Advertisement

ವಿಧವೆಯರ ಮಾಸಾಶನ ಹೆಚ್ಚಿಸಿ

11:55 AM Jun 25, 2018 | Team Udayavani |

ಬೆಂಗಳೂರು: “ರಾಜ್ಯ ಸರ್ಕಾರ ನೀಡುತ್ತಿರುವ ಮಾಸಾಶನ ಮೊತ್ತದಿಂದ ವಿಧವೆಯರ ಸಬಲೀಕರಣ ಸಾಧ್ಯವಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯೆ ತಾರಾ ಅನುರಾಧಾ ಅಭಿಪ್ರಾಯಪಟ್ಟಿದ್ದಾರೆ.

Advertisement

ಪರಿಹಾರ ಪ್ರತಿಷ್ಠಾನದಿಂದ ಆರ್‌.ವಿ. ಟೀಚರ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ವಿಧವೆಯರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರ ವಿಧವೆಯರ ಸಬಲೀಕರಣಕ್ಕಾಗಿ ತಿಂಗಳಿಗೆ ಕೇವಲ 500 ರೂ. ನೀಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಈ ದಿನಗಳಲ್ಲಿ 500 ರೂ.ಗಳಿಂದ ಇಡೀ ತಿಂಗಳು ಜೀವನ ನಡೆಸಲು ಸಾಧ್ಯವೇ? ಈ ಬಗ್ಗೆ ಸರ್ಕಾರ ಚಿಂತನೆ ನಡೆಸಿ ಮೊತ್ತ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪರಿಹಾರ ಪ್ರತಿಷ್ಠಾನವು ವಿಧವೆಯರಿಗಾಗಿ ತಿಂಗಳಿಗೆ 600 ರೂ.ಗಳ ದವಸ-ಧಾನ್ಯ ಒದಗಿಸುತ್ತಿದೆ. ವಿಧವಾ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿದೆ. ಈ ರೀತಿಯ ಕಾರ್ಯಕ್ರಮಗಳ ನೂಲಕ ವಿಧವೆಯರು ಗೌರವಯುತವಾಗಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಒರಿಸ್ಸÕದಲ್ಲಿ ವಿಧವೆಯರ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಗೋಕುಲದಾಸ್‌ ದಂಪತಿಯನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಕಲಾವಿದರಾದ ಭಾರ್ಗವಿ ನಾರಾಯಣ, ಯಮುನಾ ಮೂರ್ತಿ, ಶಾಸಕಿ ಸೌಮ್ಯರೆಡ್ಡಿ  ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next