Advertisement
ಅಭಿವೃದ್ಧಿಗೊಂಡ ಹೆದ್ದಾರಿಯನ್ನು ಅಗಲದ ಜತೆಗೆ ನೇರವಾಗಿ ಮಾಡಲಾಗಿದೆ. ಹೀಗಾಗಿ ವಾಹನಗಳು ವೇಗದಲ್ಲೇ ಸಾಗುತ್ತಿ ರುತ್ತವೆ. ನೇರವಾಗಿರುವ ರಸ್ತೆಯ ವೇಗವನ್ನೇ ತಿರುವಿ ನಲ್ಲೂ ಮುಂದುವರಿಸುತ್ತಿರುವ ಪರಿ ಣಾಮ ಅಪಘಾತಗಳಿಗೆ ಕಾರಣವಾಗುತ್ತಿದೆ.
Related Articles
Advertisement
ಅಭಿವೃದ್ಧಿಗೊಂಡಿರುವ ಜತೆಗೆ ದೂರದಲ್ಲಿ ವಾಹನಗಳು ಬರುವುದು ಕೂಡ ಸ್ಪಷ್ಟವಾಗಿ ಕಾಣುತ್ತದೆ. ವಾಹನ ದೂರ ಇದೆ ಎಂದು ರಸ್ತೆ ಕ್ರಾಸ್ ಮಾಡುವ ವೇಳೆ ರಸ್ತೆಯ ಮಧ್ಯಕ್ಕೆ ತಲುಪುತ್ತಿದ್ದಂತೆ ವಾಹನಗಳು ಕ್ಷಣ ಮಾತ್ರದಲ್ಲಿ ಹತ್ತಿರಕ್ಕೆ ಬಂದಿರುತ್ತದೆ. ಅಂದರೆ ವಾಹನಗಳ ವೇಗ ಅಷ್ಟಿದ್ದು, ಈ ವೇಳೆ ವಾಹನ ಚಾಲಕನ ನಿಯಂತ್ರಣ ತಪ್ಪಿದರೆ ಅಥವಾ ರಸ್ತೆ ದಾಟುವ ವ್ಯಕ್ತಿ ಗೊಂದಲಕ್ಕೆ ಒಳಗಾದರೆ ಅಪಘಾತದ ಸಾಧ್ಯತೆ ಹೆಚ್ಚಿರುತ್ತದೆ. ಇದು ಜೀವಹಾನಿಗೂ ಕಾರಣವಾಗುವ ಸಾಧ್ಯತೆಯೂ ಇದೆ.
ಚತುಷ್ಪಥದಲ್ಲೂ ಅಪಾಯ
ಬಿ.ಸಿ.ರೋಡ್-ಜಕ್ರಿಬೆಟ್ಟು ಹೆದ್ದಾರಿ ಯಲ್ಲೂ ಅಪಾಯದ ಸ್ಥಿತಿ ಇದೆ. ಅಂದರೆ 2 ದಿಕ್ಕಿನಲ್ಲೂ ಸಾಗುವ ವಾಹನಗಳಿಗೆ ಮಧ್ಯೆ ಡಿವೈಡರ್ ಇದ್ದು ಪ್ರತ್ಯೇಕ ರಸ್ತೆಗಳಿವೆ. ಆದರೆ ಕೆಲವೊಂದು ವಾಹನಗಳು ರಾಂಗ್ ಸೈಡ್ ನಿಂದ ಬರುತ್ತಿರುವುದರಿಂದ ಅಪಾಯಕ್ಕೆ ಕಾರಣವಾಗುತ್ತಿದೆ. ಇನ್ನು ಒಳರಸ್ತೆಗಳು ಹೆದ್ದಾರಿಯನ್ನು ಸೇರುವಲ್ಲಿಯೂ ಅಪಘಾತದ ಸ್ಥಿತಿ ಹೆಚ್ಚಿರುತ್ತದೆ. ಚತುಷ್ಪಥ ಹೆದ್ದಾರಿಯ ಬಂಟ್ವಾಳ ಬೈಪಾಸ್ ಜಂಕ್ಷನ್‌ನಲ್ಲಿ ನಾಲ್ಕು ರಸ್ತೆಗಳು ಸೇರುತ್ತಿ ರುವುದರಿಂದ ಗೊಂದಲ ಗಳಿದ್ದು, ಅಪಘಾತದ ಸಾಧ್ಯತೆ ಇದೆ. ಅಲ್ಲಿ ವೃತ್ತ ಮಾಡಿದ್ದರೆ ವಾಹನಗಳು ಗೊಂದಲಕ್ಕೆ ಒಳಗಾಗುತ್ತಿರಲಿಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿದೆ. ಈ ಎಲ್ಲ ರಸ್ತೆಗಳಲ್ಲೂ ಬರುವ ವಾಹನಗಳು ಒಂದೇ ವೇಗದಲ್ಲಿ ಬರುವುದರಿಂದ ಅಪಾಯ ಹೆಚ್ಚಿರುತ್ತದೆ.
ಮಿತಿ ಮೀರಿದ ವೇಗಕ್ಕೆ ದಂಡ
ಈ ಹೊಸ ರಸ್ತೆಯಲ್ಲಿ ಅಪಘಾತವಾಗುವ ಕುರಿತು ನನ್ನ ಗಮನಕ್ಕೂ ಬಂದಿದೆ. ಈಗಾಗಲೇ ಹತ್ತಾರು ಅಪಘಾತಗಳು ನಡೆದಿರುವ ಮಾಹಿತಿ ಇದೆ. ಹೀಗಾಗಿ ಕೆಲವು ಪ್ರಮುಖ ಸ್ಥಳಗಳಲ್ಲಿ ವಾಹನಗಳು ಮಿತಿ ಮೀರಿದ ವೇಗದಲ್ಲಿ ಸಾಗುವುದಕ್ಕೆ ನಿಯಂತ್ರಣ ಹಾಕುವ ದೃಷ್ಟಿಯಿಂದ ಸಂಚಾರಿ ಪೊಲೀಸರನ್ನು ನಿಯೋಜಿಸಿ ದಂಡ ವಿಧಿಸುವ ಕಾರ್ಯವನ್ನು ಆರಂಭಿಸಲಾಗುವುದು. –ಪ್ರತಾಪ್ ಸಿಂಗ್ ಥೋರಟ್, ಡಿವೈಎಸ್‌ಪಿ, ಬಂಟ್ವಾಳ
ಇಲಾಖೆಗೆ ಮನವಿ
ನಮ್ಮ ಭಾಗದ ಹೆದ್ದಾರಿಯಲ್ಲಿ ವಾಹನಗಳ ವೇಗ ಮಿತಿಮೀರಿದ್ದು, ಅಪಘಾತಗಳು ಕೂಡ ಹೆಚ್ಚುತ್ತಿದೆ. ಕಳೆದ ಜ. 25ರಂದು ನಮಗೂ ಕೂಡ ಅಪಘಾತದ ಅನುಭವವಾಗಿದೆ. ಇಂಡಿಕೇಟರ್ ಹಾಕಿ ನಾನು ಕಾರನ್ನು ಮನೆಗೆ ತಿರುಗಿಸುತ್ತಿದ್ದ ವೇಳೆ ಹಿಂದಿನಿಂದ ಅತೀ ವೇಗದಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಹೆದ್ದಾರಿಯಲ್ಲಿ ವೇಗ ನಿಯಂತ್ರಣ, ಅಪಘಾತಗಳ ಸೂಚನೆಗಳನ್ನು ಹಾಕುವುದಕ್ಕೆ ಹೆದ್ದಾರಿ ಇಲಾಖೆಗೆ ಮನವಿಯನ್ನೂ ಮಾಡಿದ್ದೇವೆ. –ರಾಜೇಂದ್ರ ಕುಮಾರ್ ಮಣ್ಣಾಪು, ಜಕ್ರಿಬೆಟ್ಟು ನಿವಾಸಿ