Advertisement

ಕರಾವಳಿಯಲ್ಲಿ ಹೆಚ್ಚಿದ ಸೋಂಕು

11:05 PM Jul 27, 2021 | Team Udayavani |

ಹೊಸದಿಲ್ಲಿ: ಶೀಘ್ರದಲ್ಲಿಯೇ ಸೋಂಕಿನ ಮೂರನೇ ಅಲೆ ಅಪ್ಪಳಿಸಲಿದೆ ಎಂಬ ಆತಂಕದ ನಡುವೆಯೇ ಸಮಾಧಾನದ ವಿಚಾರವೊಂದು ಹೊರಬಿದ್ದಿದೆ. ಪ್ರಸ್ತುತ ದೇಶದ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾತ್ರ ಹೆಚ್ಚಿನ ಪ್ರಮಾಣದ ಸೋಂಕು ಪ್ರಕರಣಗಳಿವೆ. ಜು.25ಕ್ಕೆ ಮುಕ್ತಾಯವಾದ ವಾರದಲ್ಲಿ ದೇಶದ 700 ಜಿಲ್ಲೆಗಳ ಲೆಕ್ಕಾಚಾರ ಗಮನಿಸಿದಾಗ 54 ಜಿಲ್ಲೆಗಳಲ್ಲಿ ಮಾತ್ರ ಸರಾಸರಿ 100 ಕೇಸುಗಳು ದೃಢಪಟ್ಟಿವೆ.

Advertisement

ಕೇರಳದ ಜಿಲ್ಲೆಗಳಲ್ಲಿ 100ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದ 12 ಜಿಲ್ಲೆಗಳಲ್ಲಿ 7 ದಿನಗಳ ಅವಧಿಯಲ್ಲಿ  100 ಕೇಸುಗಳು ದೃಢವಾಗಿವೆ. ಕೇರಳದ 14, ಮಹಾರಾಷ್ಟ್ರದ 12, ಆಂಧ್ರಪ್ರದೇಶ 8, ತಮಿಳುನಾಡು 6, ಕರ್ನಾಟಕದ 5 ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಸೋಂಕು ದೃಢಪಟ್ಟಿದೆ.

ಪರೀಕ್ಷೆಯಲ್ಲಿ ಕರ್ನಾಟಕಕ್ಕೆ 5ನೇ ಸ್ಥಾನ: ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸುತ್ತಿರುವುದರಿಂದಲೇ ಕೇರಳದಲ್ಲಿ ಪ್ರತೀ ದಿನ ಸೋಂಕು ಸಂಖ್ಯೆ ಹೆಚ್ಚಾಗುತ್ತಿದೆ. ಜು.17-24ರ ವರೆಗಿನ ವಾರವನ್ನು ಪರಿಗಣಿಸಿದರೆ ಪ್ರತೀ 10 ಲಕ್ಷಕ್ಕೆ ಕೇರಳದಲ್ಲಿ 3,604, ಅಸ್ಸಾಂನಲ್ಲಿ 3,531, ದೆಹಲಿ 3,211, ತೆಲಂಗಾಣ 2,975, ಕರ್ನಾಟಕದಲ್ಲಿ 2,090 ಪರೀಕ್ಷೆಗಳು ನಡೆದಿವೆ.

14 ಜಿಲ್ಲೆಗಳಲ್ಲಿ: ದೇಶದ 94 ಜಿಲ್ಲೆಗಳಲ್ಲಿ ಸರಾಸರಿ 1 ಸಾವು ದೃಢಪಟ್ಟಿದೆ. ಈ ಪೈಕಿ ಕರ್ನಾಟಕದ 14 ಜಿಲ್ಲೆಗಳು, ಮಹಾರಾಷ್ಟ್ರದ 27, ಕೇರಳದ 14, ಒಡಿ ಶಾದ13, ತಮಿಳುನಾಡಿನ 11 ಜಿಲ್ಲೆಗಳಲ್ಲಿ ಸರಾಸರಿ 1 ಸಾವು ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next