Advertisement
ಬಚ್ಚಲು ಗುಂಡಿ : ಪ್ರತಿ ಮನೆಯೂ ಶೌಚಾಲಯ ಹೊಂದುವುದು ಮಾತ್ರವಲ್ಲದೆ ಬಚ್ಚಲುಗುಂಡಿ (ಸೋಕ್ ಪಿಟ್) ಕೂಡ ಹೊಂದಬೇಕೆಂಬ ಉದ್ದೇಶದಿಂದ ಗ್ರಾ.ಪಂ.ಗಳ ಮೂಲಕ ಬಚ್ಚಲುಗುಂಡಿ ನಿರ್ಮಾಣದ ಯೋಜನೆ ಯನ್ನು ಉಡುಪಿ ಜಿಲ್ಲೆಯಲ್ಲಿಯೂ ನರೇಗಾ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಬಚ್ಚಲಿನ ನೀರು, ಪಾತ್ರೆ ತೊಳೆದ ನೀರು ಸಹಿತ ಮನೆಯಿಂದ ಹೊರಬರುವ ಕೊಳಚೆ ನೀರನ್ನು ನೈಸರ್ಗಿಕ ರೀತಿ ಯಲ್ಲಿ ಶುದ್ಧೀಕರಿಸುವುದು/ ಜಲ ಮರು ಪೂರಣಕ್ಕೆ ಬಳಕೆ ಮಾಡಿಕೊಳ್ಳುವುದು ಇದರ ಮುಖ್ಯ ಉದ್ದೇಶ.
Related Articles
Advertisement
ನರೇಗಾ ಮೂಲಕ ಖರ್ಚು : ವೈಯಕ್ತಿಕ ಬಚ್ಚಲು ಗುಂಡಿ ನಿರ್ಮಾಣಕ್ಕೆ 14ರಿಂದ 17 ಸಾವಿರ ರೂ. ಅಂದಾಜು ವೆಚ್ಚ ನಿಗದಿ ಮಾಡಲಾಗಿದೆ. ಇದರಲ್ಲಿ ಕೂಲಿ, ಸಾಮಗ್ರಿ ಎರಡನ್ನೂ ಕೂಡ ನರೇಗಾ ಮೂಲಕವೇ ಪಡೆದುಕೊಳ್ಳಲು ಅವಕಾಶವಿದೆ. ಜಾಬ್‌ಕಾರ್ಡ್ ಹೊಂದಿರುವವರು ನರೇಗಾದಡಿ ಕೆಲಸ ಮಾಡಿಸಿಕೊಳ್ಳಬಹುದು. ವೈಯಕ್ತಿಕ ಮಾತ್ರವಲ್ಲದೆ 4-5 ಮನೆಗಳಿಗೆ ಒಂದು ಸಾಮೂಹಿಕ ಬಚ್ಚಲು ಗುಂಡಿ, ಶಾಲೆ, ಹಾಸ್ಟೆಲ್ ಮೊದಲಾದೆಡೆ ಸಾಮೂಹಿಕ ಬಚ್ಚಲು ಗುಂಡಿ ನಿರ್ಮಿಸಬಹುದು.
11,887 ಕುಟುಂಬಗಳಿಗೆ ಉದ್ಯೋಗ : ಉಡುಪಿ ಜಿಲ್ಲೆಯಲ್ಲಿ 2020-21ನೇ ಸಾಲಿಗೆ 5.12 ಲಕ್ಷ ಮಾನವ ದಿನಗಳ ಕೆಲಸದ ಗುರಿ ನಿಗದಿ ಮಾಡಲಾಗಿದ್ದು 3.56 ಲಕ್ಷ ದಿನಗಳ ಕೆಲಸ ಈಗಾಗಲೇ ನಡೆದಿದೆ. ಬಿಲ್ಲಾಡಿ ಪಂ. 12,113, ಕಾಡೂರು ಪಂ. 8,941, ಕೋಟ ಪಂ. 8,063, ಹಕ್ಲಾಡಿ ಪಂ. 7,312, ಆವರ್ಸೆ ಪಂ. 6,706 ಮಾನವ ದಿನಗಳ ಉದ್ಯೋಗ ನೀಡಿದ ಸಾಧನೆ ಮಾಡಿ ಮುಂಚೂಣಿಯಲ್ಲಿವೆ. ಜಿಲ್ಲೆಯಲ್ಲಿ ಈವರೆಗೆ 11,887 ಕುಟುಂಬಗಳಿಗೆ ನರೇಗಾದಡಿ ಉದ್ಯೋಗ ನೀಡಿ, 2,266 ಹೊಸ ಕಾಮಗಾರಿಗಳನ್ನು ಮಾಡಲಾಗಿದೆ.
ಕುಂದಾಪುರ ತಾ.ಪಂ. ವ್ಯಾಪ್ತಿಯಲ್ಲಿ 45 ಗ್ರಾ.ಪಂ.ಗಳಲ್ಲಿ 1,18,580 ಮಾನವ ದಿನಗಳ ಕೆಲಸವಾಗಬೇಕಿದ್ದು ಸೆ.30ಕ್ಕೆ 65,767 ಕೆಲಸಗಳಾಗಬೇಕಿತ್ತು. 62,604 ದಿನಗಳ ಕೆಲಸವಾಗಿದ್ದು 95 ಶೇ. ಸಾಧನೆಯಾಗಿದೆ. ಬೈಂದೂರು ತಾ.ಪಂ.ನ 15 ಗ್ರಾ.ಪಂ.ಗಳಲ್ಲಿ 38,100 ದಿನಗಳ ಕೆಲಸದಲ್ಲಿ 21,130 ಕೆಲಸವಾಗಬೇಕಿದ್ದು 21,968 ಕೆಲಸವಾಗಿ ಗುರಿಮೀರಿದ ಸಾಧನೆಯಾಗಿದೆ.
ಹೆಚ್ಚು ಜನ ಪ್ರಯೋಜನ ಪಡೆದುಕೊಳ್ಳಬೇಕೆಂದು ಕರಾವಳಿ ಜಿಲ್ಲೆಗಳಿಗೆ ಅನುಕೂಲವಾಗುವ ಕಾಮಗಾರಿಗಳಿಗೆ ಅವಕಾಶ ನೀಡಲಾಗಿದೆ. ವೈಯಕ್ತಿಕ, ಸಾಮುದಾಯಿಕ ಕಾಮಗಾರಿಗಳನ್ನು ಹೆಚ್ಚು ಜನ ಮಾಡಿಸುವ ಮೂಲಕ ಅನುದಾನದ ಬಳಕೆಯಾಗಬೇಕು.-ಪ್ರೀತಿ ಗೆಹ್ಲೋಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಡುಪಿ ಜಿ.ಪಂ. -ವಿಶೇಷ ವರದಿ