Advertisement

ಎಚ್‌-1ಬಿ ವೀಸಾದಾರರ ವೇತನ ಹೆಚ್ಚಳಕ್ಕೆ ಮನವಿ

03:50 AM Jun 30, 2017 | Karthik A |

ಹೊಸದಿಲ್ಲಿ / ವಾಷಿಂಗ್ಟನ್‌: ಎಚ್‌-1ಬಿ ವೀಸಾ ಹೊಂದಿರುವ ವಿದೇಶಿಯರ ಕನಿಷ್ಠ ವೇತನವನ್ನು ಹೆಚ್ಚಳ ಮಾಡಬೇಕು ಎಂದು ಅಮೆರಿಕ ಸರಕಾರಕ್ಕೆ ಕಾರ್ಮಿಕ ಸಚಿವ ಅಲೆಕ್ಸಾಂಡರ್‌ ಅಕೋಸ್ಟಾ ಮನವಿ ಮಾಡಿದ್ದಾರೆ. ಭಾರತೀಯ ಮೂಲದ ಐಟಿ ಉದ್ಯೋಗಿಗಳಿಗೆ ಸದ್ಯ ಇರುವ 60,000 ಡಾಲರ್‌ ವೇತನವನ್ನು 80,000 ಡಾಲರ್‌ಗೆ ಹೆಚ್ಚಿಸುವಂತೆ ಅವರು ಒತ್ತಾಯಿಸಿದ್ದಾರೆ. ವೇತನ ಹೆಚ್ಚಿಸುವುದರಿಂದ ಎಚ್‌-1ಬಿ ವೀಸಾ ಹೊಂದಿರುವವರ ಕಾರಣ ಮೂಲ ಅಮೆರಿಕನ್ನರು ಕೆಲಸ ಕಳೆದುಕೊಳ್ಳುವ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಅವರು ಕಾಂಗ್ರೆಸ್‌ ಸಮಿತಿಗೆ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next