Advertisement

ಆಶಾ ಕಾರ್ಯಕರ್ತೆಯರ ಆತ್ಮಸ್ಥೈರ್ಯ ಹೆಚ್ಚಿಸಿ: ಡಿಸಿ

03:37 PM May 07, 2020 | mahesh |

ಮಂಡ್ಯ : ಆಶಾ ಕಾರ್ಯಕರ್ತರು ದೇಶದ ಅಭಿವೃದ್ಧಿ ಹಾಗೂ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ. ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವಂತೆ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ
ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು. ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಇಂಡುವಾಳು ಸಚ್ಚಿದಾನಂದ ಹಿತೈಷಿ ಬಳಗದ ವತಿಯಿಂದ ನಡೆದ ಆಶಾ, ಆರೋಗ್ಯ ಕಾರ್ಯಕರ್ತರು ಹಾಗೂ ಪೌರ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್‌ ಮತ್ತು ಸಮವಸ್ತ್ರ ವಿತರಿಸಿ ಮಾತನಾಡಿದರು.

Advertisement

ಕೋವಿಡ್ ಸೈನಿಕರು: ಆಶಾ ಕಾರ್ಯಕರ್ತೆಯರು ಕೋವಿಡ್ ಸೈನಿಕರಿದ್ದಂತೆ. ಪ್ರತಿ ನಿತ್ಯ ತಮ್ಮ ಜೀವದ ಹಂಗನ್ನು ತೊರೆದು ಕೆಲಸ ಮಾಡುತ್ತಿದ್ದಾರೆ. ಎಷ್ಟೋ ಜನರಿಗೆ ಆಶಾ ಕಾರ್ಯಕರ್ತೆಯರ ಕೆಲಸ ಏನು ಎಂಬುದೇ ತಿಳಿದಿಲ್ಲ. ಅವರು ಆರೋಗ್ಯ ಸಂಜೀವಿನಿಯಂತೆ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದರು.
ಪ್ರತಿ ಗ್ರಾಮ ಮಟ್ಟದಲ್ಲಿ ದಿನದ 24  ಗಂಟೆಯೂ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು, ಶುಶ್ರೂಷಕರು ಅವರಿಗೆ ಆತ್ಮವಿಶ್ವಾಸ ತುಂಬಬೇಕು ಎಂದು ಹೇಳಿದರು.

ವಿವಿಧ ರೀತಿಯಲ್ಲಿ ವಿಸ್ತರಣೆ: ಸಮಾಜ ಸಂರಕ್ಷಣೆ ಮಾಡುವ ಉದ್ದೇಶದಿಂದ ಪ್ರಧಾನಮಂತ್ರಿಯಿಂದ ಹಿಡಿದು ರಾಜ್ಯಸರ್ಕಾರ, ಜಿಲ್ಲಾಡಳಿತ ಎಲ್ಲರೂ ಸಹ ತಮ್ಮ ಜೀವದ ಹಂಗನ್ನು
ತೊರೆದು ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಕೊರೊನಾ ವಿರುದ್ಧ ವೈಜ್ಞಾನಿಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಸಂಶೋಧನೆ ಆಗಬೇಕಾಗಿರುವುದರಿಂದ ಎಚ್ಚರಿಕೆಯಿಂದ ಎಲ್ಲರೂ ಕೆಲಸ
ಮಾಡಬೇಕಿದೆ ಎಂದು ತಿಳಿಸಿದರು.

ಕೋವಿಡ್ ಜಾಗೃತಿ: ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದ ಯುವ ಮುಖಂಡ ಸಚ್ಚಿದಾನಂದ ಮಾತನಾಡಿ, ಆಶಾ ಕಾರ್ಯಕರ್ತೆಯರು, ನರ್ಸ್‌ ಗಳು ಕೋವಿಡ್ ವಿರುದ್ಧ ಮನೆ ಮನೆಗೆ
ತೆರಳಿ ಜಾಗೃತಿ ಮೂಡಿಸು ತ್ತಿದ್ದಾರೆ ಎಂದರು. ಎಎಸ್ಪಿ ಡಾ.ಶೋಭಾರಾಣಿ, ತಹಶೀಲ್ದಾರ್‌ ನಾಗೇಶ್‌, ಡಿಎಚ್‌ಒ ಡಾ.ಮಂಚೇಗೌಡ, ಡಾ.ಶಶಿಧರ್‌ ಬಸವರಾಜ್‌, ಡಾ.ಜವರೇಗೌಡ,
ಡಾ. ಚಂದ್ರಶೇಖರ್‌ ಇದ್ದರು.

ಇಡೀ ಸಮಾಜ ಕೋವಿಡ್ ವಿರುದ್ಧ ಹೋರಾಟ ಮಾಡುವ ಸ್ಥಿತಿ ನಿರ್ಮಾಣ ಆಗಬೇಕು. ಒಂದು ವರ್ಗದ ಮೂಲಕ ಸೋಂಕು ಹರಡುತ್ತಿಲ್ಲ. ನಾನಾ ರೀತಿಯಲ್ಲಿ ಸೋಂಕು ವಿಸ್ತರಣೆಯಾಗುತ್ತಿದೆ.
ಪ್ರತಿಯೊಬ್ಬರೂ ಕೊರೊನಾ ಸೋಂಕು ತಡೆಗೆ ಸಹಕರಿಸಬೇಕಿದೆ.
● ಡಾ.ವೆಂಕಟೇಶ್‌, ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next