Advertisement
ರಾಜ್ಯದ ಒಟ್ಟು ಸೋಂಕು ಪ್ರಕರಣಗಳು 1,88,611ಕ್ಕೆ, ಮೃತ ಪಟ್ಟವರ ಸಂಖ್ಯೆ 3,398ಕ್ಕೆ, ಚೇತರಿಸಿಕೊಂಡವರ ಸಂಖ್ಯೆ 1,05,599ಕ್ಕೆ ಏರಿದೆ. ಸದ್ಯ 79,606 ಸೋಂಕು ಪೀಡಿತರು ಆಸ್ಪತ್ರೆ, ಕೊರೊನಾ ಕೇರ್ ಸೆಂಟರ್ ಮತ್ತು ಮನೆಗಳಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಆಸ್ಪತ್ರೆ ಯಲ್ಲಿರುವವರ ಪೈಕಿ 699 ಮಂದಿಯ ಆರೋಗ್ಯ ಗಂಭೀರವಾಗಿದ್ದು, ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಗುಣಮುಖರಾದ ಒಂದು ಲಕ್ಷ ಮಂದಿಯಲ್ಲಿ ಅರ್ಧದಷ್ಟು ಆಗಸ್ಟ್‌ನಿಂದೀಚೆಗೆ ಸೋಂಕಿನಿಂದ ಮುಕ್ತರಾಗಿದ್ದಾರೆ. ಜುಲೈ 31ಕ್ಕೆ ಗುಣಮುಖರ ಸಂಖ್ಯೆ 49 ಸಾವಿರ ಇತ್ತು. ಆ ಬಳಿಕ ಹೊಸ ಸೋಂಕಿನಷ್ಟೇ ಗುಣ ಹೊಂದುವವರ ಪ್ರಮಾಣವು ಹೆಚ್ಚಿದೆ. ಪರೀಕ್ಷೆ ಹೆಚ್ಚಳ
ಸೋಮವಾರ 4,267ಕ್ಕೆ ಕುಸಿ ದಿದ್ದ ಸೋಂಕು ಪ್ರಕರಣಗಳ ಸಂಖ್ಯೆ ಮಂಗಳವಾರ ಮತ್ತೆ 6 ಸಾವಿರಕ್ಕೆ ಏರಿದೆ. ಇದಕ್ಕೆ ಪರೀಕ್ಷೆಯ ಹೆಚ್ಚಳ ಕಾರಣ. ಸೋಮವಾರ 22,620 ಪರೀಕ್ಷೆಗಳು ನಡೆದಿದ್ದರೆ ಮಂಗಳವಾರ ಒಟ್ಟು 43,924 ಪರೀಕ್ಷೆಗಳು ನಡೆದಿವೆ.
Related Articles
ಗುಣಮುಖ ಶೇ.56
ಸಕ್ರಿಯ ಶೇ.42.2
ಮೃತ ಶೇ.1.8
Advertisement