Advertisement

ಬದು ನಿರ್ಮಾಣದಿಂದ ಅಂತರ್ಜಲ ಹೆಚ್ಚಳ

05:55 AM May 21, 2020 | Suhan S |

ಹಗರಿಬೊಮ್ಮನಹಳ್ಳಿ: ಬದು ನಿರ್ಮಾಣದಿಂದ ಅಂತರ್ಜಲದ ಪ್ರಮಾಣ ಹೆಚ್ಚುವುದರ ಜೊತೆಗೆ ಬೆಳೆ ಇಳುವರಿ ಹೆಚ್ಚುತ್ತದೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹಾಲಸಿದ್ದಪ್ಪ ಪೂಜಾರ್‌ ಹೇಳಿದರು.

Advertisement

ತಾಲೂಕಿನ ಮರಬ್ಬಿಹಾಳು ಗ್ರಾಮದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಬದು ನಿರ್ಮಾಣ ಮಾಸಾಚರಣೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆಯನ್ನು ಕೂಲಿ ಕಾರ್ಮಿಕರು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಬದು ನಿರ್ಮಾಣದಿಂದ ರೈತರ ಹೊಲಗಳಲ್ಲಿ ಮಣ್ಣಿನ ಸವಕಳಿ ತಡೆಯಬಹುದು. ಅರ್ಜಿ ಸಲ್ಲಿಸುವ ರೈತರ ಹೊಲಗಳಲ್ಲಿ ಬದು ನಿರ್ಮಾಣ ಮತ್ತು ಕೃಷಿ ಹೊಂಡ ನಿರ್ಮಿಸಲಾಗುವುದು. ತಾಲೂಕಿನ ಎಲ್ಲ ಗ್ರಾಪಂಗಳಲ್ಲೂ ಏಕಕಾಲಕ್ಕೆ ಅಭಿಯಾನ ಆರಂಭಿಸಲಾಗಿದೆ. ಬದು ನಿರ್ಮಾಣ ಮಾಡಿಕೊಳ್ಳುವರು ಗ್ರಾಪಂ ಪಿಡಿಒಗಳನ್ನು ಭೇಟಿ ಮಾಡಿ ಸಮರ್ಪಕ ಮಾಹಿತಿ ಪಡೆಯಬೇಕು ಎಂದು ತಿಳಿಸಿದರು.

ಮರಬ್ಬಿಹಾಳು ಗ್ರಾಪಂ ಪಿಡಿಒ ರತ್ನಮ್ಮ ಮಾತನಾಡಿ, ಬದು ನಿರ್ಮಾಣ ಮಾಡಿಕೊಳ್ಳುವುದರಿಂದ ಹೊಲದಲ್ಲಿರುವ ಬೋರ್‌ವೆಲ್‌ ನೀರು ಪುನಶ್ಚೇತಗೊಳ್ಳುತ್ತದೆ. ಪಹಣಿ ಹೊಂದಿರುವ ರೈತರು ಬದು ನಿರ್ಮಾಣ ಮಾಡಿಕೊಳ್ಳಲು ಆಸಕ್ತಿ ತೋರಬೇಕು. ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಬದು ನಿರ್ಮಾಣದ ವೇಳೆ ವ್ಯಕ್ತಿ ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು. ಮುಖಂಡ ಶಾಂತಪ್ಪ, ಉದ್ಯೋಗ ಖಾತರಿ ಮೇಟಿಗಳಾದ ಹುಲುಗಪ್ಪ, ಗಂಗಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next