Advertisement

ಮಹಿಳಾ ದೌರ್ಜನ್ಯ ದೂರು ಏರಿಕೆ

01:23 AM Sep 08, 2021 | Team Udayavani |

ಹೊಸದಿಲ್ಲಿ: 2020ರ ಆರಂಭಿಕ 8 ತಿಂಗಳಿಗೆ ಹೋಲಿಸಿದರೆ ಈ ವರ್ಷ 8 ತಿಂಗಳಲ್ಲೇ ಮಹಿಳೆಯರ ಮೇಲಿನ ದೌರ್ಜನ್ಯಗಳ ದೂರು ಶೇ.46ರಷ್ಟು ಹೆಚ್ಚಾಗಿದೆ.

Advertisement

ಈ ಪೈಕಿ ಅರ್ಧದಷ್ಟು ಉತ್ತರಪ್ರದೇಶವೊಂದರಲ್ಲೇ ಕಂಡುಬಂದಿದೆ. ರಾಷ್ಟ್ರೀಯ ಮಹಿಳಾ ಆಯೋಗ ಮೇಲಿನ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ವರ್ಷ ಜನವರಿಯಿಂದ ಆಗಸ್ಟ್‌ ಅಂತ್ಯದವರೆಗೆ 19,953 ದೌರ್ಜನ್ಯ ಪ್ರಕರಣ ದಾಖಲಾಗಿವೆ.

ಕಳೆದ ವರ್ಷ ಇದು 13,618 ಇತ್ತು. ಈ ವರ್ಷ ಬರೀ ಜುಲೈ ವೊಂದ ರಲ್ಲೇ 3,248 ಪ್ರಕರಣಗಳು ದಾಖಲಾಗಿವೆ. 2015ರ ಅನಂತರ ಇದು ತಿಂಗಳೊಂದ ರಲ್ಲಿ  ದಾಖಲಾದ ಗರಿಷ್ಠ ದೂರುಗಳ ಸಂಖ್ಯೆಯಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗ ಕ್ರಿಯಾಶೀಲವಾಗಿ ರುವುದರಿಂದಲೇ ಮಹಿಳೆಯರು ಧೈರ್ಯವಾಗಿ ಮುಂದೆ ಬಂದು ದೂರು ಕೊಡುತ್ತಿದ್ದಾರೆ ಎಂದು ಮುಖ್ಯಸ್ಥೆ ರೇಖಾ ಶರ್ಮಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next