Advertisement

Toll ಹೆಚ್ಚಳ ಜಾರಿಗೆ ಚುನಾವಣ ಆಯೋಗ ತಡೆ: ಸೂಚನೆಯೇನು?

12:06 AM Apr 02, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆ ಪ್ರಕ್ರಿಯೆ ಮುಗಿಯುವ ವರೆಗೆ ಟೋಲ್‌ ಶುಲ್ಕ ಪರಿಷ್ಕರಣೆಯನ್ನು ಜಾರಿಗೊಳಿಸದಂತೆ ಚುನಾವಣ ಆಯೋಗವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ. ಹೀಗಾಗಿ ಸೋಮವಾರದಿಂದಲೇ ಹೆದ್ದಾರಿಗಳಲ್ಲಿ ಟೋಲ್‌ ಶುಲ್ಕ ಏರಿಕೆಯಾಗಲಿದೆ ಎಂಬ ಸುದ್ದಿಯಿಂದ ಕಂಗಾಲಾಗಿದ್ದ ಜನರಿಗೆ ಸ್ವಲ್ಪ ನೆಮ್ಮದಿ ಸಿಕ್ಕಿದೆ.

Advertisement

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ವು ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಶುಲ್ಕವನ್ನು ಸರಾಸರಿ ಶೇ. 5 ಏರಿಕೆ ಮಾಡಿ, ಎ. 1ರಿಂದ ಜಾರಿ ಮಾಡಲು ಮುಂದಾಗಿತ್ತು. ಆದರೆ ಟೋಲ್‌ ಶುಲ್ಕ ಹೆಚ್ಚಳವನ್ನು ಮುಂದೂಡಿ ಚುನಾವಣೆಯ ಬಳಿಕವೇ ಜಾರಿ ಮಾಡು ವಂತೆ ಚುನಾವಣ ಆಯೋಗವು ಪ್ರಾಧಿಕಾರಕ್ಕೆ ಸೂಚಿಸಿದೆ.
ವಿದ್ಯುತ್‌ ದರ ಪರಿಷ್ಕರಣೆಯ ಜಾರಿಯನ್ನೂ ಮುಂದೂಡುವಂತೆ ಆಯೋಗ ಸೂಚಿಸಿದೆ. ರಾಜ್ಯ ವಿದ್ಯುತ್‌ ನಿಯಂತ್ರಣ ಆಯೋಗಗಳು ತಮ್ಮ ವಿದ್ಯುತ್‌ ದರ ಪರಿಷ್ಕರಣೆ ಕೈಗೊಳ್ಳಬಹುದು. ಆದರೆ ಪರಿಷ್ಕೃತ ದರಗಳು ಲೋಕಸಭೆ ಚುನಾವಣೆ ಮುಗಿದ ಅನಂತರವೇ ಜಾರಿಯಾಗಬೇಕು ಎಂದು ಚು. ಆಯೋಗ ಹೇಳಿದೆ.

ಆಯೋಗದ ಸೂಚನೆಯೇನು?
ಎ. 1ರಿಂದ ಟೋಲ್‌ ಶುಲ್ಕ ಸರಾಸರಿ ಶೇ. 5 ಹೆಚ್ಚಳಕ್ಕೆ ಮುಂದಾಗಿದ್ದ ಹೆದ್ದಾರಿ ಪ್ರಾಧಿಕಾರ
ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಹೊಸ ಶುಲ್ಕ ಜಾರಿಗೆ ಆಯೋಗ ಸೂಚನೆ
ದರ ಪರಿಷ್ಕರಣೆ ಬಗ್ಗೆ ಕೇಂದ್ರ ಸರಕಾರದಿಂದ ಸ್ಪಷ್ಟನೆ ಕೋರಿದ್ದ ಆಯೋಗ
ವಿವಿಧ ರಾಜ್ಯಗಳಲ್ಲಿ ವಿದ್ಯುತ್‌ ದರ
ಪರಿಷ್ಕರಣೆಗೂ ತಡೆ ನೀಡಿದ ಆಯೋಗ

Advertisement

Udayavani is now on Telegram. Click here to join our channel and stay updated with the latest news.

Next