Advertisement
ಇದು ಈ ವಲಯಗಳಲ್ಲಿನ ಇತರ ಸಿಬ್ಬಂದಿಗಳಲ್ಲೂ ಆತಂಕ ಮೂಡಿಸಿದೆ. ಸೋಂಕು ದೃಢಪಟ್ಟವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಒಟ್ಟು ಹತ್ತು ಮಂದಿಯಲ್ಲಿ, ಮಹಾರಾಷ್ಟ್ರ ಮತ್ತು ದೆಹಲಿಯಿಂದ ಬಂದ ತಲಾ ಒಬ್ಬರಲ್ಲಿ ಸೋಂಕು ಇರುವುದು ಖಚಿತವಾಗಿದೆ. ಕೋವಿಡ್ 19 ಲಕ್ಷಣವಿದ್ದು, ಸೋಂಕು ಪರೀಕ್ಷಗೆ ಒಳಪಟ್ಟ 12 ಜನರಲ್ಲಿ ಹಾಗೂ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಉಳಿದಂತೆ ಮೂರು ಸೋಂಕು ಪ್ರಕರಣಗಳಲ್ಲಿ ಸಂಪರ್ಕ ಪತ್ತೆಯಾಗಿಲ್ಲ.
Related Articles
Advertisement
ಸೋಂಕಿತರ ಸಂಪರ್ಕದಲ್ಲಿದ್ದವರಿಗೆ ಸೋಂಕು: ನಗರದಲ್ಲಿ ಶನಿವಾರ ಒಂದೇ ದಿನ 12ಜನ ಸೋಂಕಿತರ ಸಂರ್ಪಕಿತರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ದ್ವಿತೀಯ ಸಂರ್ಪಕಿತರೂ ಒಬ್ಬರಿದ್ದಾರೆ. ಪೌಟ್ರಿಟೌನ್‌ನಲ್ಲಿ ಸೋಂಕು ದೃಢಪಟ್ಟ ಸೋಂಕಿತರ ದ್ವಿತೀಯ ಸಂಪರ್ಕದಲ್ಲಿದ್ದ 62 ವರ್ಷದ ಮಹಿಳೆ. ಕಲಾಸಿಪಾಳ್ಯದಲ್ಲಿ ಸೋಂಕು ದೃಢಪಟ್ಟವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಲಾಸಿಪಾಳ್ಯದ 19 ವರ್ಷದ ಯುವಕ ಹಾಗೂ ನಾರಾಯಣ ಸ್ವಾಮಿ ರಸ್ತೆಯ 18 ವರ್ಷದ ಯುವಕನಿಗೆ ಸೋಂಕು ತಗುಲಿದೆ.
ಹನುಮಂತ ನಗರದಲ್ಲಿ ಸೋಂಕು ದೃಢಪಟ್ಟ ವ್ಯಕ್ತಿಯ ಸಂಪರ್ಕದಲ್ಲಿದ್ದ 20 ವರ್ಷದ ಯುವಕ ಹಾಗೂ 46 ವರ್ಷದ ಮಹಿಳೆಗೆ ಸೋಂಕು ಹಬ್ಬಿದೆ. ಅನ್ನೈಪ್ಪ ಬ್ಲಾಕ್‌ನ ಕುಮಾರ ಪಾರ್ಕ್ ವ್ಯಾಪ್ತಿಯಲ್ಲಿ ಸೋಂಕು ದೃಢಪಟ್ಟವರ ಸಂಪರ್ಕದಲ್ಲಿದ್ದ 4 ವರ್ಷದ ಹೆಣ್ಣುಮಗುವಿಗೆ ಹಾಗೂ 6368 ರೋಗಿಯ ಸಂಪರ್ಕದಲ್ಲಿದ್ದ ಶೇಷಾದ್ರಿಪುರಂನ ಇಬ್ಬರು ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದೆ.
ರೋಗಿ ಸಂಖ್ಯೆ 6169 ಸಂಪರ್ಕದಲ್ಲಿದ್ದ ಹೊಂಗಸಂದ್ರದ 54 ವರ್ಷದ ಪುರುಷ, ಐದು ವರ್ಷದ ಹೆಣ್ಣು ಮಗು ಹಾಗೂ 24 ವರ್ಷದ ಯುವತಿ ಸೇರಿ ಮೂವರಲ್ಲಿ ಸೋಂಕು ದೃಢಪಟ್ಟಿದೆ. ರೋಗಿ ಸಂಖ್ಯೆ 4848ರ ಸಂಪರ್ಕದಲ್ಲಿದ್ದ ಚೊಕ್ಕ ಸಂದ್ರದ 35 ವರ್ಷದ ಪುರುಷರೊಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಮೂರು ಜನ ಮೃತ: ಸೋಂಕಿನಿಂದ ಮೃತರ ಸಂಖ್ಯೆ ಹೆಚ್ಚುತ್ತಿದ್ದು, ಶನಿವಾರ ಮೂವರು ಮೃತಪಟ್ಟಿದ್ದಾರೆ. 23 ವರ್ಷದ ಯುವಕ ಹಾಗೂ 62 ವರ್ಷದ ಪುರುಷರೊಬ್ಬರು ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಯಾವುದೇ ಪ್ರಯಾಣದ ಇತಿಹಾಸವಿಲ್ಲದ, ಸೋಂಕಿತರ ಸಂಪರ್ಕವೂ ಇಲ್ಲದ ನಾರಾಯಣ ಪಿಳ್ಳೆç ಸ್ಟ್ರೀಟ್‌ನ 70 ವರ್ಷದ ಮಹಿಳೆ ಕೋವಿಡ್ 19ಗೆ ಬಲಿಯಾಗಿದ್ದಾರೆ. ಆದರೆ, ಇವರ ವಿವರ ಬುಲೆಟಿನ್‌ಗೆ ಸೇರ್ಪಡೆಯಾಗಿಲ್ಲ. ನಗರದಲ್ಲಿ ಒಟ್ಟು 31 ಜನ ಸಾವಿಗೀಡಾದಂತಾಗಿದೆ.