Advertisement
ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ 2014ರಲ್ಲಿ 177234 ಮತದಾರರು, 2019ರಲ್ಲಿ 189772 ಮತದಾರರಿದ್ದಾರೆ. ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದಲ್ಲಿ 2014ರಲ್ಲಿ 386535 ಮತದಾರರು, 2019ರಲ್ಲಿ 445847 ಮತದಾರರಾಗಿದ್ದಾರೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 2014ರಲ್ಲಿ 549558 ಮತದಾರರಿದ್ದರು. ಹಾಲಿ ಇಲ್ಲಿ 598230 ಮತದಾರರಿದ್ದಾರೆ. ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ 356638 ಮತದಾರರಿದ್ದಾರೆ. 2014ರಲ್ಲಿ 305750 ಮತದಾರರಿದ್ದರು.
Related Articles
Advertisement
ಅತಿ ಹೆಚ್ಚು ಮತದಾರರಿರುವುದು ಬೆಂಗಳೂರು ದಕ್ಷಿಣದಲ್ಲಿ: ಅತಿ ಹೆಚ್ಚು ಮತದಾರರಿರುವುದು ಬೆಂಗಳೂರು ದಕ್ಷಿಣದಲ್ಲಿ. ಬೆಂಗಳೂರು ದಕ್ಷಿಣದಲ್ಲಿ 598230 ಮತದಾರರಿದ್ದಾರೆ. ಅತಿ ಹೆಚ್ಚು ಮತದಾರರಿರುವ ಎರಡನೇ ಕ್ಷೇತ್ರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ. ಇಲ್ಲಿ 445847 ಮತದಾರರಿದ್ದಾರೆ. ಮೂರನೇ ಸ್ಥಾನ ಆನೇಕಲ್ (356638), ನಾಲ್ಕನೇ ಸ್ಥಾನ ಮಾಗಡಿ (222853), ಐದನೇ ಸ್ಥಾನ ಕನಕಪುರ (219866), ಆರನೇ ಸ್ಥಾನ ಚನ್ನಪಟ್ಟಣ (215613), ಏಳನೇ ಸ್ಥಾನ ರಾಮನಗರ (207388), ಎಂಟನೇ ಸ್ಥಾನ ಕುಣಿಲಗಲ್ ಇಲ್ಲಿ 189772 ಮತದಾರರಿದ್ದಾರೆ.
ಮೂರು ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಾಬಲ್ಯ: ರಾಮನಗರ, ಕನಕಪುರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಪುರುಷ ಮತದಾರರಿಗಿಂತ ಹೆಚ್ಚಾಗಿದೆ. ಕನಕಪುರದಲ್ಲಿ 110244 ಮಹಿಳಾ ಮತದಾರರಿದ್ದಾರೆ. ಚನ್ನಪಟ್ಟಣದಲ್ಲಿ 109976 ಮತ್ತು ರಾಮನಗರದಲ್ಲಿ 104344 ಮಹಿಳಾ ಮತದಾರರಿದ್ದಾರೆ.
ಬೆಂಗಳೂರು ದಕ್ಷಿಣದಲ್ಲಿ ಇತರೆ ಮತದಾರರು ಹೆಚ್ಚು: ಇಡೀ ಕ್ಷೇತ್ರದಲ್ಲಿ 340 ಇತರೆ ಮತದಾರರಿದ್ದಾರೆ. ಅತಿ ಹೆಚ್ಚು ಇತರೆ ಮತದಾರರಿರುವುದು ಬೆಂಗಳೂರು ದಕ್ಷಿಣದಲ್ಲಿ. ಇಲ್ಲಿ 101 ಇತರೆ ಮತದಾರರಿದ್ದಾರೆ. ಆನೇಕಲ್‌ನಲ್ಲಿ 85, ರಾಜರಾಜೇಶ್ವರಿ ನಗರದಲ್ಲಿ 80, ರಾಮನಗರದಲ್ಲಿ 24, ಮಾಗಡಿಯಲ್ಲಿ 19, ಕುಣಿಗಲ್‌ನಲ್ಲಿ 15, ಕನಕಪುರದಲ್ಲಿ 9 ಮತ್ತು ಚನ್ನಪಟ್ಟಣದಲ್ಲಿ 7 ಇತರೆ ಮತದಾರರಿದ್ದಾರೆ.
ಇನ್ನು ಅಂತಿಮವಾಗಿಲ್ಲ ಮತದಾರರ ಸಂಖ್ಯೆ: ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಏಪ್ರಿಲ್ 18ರಂದು ನಡೆಯಲಿದೆ. ನಾಮಪತ್ರಗಳನ್ನು ಸಲ್ಲಿಸಲು ಮಾರ್ಚ್ 26. ಮತದಾರ ಪಟ್ಟಿಗೆ ಹೊಸ ಮತದಾರರು ಮಾರ್ಚ್ 26ರವರೆಗೆ ಸೇರ್ಪಡೆಗೆ ಅವಕಾಶವಿದೆ. ಹೀಗಾಗಿ ಹಾಲಿ ಇರುವ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಂಭವ ಇದೆ.
* ಬಿ.ವಿ.ಸೂರ್ಯ ಪ್ರಕಾಶ್