ಸರಕಾರಿ ಹಾಗೂ ಖಾಸಗಿ 76 ಕಾಲೇಜುಗಳಲ್ಲಿರುವ ಅಂತಿಮ ಪದವಿಗೆ 1,243 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಮುಂದಿನ ವಾರದ ಆರಂಭದಿಂದ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭವಾಗುವ ನಿರೀಕ್ಷೆ ಇದ್ದು, ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಏರಿಕೆ ಕಾಣಬಹುದು.
Advertisement
ಗುರುವಾರ ಸರಕಾರಿ ಕಾಲೇಜುಗಳಲ್ಲಿ 450 ವಿದ್ಯಾರ್ಥಿಗಳು, ಖಾಸಗಿಯಲ್ಲಿ 793 ವಿದ್ಯಾರ್ಥಿಗಳು ಆಫ್ಲೈನ್‌ನಲ್ಲಿ ಹಾಜರಾಗಿದ್ದಾರೆ. ಕಳೆದ ವಾರ ಕೊರೊನಾ ಪರೀಕ್ಷೆ ಮಾಡಿದ ಹೆಚ್ಚಿನ ವಿದ್ಯಾರ್ಥಿಗಳ ಕೈಗೆ ಪ್ರಮಾಣಪತ್ರ ಲಭಿಸಿದ್ದು, ಅವರು ಮುಂದಿನ ವಾರದಿಂದ ಕಾಲೇಜುಗಳಿಗೆ ಆಗಮಿಸುವ ನಿರೀಕ್ಷೆ ಇದೆ. ಗುರುವಾರದಂದು ಕಾಲೇಜು ದಿನವಿಡೀ ನಡೆದರೂ ನೋಟ್ಸ್‌ಗಳನ್ನು ಅಪ್‌ಡೇಟ್ ಮಾಡುವುದು, ಪ್ರಾಯೋಗಿಕ ತರಗತಿ, ಈ ಹಿಂದೆ ಆನ್‌ಲೈನ್ ಪಠ್ಯದಲ್ಲಿ ಅರ್ಥವಾಗದ ವಿಷಯಗಳನ್ನು ಮತ್ತೆ ಬೋಧಿಸುವುದು ಈ ಹೀಗೆ ವಿದ್ಯಾರ್ಥಿಗಳನ್ನು ಮತ್ತೆ ಅಫ್ಲೈನ್ ತರಗತಿಗೆ ಒಗ್ಗಿಸಿಕೊಳ್ಳಲಾಗುತ್ತಿದೆ. ಕೆಲವು ಕಾಲೇಜುಗಳು ಶುಕ್ರವಾರ ಮತ್ತು ಶನಿವಾರ ರಜೆ ಘೋಷಿಸಿವೆ.
ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಅಪ್ಪಾಜಿ ಗೌಡ ಅವರು ಉದಯವಾಣಿಗೆ ಪ್ರತಿಕ್ರಿಯಿಸಿ, ಗುರುವಾರದಂದು ಸರಕಾರಿ ಕಾಲೇಜಿನಲ್ಲಿ ದ.ಕ.ದಲ್ಲಿ 215, ಉಡುಪಿಯಲ್ಲಿ 232 ಹಾಗೂ ಕೊಡಗಿನಲ್ಲಿ 3 ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಿದ್ದಾರೆ. ಬುಧವಾರಕ್ಕೆ ಹೋಲಿಕೆ ಮಾಡಿದರೆ ಗುರುವಾರದಂದು ಶೇ. 6ರಷ್ಟು ಪ್ರಗತಿ ಕಂಡಿದೆ. ಸೋಮವಾರದಿಂದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಗಡಿನಾಡ ವಿದ್ಯಾರ್ಥಿಗಳ ಸಮಸ್ಯೆ
ಮಂಗಳೂರಿನಲ್ಲಿರುವ ಕಾಲೇಜುಗಳಲ್ಲಿ ಕಾಸರಗೋಡು ಕಡೆಯಿಂದಲೂ ಹೆಚ್ಚಿನ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಆದರೆ ರೈಲು ಸಂಚಾರ ಆರಂಭವಾಗದ ಕಾರಣ ಕಾಸರಗೋಡಿನ ವಿದ್ಯಾರ್ಥಿಗಳು ಮಂಗಳೂರು ಕಡೆಯ ಕಾಲೇಜುಗಳಿಗೆ ಬರಲು ಅನಾನುಕೂಲವಾಗಿದೆ. ಬಸ್ ಸಂಚಾರ ಆರಂಭವಾದರೂ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಕೆಲವು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ.
Related Articles
Advertisement