Advertisement
ರಾಜ್ಯ ಕರಾವಳಿ ಭಾಗವು ಪ್ರವಾಸಿ ತಾಣಗಳಿಗೆ ಪ್ರಸಿದ್ಧಿ ಪಡೆದಿದೆ. ರಾಜ್ಯ, ಹೊರ ರಾಜ್ಯ ಸಹಿತ ವಿದೇಶಗಳಿಂದಲೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಕೊರೊನಾ ಕಡಿಮೆಯಾದ ಹಿನ್ನೆಲೆಯಲ್ಲಿ ಇದೀಗ ಪ್ರವಾಸಿಗರ ಸಂಖ್ಯೆ ಮತ್ತೆ ಚೇತರಿಕೆಯತ್ತ ಸಾಗುತ್ತಿದ್ದು, ಪ್ರವಾಸಿಗರನ್ನು ಸೆಳೆಯಲು ಹೋಂ-ಸ್ಟೇಗಳ ಉತ್ತೇಜನಕ್ಕೆ ಇಲಾಖೆ ಮುಂದಾಗಿದೆ. ಅದರಂತೆ, ಮೂರು ತಿಂಗಳುಗಳಿನಿಂದೀಚೆಗೆ ಹೆಚ್ಚಿನ ಮಂದಿ ಹೋಂ ಸ್ಟೇ ನಿರ್ಮಾಣದ ಬಗ್ಗೆ ಪ್ರವಾಸೋ ದ್ಯಮ ಇಲಾಖೆಯಲ್ಲಿ ವಿಚಾರಿಸುತ್ತಿದ್ದಾರೆ. ಕೊರೊನಾ ಕಾರಣದಿಂದಾಗಿ ಕೆಲವು ಮಂದಿ ಕೆಲಸ ಕಳೆದುಕೊಂಡು ಮನೆಯಲ್ಲೇ ಉಳಿದುಕೊಂಡಿದ್ದು, ಅವರು ಕೂಡ ಹೋಂ ಸ್ಟೇ ನಿರ್ಮಾಣಕ್ಕೆ ಮುಂದೆ ಬರುತ್ತಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.ಕೊರೊನಾ ಕಾರಣದಿಂದಾಗಿ ಪ್ರವಾಸಿಗರ ಕೊರತೆ ಕಾರಣ, ಈ ಹಿಂದೆ ಬಹುತೇಕ ಹೋಂ-ಸ್ಟೇಗಳು ಬಾಗಿಲು ಮುಚ್ಚಿದ್ದವು. ಇದೀಗ ಮತ್ತೆ ಪ್ರವಾಸೋದ್ಯಮ ಚಟುವಟಿಕೆ ಗಳು ಆರಂಭವಾಗಿವೆ.
Related Articles
Advertisement
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋ ದ್ಯಮ ಕ್ಷೇತ್ರ ಸದ್ಯ ಚೇತರಿಕೆಯತ್ತ ಸಾಗುತ್ತಿದೆ. ಜಿಲ್ಲೆಯಲ್ಲಿ ಪ್ರವಾಸೋ ದ್ಯಮ ಕ್ಷೇತ್ರದ ಉತ್ತೇಜನಕ್ಕೆ ಇಲಾಖೆ ಹಲವು ಯೋಜನೆಗಳನ್ನು ಹಮ್ಮಿ ಕೊಂಡಿದೆ. ಸದ್ಯ ಹೋಂ ಸ್ಟೇ ನಿರ್ಮಾಣಕ್ಕೆ ಹೆಚ್ಚಿನ ಮಂದಿ ಉತ್ಸುಕ ರಾಗಿದ್ದಾರೆ ಜಿಲ್ಲೆಯಲ್ಲಿ ಸದ್ಯ 56 ಹೋಂ ಸ್ಟೇ ನಿರ್ಮಾಣವಾಗಿದ್ದು, ಮತ್ತಷ್ಟು ಮಂದಿ ಉತ್ಸುಕರಾಗಿದ್ದಾರೆ. ಕೆಲವು ತಿಂಗಳಿನಿಂದ ಜಿಲ್ಲೆಗೆ ಆಗಮಿ ಸುವ ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆಯಾಗಿದೆ.–ಮಾಣಿಕ್ಯ, ದ.ಕ. ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ
- ನವೀನ್ ಭಟ್ ಇಳಂತಿಲ