ಕಾರವಾರ : ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಬೇಕು ಎಂಬ ಅಭಿಯಾನ ಜೋರಾಗಿದೆ. ಇದಕ್ಕಾಗಿ ಜಿಲ್ಲೆಯ ಯುವಕರು ಟ್ವಿಟರ್ ಅಭಿಯಾನ ಮಾಡಿ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ .ಟ್ವಿಟರ್ ಅಭಿಯಾನ ಜೋರಾದ ಹಿನ್ನೆಲೆ ಯಲ್ಲಿ ಸಚಿವ ಶಿವರಾಮ
ಹೆಬ್ಬಾರ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆಗೆ ಬೆಂಬಲ ನೀಡಿದ್ದಾರೆ.
ಶಾಸಕ, ಸ್ಪೀಕರ್ ಕಾಗೇರಿ ಈ ವಿಷಯ ಕುರಿತು ಮುಖ್ಯಮಂತ್ರಿ ಜತೆ ಮಾತಾಡುವುದಾಗಿ ಹೇಳಿ ಟ್ವಿಟ್ ಮಾಡಿದ್ದಾರೆ .ಶಾಸಕ ಸುನಿಲ್ ನಾಯ್ಕ ಜಿಲ್ಲೆಯಲ್ಲಿ ಎಲ್ಲೇ ಮಲ್ಟಿ ಸ್ಪೆಷಲ್ ಆಸ್ಪತ್ರೆಯನ್ನು ಸರ್ಕಾರ ಮಾಡಿದರೂ ತನ್ನ ಬೆಂಬಲ ಇದೆ ಎಂದು ಟ್ವಿಟ್ ಮಾಡಿದ್ದಾರೆ.
ಶಾಸಕಿ ರೂಪಾಲಿ ನಾಯ್ಕ ಆ ೨ ರಂದು ಮುಖ್ಯಮಂತ್ರಿ ಜಿಲ್ಲೆಗೆ ಬರಲಿದ್ದು, ಅವರು ಈ ಬಗ್ಗೆ ಪಾಸಿಟಿವ್ ಸುದ್ದಿ ಕೊಡಲಿದ್ದಾರೆಂದು ಹೇಳಿದ್ದಾರೆ. ಈತನಕ 11000 ಯುವಕರು ಮಲ್ಟಿ ಸ್ಪೆಶಲ್ ಆಸ್ಪತ್ರೆ ಬೇಕೆಂದು ಟ್ವೀಟ್ ಮಾಡಿದ್ದಾರೆ. ಅಭಿಯಾನ ಮುಂದುವರಿದಿದೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಲ್ ಆಸ್ಪತ್ರೆ ಬೇಕು ಎಂಬ ಟ್ವಿಟರ್ ಅಭಿಯಾನಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಬೆಂಬಲ ಸೂಚಿಸಿದ್ದಾರೆ.
ಸುಸಜ್ಜಿತ ತುರ್ತು ಚಿಕಿತ್ಸಾ ವ್ಯವಸ್ಥೆಗೆ ಆಗ್ರಹಿಸಿ ಉತ್ತರ ಕನ್ನಡದ ಜನರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಅಹವಾಲನ್ನು ಮುಕ್ತ ಮನಸಿನಿಂದ ಆಲಿಸಿ, ಸಮಸ್ಯೆ ಬಗೆಹರಿಸುವತ್ತ ಕಾರ್ಯಪ್ರವೃತ್ತವಾಗಬೇಕು ಎಂದು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.