Advertisement
ಪೂರ್ವ ಕರಾವಳಿಯಲ್ಲಿ ಈಗಾಗಲೇ ಯಾಂತ್ರಿಕ ಮೀನುಗಾರಿಕೆ ಆರಂಭಗೊಂಡಿದೆ. ಕೇರಳದ ಗೋಲಾಯಿ ಮತ್ತು ಆಂಧ್ರಪ್ರದೇಶದ ಬೂತಾಯಿ ಮೀನು ಇಲ್ಲಿಗೆ ಲಾರಿ ಮೂಲಕ ಬರುತ್ತಿವೆ. ಹಾಗಾಗಿ ಅಲ್ಲಿನ ಮೀನುಗಳನ್ನು ತರಿಸಿ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ. ಮಲ್ಪೆ ಬಂದರಿಗೆ ಪ್ರತಿನಿತ್ಯ 15ರಿಂದ 20 ಲಾರಿಗಳಿಂದ ಸುಮಾರು 75 ಟನ್‌ಗಳಷ್ಟು ಮೀನುಗಳು ಬರುತ್ತಿದೆ. ಚಿಲ್ಲರೆ ಮೀನು ಮಾರಾಟಗಾರರಿಗೆ ರಖಂ ಆಗಿ ಮಾರಾಟವಾಗುತ್ತಿದೆ.
Related Articles
Advertisement
ನಾಡ ದೋಣಿ ಮೀನುಗಾರಿಕೆಗೆ ಮಳೆಗಾಳಿ ಪೂರಕ
ಕಳೆದ ಒಂದು ವಾರದಿಂದ ಗಾಳಿ ಮಳೆಯಾಗುತ್ತಿದ್ದು ಗುಡ್ಡಗಾಡಿನ ನೆರೆನೀರು ಹೊಳೆ ಮೂಲಕ ಬಂದು ಸಮುದ್ರ ಸೇರಿದೆ. ಪ್ರಸ್ತುತ ಸಮುದ್ರ ನಾಡದೋಣಿ ಮೀನುಗಾರಿಕೆಗೆ ಪೂರಕವಾಗಿದೆ. ಆದರೆ ಎರಡು ಮೂರು ದಿನ ಮಳೆ ಗಾಳಿಯ ವಾತಾವರಣ ಇರುವುದರಿಂದ ನಾಡದೋಣಿಗಳು ಸಮುದ್ರಕ್ಕೆ ಇಳಿಯಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ನಾಡದೋಣಿ ಮೀನುಗಾರರು.
ಸಿಗಡಿ ಸಿಕ್ಕರೆ ಬಂಪರ್: ಈ ಬಾರಿ ಇದುವರೆಗೂ ನಾಡದೋಣಿ ಮೀನುಗಾರಿಕೆ ನಡೆಸಲಾಗಿಲ್ಲ. ಒಂದು ವಾರದಲ್ಲಿ ಸುರಿದ ಮಳೆಗಾಳಿಗೆ ನೆರೆ ನೀರು ಸಮುದ್ರ ಸೇರಿದೆ. ಹಾಗಾಗಿ ಉತ್ತಮ ಮೀನುಗಾರಿಕೆ ಆಗುವ ಲಕ್ಷಣ ಇದೆ. ಕಡಲಚಿನ್ನ ಸಿಗಡಿ ಮೀನು ಒಂದು ವಾರ ನಾಡದೋಣಿ ಬಲೆಗೆ ಬಿದ್ದರೆ ಮಳೆಗಾಲದ ನಾಡದೋಣಿ ಮೀನುಗಾರಿಕೆಯ ಎರಡು ತಿಂಗಳ ಸಂಪಾದನೆ ವಾರದಲ್ಲಿ ಗಳಿಸುವ ಸಾಧ್ಯತೆ ಇದೆ. – ಸುಂದರ ಪಿ. ಸಾಲ್ಯಾನ್, ಅಧ್ಯಕ್ಷರು, ಮಲ್ಪೆ ನಾಡದೋಣಿ ಮೀನುಗಾರರ ಸಂಘ
ಆಂಧ್ರ, ಕೇರಳದಿಂದ ಮೀನು: ಪ್ರತೀ ವರ್ಷ ಮಳೆಗಾಲ ಆರಂಭವಾದ ಬಳಿಕ ಹೊರರಾಜ್ಯದ ಮೀನನ್ನು ತಂದು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬಾರಿ ಆಂಧ್ರಪ್ರದೇಶ ಮತ್ತು ಕೇರಳದ ಮೀನು ಬರುತ್ತಿದೆ. ಗೋಲಾಯಿ, ಬೂತಾಯಿ ಮೀನು ಮಾತ್ರ ಬರುತ್ತಿವೆ. ಇಲ್ಲಿನ ನಾಡದೋಣಿಗೆ ಮೀನುಗಳು ದೊರೆತಾಗ ಹೊರರಾಜ್ಯದ ಮೀನುಗಳಿಗೆ ಬೇಡಿಕೆ ಕಳೆದುಕೊಳ್ಳುತ್ತದೆ. –ಪ್ರದೀಪ್ ಟಿ. ಮೆಂಡನ್, ಮೀನುಗಾರರು