Advertisement
ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯಿಂದ ನಗರದಲ್ಲಿ ನಡೆದ “ಎಲ್ಲರಿಗೂ ಬಿಎಂಟಿಸಿ: ಬೆಂಗ ಳೂರಿನ ಚಲನಶೀಲತೆಯನ್ನು ಬದಲಿಸುವ ನಿಟ್ಟಿನಲ್ಲಿ’ ಎಂಬ ಮುಕ್ತ ಚರ್ಚಾ ವೇದಿಕೆಯಲ್ಲಿ ಮಾತನಾಡಿದ ವೇದಿಕೆಯ ಸದಸ್ಯ ವಿನಯ್, ಖಾಸಗಿ ವಾಹನದಲ್ಲಿ ಪರಸ್ಪರ ಹಂಚಿಕೊಂಡು ಪ್ರಯಾಣಿಸುವ ಖರ್ಚಿಗಿಂತ ಕಡಿಮೆ ಖರ್ಚಿನಲ್ಲಿ ಬಸ್‌ನಲ್ಲಿ ಪ್ರಯಾಣಿಸಬಹುದು ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿಸಲು ಬಿಎಂಟಿಸಿ ಬಸ್ ಪ್ರಯಾಣ ದರ ಕಡಿಮೆ ಮಾಡಬೇಕು.
Related Articles
Advertisement
ನಗರದ ಕೆಲ ಜನ ನಿಬಿಡ ಸ್ಲಂಗಳಿಗೆ ಸರಿಯಾದ ಬಸ್ ಸಂಪರ್ಕ ವ್ಯವಸ್ಥೆ ಯಿಲ್ಲ. ಹೀಗಾಗಿ, ಎಲ್ಲಾ ಸ್ಲಂ ನಿವಾಸಿಗಳು ಅನಿ ವಾರ್ಯವಾಗಿ ದ್ವಿಚಕ್ರ ವಾಹನಗಳನ್ನು ಹೊಂದು ವಂ ತಾಗಿದೆ ಎಂದರು. ಈ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಿದ ಪರಿಸರ ಬೆಂಬಲ ತಂಡದ ಲಿಯೋ ಸಲ್ಡಾನಾ , ಡೇಟಾ ಮೀಟಾ ಸಂಘದ ತೇಜಸ್, ಸಂಚಾರ ತಜ್ಞ ಸುಜಯಾ ಒಳಗೊಂಡ ತಜ್ಞರ ತಂಡ ಎಲ್ಲಾ ಸಂಘ ಟನೆಗಳ ಪ್ರತಿ ನಿಧಿಗಳ ಪ್ರಸ್ತಾವನೆಯನ್ನು ಒಪ್ಪಿಕೊಂಡು ತಮ್ಮ ಶಿಫಾ ರಸ್ಸುಗಳನ್ನು ಮಂಡಿಸಿದರು.
ತಜ್ಞರ ಶಿಫಾರಸುಗಳು: ಹೊಸ ಲೇ ಔಟ್‌ಗಳು ಅಭಿ ವೃದ್ಧಿಪಡಿಸುವಾಗ ಯೋಜನೆ ಶುಲ್ಕದ ಜತೆ ಸಂಚಾರ ಶುಲ್ಕವನ್ನು ಪಡೆಯಬೇಕು. ಈ ಹಣದಲ್ಲಿ ರಸ್ತೆ, ಹೆಚು ವರಿ ಬಸ್ ಮತ್ತು ನಿಲ್ದಾಣಗಳ ನಿರ್ಮಾಣ.
ಪ್ರತಿ ಬಸ್‌ಗೆ ಸಂಚಾರ ಸಮಯ ನಿಗದಿ: ಬಿಎಂಟಿಸಿ ಸಿಬ್ಬಂದಿ ಖುದ್ದಾಗಿ ಪ್ರತಿ ಜನನಿಬಿಡ ಪ್ರದೇಶಕ್ಕೆ ಹೋಗಿ ಅಲ್ಲಿನ ಸಂಚಾರ ಸಮಸ್ಯೆಗಳನ್ನು ತಿಳಿದುಕೊಂಡು ಪರಿ ಹಾರ ಒದಗಿಸಬೇಕು.
ನಿರ್ಭಯಾ ಕೊಠಡಿ ಸ್ಥಾಪನೆಗೆ ಚಿಂತನೆಬೆಂಗಳೂರು: ನಿರ್ಭಯಾ ಯೋಜನೆಯಡಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ನಿರೀಕ್ಷಣಾ ಕೊಠಡಿ ನಿರ್ಮಿಸಲು ಬಿಎಂಟಿಸಿ ಉದ್ದೇಶಿಸಿದೆ. ನಗರದ 12 ಟಿಟಿಎಂಸಿ ಕೇಂದ್ರ ಗಳಲ್ಲಿ ನಿರೀಕ್ಷಣಾ ಕೊಠಡಿ ನಿರ್ಮಿಸಲಿದ್ದು, ಯೋಜನೆ ಯಶ ಸ್ಸಿಗೆ ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಶ್ರಮಿಸಲಿವೆ. ನಿರೀಕ್ಷಣಾ ಕೊಠಡಿಯಲ್ಲಿ ಉತ್ತಮ ಆಸನಗಳ ವ್ಯವಸ್ಥೆ, ಕುಡಿಯುವ ನೀರು, ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ, ಬಸ್ ಸಂಚಾರ ಗಮನಿ ಸಲು ಗಾಜಿನ ಕಿಟಕಿ ಅಳವಡಿಸಲಾಗುವುದು. ಇನ್ನು ನಿರ್ಭಯಾ ಕೊಠಡಿಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಿದ್ದು, ಬೆಳಗ್ಗೆ 6ರಿಂದ ಕಾರ್ಯ ನಿರ್ವಹಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.