ಉಡುಪಿ: ಮಿತಿಮೀರಿದ ವೇಗ, ಸಹಿತ ನಾನಾ ಕಾರಣಗಳಿಂದ ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಜಿಲ್ಲೆಯಲ್ಲಿ ಪ್ರತೀ ವರ್ಷ ಸರಾಸರಿ 110ರಿಂದ 120 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗುತ್ತವೆ. ಸುಮಾರು 250ರಿಂದ 270 ಸಾವು ಸಂಭವಿಸುತ್ತವೆ. ದಾಖಲಾಗುವ ಪ್ರಕರಣಗಳ ದುಪ್ಪಟ್ಟು ಸಂಖ್ಯೆಯಲ್ಲಿ ಸಾವು ಸಂಭವಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
6 ತಿಂಗಳುಗಳಲ್ಲಿ 105 ಸಾವು:
ಉಡುಪಿ ಜಿಲ್ಲೆಯಲ್ಲಿ ಆರು ತಿಂಗಳುಗಳಲ್ಲಿ 105 ಮಂದಿ ಮೃತಪಟ್ಟಿದ್ದಾರೆ. 101 ಮಂದಿ ರಸ್ತೆ ಅಪಘಾತದಲ್ಲಿ. ಇದೇ ಪ್ರಕರಣದಲ್ಲಿ 35 ಮಂದಿ ಗಾಯಗೊಂಡಿದ್ದಾರೆ. ಮಾರಣಾಂತಿಕವಲ್ಲದ ರಸ್ತೆ ಅಪಘಾತದಲ್ಲಿ 343 ಗಂಭೀರ ಸ್ವರೂಪ, 67 ಸಾಧಾರಣ ಹಾಗೂ 28 ಮಂದಿ ಸಣ್ಣಪುಟ್ಟ ಗಾಯಗೊಂಡವರಾಗಿ ದ್ದಾರೆ. ವರ್ಷಂಪ್ರತಿ ಈ ಸಂಖ್ಯೆ ಅಧಿಕವಾಗುತ್ತಿದೆ.
ಉಡುಪಿ ಸಹಿತ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರತಿವರ್ಷ ದಾಖಲಾಗುವ ಅಪರಾಧ ಪ್ರಕರಣಗಳ ಪೈಕಿ ಶೇ.50ರಿಂದ 60 ಪ್ರಕರಣಗಳು ರಸ್ತೆ ಅಪಘಾತದ್ದೇ. ಪೊಲೀಸ್ ಇಲಾಖೆಯ ಅಂಕಿ ಅಂಶದ ಪ್ರಕಾರ ರಸ್ತೆ ಅಪಘಾತದಿಂದ ಉಡುಪಿ ಜಿಲ್ಲೆಯಲ್ಲಿ ಮೃತರಾಗುವವರ ಸರಾಸರಿ ಸಂಖ್ಯೆ 250ರಿಂದ 270.
ಅಮಾಯಕರ ಬಲಿ
ಅತ್ಯಾಧುನಿಕ ಶೈಲಿಯ ದ್ವಿಚಕ್ರ, ಕಾರು ಸಹಿತ ಇತರ ವಾಹನಗಳು, ಅತೀ ವೇಗದ ಚಾಲನೆ, ಅಸಮರ್ಪಕ ಹಾಗೂ ಕಳಪೆ ರಸ್ತೆ ಕಾಮಗಾರಿಯ ಪರಿಣಾಮ ಅದೆಷ್ಟೋ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಈ ಸಾವಿನ ಜತೆಗೆ ಗಂಭೀರ ಸ್ವರೂಪದ ಪ್ರಕರಣಗಳು ಸಾವಿರಕ್ಕೂ ಮಿಕ್ಕಿವೆ. ಇದರ ಹೊರತಾಗಿ ರಾಜಿ ಸಂಧಾನ ಮಾಡಿಕೊಳ್ಳುವ ಪ್ರಕರಣಗಳೂ ಸಾಕಷ್ಟಿವೆ.
ರಸ್ತೆ ನಿಯಮಾವಳಿ ಉಲ್ಲಂ ಸು ತ್ತಿ ರುವುದರಿಂದ ಅಪಘಾತ ಪ್ರಕರಣಗಳು ನಡೆಯುತ್ತಿವೆ. ಮೋಟಾರು ವಾಹನ ಕಾಯ್ದೆ ಉಲ್ಲಂಘಿಸುವವರ ಮೇಲೆ ಕಠಿನ ಕ್ರಮ ಕೈಗೊಳ್ಳಲಾಗುವುದು.
-ಜೆ.ಪಿ.ಗಂಗಾಧರ್, ಪ್ರಾದೇಶಿಕ ಸಾರಿಗೆ ಆಯುಕ್ತರು, ಉಡುಪಿ