‌ ಪೈಂಟಿಂಗ್‌ಗಳಲ್ಲೂ ಆಸಕ್ತಿ ವಹಿಸಬಹುದು. ಚಿತ್ರಕಲೆಗೆ ಸಂಬಂಧಿಸಿದಂತೆ ಹಲವಾರು ಕಾಲೇಜುಗಳಿವೆ. ಎಂ.ಐ.ಟಿ ಆರ್ಟ್‌, ಡಿಸೈನ್‌ ಆ್ಯಂಡ್‌ ಟೆಕ್ನಾಲಜಿ ಯುನಿವರ್ಸಿಟಿ ಪುಣೆ, ಇಂಟರ್‌ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಫೈನ್‌ ಆಟ್ಸ್‌ ಮೋದಿನಗರ್‌, ಭಾರತೀಯ ವಿದ್ಯಾಭವನ್‌ನಲ್ಲಿ ಇದಕ್ಕೆ ಸಂಬಂಧಿಸಿದ ಕೋರ್ಸ್‌ಗಳಿವೆ.

ಇಂದು ಪಾಟ್‌ ಪೈಂಟಿಂಗ್‌ಗೆ ಬೇಡಿಕೆ ಹೆಚ್ಚಿತ್ತಿದೆ. ಸಾಮಾನ್ಯವಾಗಿ ಗೃಹಾಲಂಕಾರಕ್ಕಾಗಿ ಬಣ್ಣ ಬಣ್ಣದ ಪಾಟ್‌ಗಳನ್ನು ಖರೀದಿ ಮಾಡುತ್ತಾರೆ. ಹೀಗಾಗಿ ಬಣ್ಣದ ಪಾಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಈ ಕೋರ್ಸ್‌ಗಳಿಗೂ ಬೇಡಿಕೆ ಅಪಾರ. ಚಿತ್ರಕಲೆಯಲ್ಲಿ ಆಸಕ್ತಿಯಿರುವವರು ಇದನ್ನು ವೃತ್ತಿಯನ್ನಾಗಿ ಮಾಡಬಹುದು. ಅದರ ಜತೆಗೆ ಇತರ ಮಾದರಿಯ ಪೈಂಟಿಂಗ್‌ಗಳನ್ನು ಕರಗತಗೊಳಿಸಿಕೊಳ್ಳಬಹುದು.

ಪಾಂಟ್‌ ಪೈಟಿಂಗ್‌ನ ವಿಧಗಳು
1 ಬ್ರಶ್‌ವರ್ಕ್‌
ಬ್ರಶ್‌ ಮೂಲಕ ಮಾಡುವ ಪೈಂಟಿಂಗ್‌ ಇದಾಗಿದೆ.
2 ಅಂಡರ್‌ಗ್ಲೆಝ್
ವಾಟರ್‌ ಕಲರ್‌ ಮಾದರಿಯಲ್ಲಿ ಮಾಡಬಹುದಾದ ಪೈಂಟಿಂಗ್‌ ಇದಾಗಿದ್ದು, ಪಾಟ್‌ ಸುಂದರವಾಗಿ ಕಾಣುವಂತೆ ಮಾಡುತ್ತದೆ.
3 ಸಿರಾಮಿಕ್‌ ಪೈಟಿಂಗ್‌
ಸಿರಾಮಿಕ್‌ ಬಳಸಿ ಮಾಡುವ ಪೈಂಟಿಂಗ್‌ ಹೆಚ್ಚು ಆಕರ್ಷಕವಾಗಿರುತ್ತದೆ.

Advertisement

-  ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next