Advertisement

ಎಸ್ಸೆಸ್ಸೆಲ್ಸಿ ಉರ್ದು ಮಾಧ್ಯಮ ಫ‌ಲಿತಾಂಶ ಹೆಚ್ಚಿಸಿ 

07:28 AM Feb 13, 2019 | Team Udayavani |

ಕೋಲಾರ: ಉರ್ದು ಮಾಧ್ಯಮದಲ್ಲಿನ ಫಲಿತಾಂಶ ಕುಸಿತ ಇಡೀ ಜಿಲ್ಲೆಯ ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದ್ದು, ಇದನ್ನು ಸರಿಪಡಿಸಲು ಕ್ರಮವಹಿಸದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾದೀತು ಎಂದು ಜಿಪಂ ಸಿಇಒ ಜಿ.ಜಗದೀಶ್‌ ಶಾಲೆಗಳ ಮುಖ್ಯ ಶಿಕ್ಷಕರಿಗೆ ಎಚ್ಚರಿಕೆ ನೀಡಿದರು. ತಮ್ಮ ಕಚೇರಿಯಲ್ಲಿ ಉರ್ದು ಪ್ರಥಮ ಭಾಷೆ ಹೊಂದಿರುವ ವಿದ್ಯಾರ್ಥಿಗಳಿಗಾಗಿ “ನನ್ನನ್ನೊಮ್ಮೆ ಗಮನಿಸಿ’ ಮಾದರಿ ಪ್ರಶ್ನೆಕೋಠಿ ಬಿಡುಗಡೆ ಮಾಡಿ  ಮಾತನಾಡಿದರು.

Advertisement

ಜಿಲ್ಲೆಯ ಪದವಿ ಪೂರ್ವ ಕಾಲೇಜು ಸೇರಿದಂತೆ ಪ್ರಥಮ ಭಾಷೆ ಉರ್ದು ಇರುವ 27 ಶಾಲೆ ಜಿಲ್ಲೆಯಲ್ಲಿದ್ದು, ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಗಮನಹರಿಸುವ ಅಗತ್ಯವಿದೆ ಎಂದು ತಿಳಿಸಿದರು.ಕಳೆದ ಹಲವು ವರ್ಷಗಳ ಫಲಿತಾಂಶ ಗಮನಿಸಿದಾಗ ಪದವಿ ಪೂರ್ವ ಕಾಲೇಜುಗಳ ಫಲಿತಾಂಶ ಕಡಿಮೆ ಬಂದಿರುವುದು ಇಡೀ ಜಿಲ್ಲೆಯ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.

ಇದನ್ನು ಸರಿಪಡಿಸಲು ಈಗಾಗಲೇ ಸ್ವತಃ ನಾನೇ ಜೂನಿಯರ್‌ ಕಾಲೇಜುಗಳ ಉಪಪ್ರಾಂಶುಪಾಲರ ಸಭೆ ನಡೆಸಿದ್ದೇನೆಂದರು. ಡಿಡಿಪಿಇ ಕೆ.ರತ್ನಯ್ಯ, ಈಗಾಗಲೇ ಜೂನಿಯರ್‌ ಕಾಲೇಜುಗಳ ಫಲಿತಾಂಶ ಕುಸಿತ ತಪ್ಪಿಸಲು ಪ್ರತಿ ಸಂಸ್ಥೆಗೂ ಓರ್ವ ನೋಡೆಲ್‌ ಅಧಿ ಕಾರಿಯನ್ನು ನೇಮಿಸಲಾಗಿದೆ. ಅಲ್ಲಿ ಕಲಿಕೆ ದೃಢೀಕರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ನಿರಂತರವಾಗಿ ಪರಿಶೀಲನೆ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ವರ್ಕ್‌ಶೀಟ್‌ ಮತ್ತು ಆರು ಸೆಟ್‌ ಪ್ರಶ್ನೆಪತ್ರಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕಟ್ಟಪ್ಪಣೆ ಮಾಡಲಾಗಿದೆ. ಮಕ್ಕಳಿಗೆ ಪುಸ್ತಕ ಕೊಟ್ಟು ಬರೆಸಿದ ನಂತರ ಅದೇ ಪ್ರಶ್ನೆಪತ್ರಿಕೆ ನೋಡದೇ ಉತ್ತರಿಸಲು ಅವಕಾಶ ನೀಡುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.

ಪರೀಕ್ಷಾ ನೋಡೆಲ್‌ ಅ ಧಿಕಾರಿ ಎ.ಎನ್‌.ನಾಗೇಂದ್ರಪ್ರಸಾದ್‌, ಉರ್ದು ಪ್ರಥಮ ಭಾಷೆ ಇರುವ ಮಕ್ಕಳು ತೃತೀಯ ಭಾಷೆ ಕನ್ನಡದಲ್ಲೇ ಅತಿ ಹೆಚ್ಚು ಅನುತ್ತೀರ್ಣಗೊಳ್ಳುತ್ತಿದ್ದಾರೆ, ಇದು ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು. ಈ ವೇಳೆ ಈ ಬಾರಿ “ನನ್ನನ್ನೊಮ್ಮೆ ಗಮನಿಸಿ’ಮಾದರಿ ಪ್ರಶ್ನೆಕೋಠಿಯನ್ನು ಉರ್ದು ಪ್ರಥಮಭಾಷೆ, ಕನ್ನಡ ತೃತೀಯ ಭಾಷೆ ಇರುವಂತೆ ಸಿದ್ಧಗೊಳಿಸಿ ಒದಗಿಸಲಾಗಿದೆ ಎಂದರು.

Advertisement

ಉರ್ದು ಪ್ರಥಮ ಭಾಷೆ ಇರುವ ಮಕ್ಕಳು ಈ ಬಾರಿ ತೃತೀಯ ಭಾಷೆ ಕನ್ನಡದಲ್ಲಿ ಅನುತ್ತೀರ್ಣರಾಗದಂತೆ ಕ್ರಮವಹಿಸಿ, ಅವರಿಗೆ ಮಾದರಿ ಪ್ರಶ್ನೆಕೋಠಿ ನೀಡಿ ಬರೆಸಿ ಕಲಿಕೆ ದೃಢೀಕರಣಗೊಳಿಸಿಕೊಳ್ಳಲು ಎಲ್ಲಾ ಉಪಪ್ರಾಂಶುಪಾಲರು ಮತ್ತು ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next