Advertisement

ಇಪಿಎಫ್ಒ ಚಂದಾದಾರರ ಸಂಖ್ಯೆ ಏರಿಕೆ

12:53 AM Mar 22, 2021 | Team Udayavani |

ಕೋವಿಡ್‌ ಸಂದರ್ಭ ತೀವ್ರ ಹಿನ್ನಡೆ ಕಂಡಿದ್ದ ಔದ್ಯೋಗಿಕ ಕ್ಷೇತ್ರ ಇದೀಗ ಚೇತರಿಕೆ ಹಾದಿಯಲ್ಲಿದೆ. ಕಳೆದ ವರ್ಷದ ಅಂತ್ಯದಿಂದೀಚೆಗೆ ನೇಮಕಾತಿ ಪ್ರಮಾಣ ಕೂಡ ಹೆಚ್ಚಾಗತೊಡಗಿದೆ. ಸಹಜ ವಾಗಿಯೇ ಕಳೆದೊಂದು ತಿಂಗಳ ಅವಧಿ ಯಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ)ಯ ಚಂದಾದಾರರ ಸಂಖ್ಯೆ ಯಲ್ಲಿಯೂ ಏರಿಕೆಯಾಗಿದೆ.

Advertisement

ಈ ವರ್ಷದ ಜನವರಿಯಲ್ಲಿ 13.36 ಲಕ್ಷ ಮಂದಿ ಇಪಿಎಫ್ಒ ಖಾತೆಗಳನ್ನು ತೆರೆದಿದ್ದಾರೆ. ಕಳೆದ ವರ್ಷದ ಜನವರಿಗೆ ಹೋಲಿಸಿದಲ್ಲಿ ಇದು ಶೇ. 27.79ರಷ್ಟು ಹೆಚ್ಚು. ಇದೇ ವೇಳೆ ಕಳೆದ ವರ್ಷದ ಡಿಸೆಂಬರ್‌ಗೆ ಹೋಲಿಸಿದಲ್ಲಿ ಇದು ಶೇ. 24ರಷ್ಟು ಅಧಿಕವಾಗಿದೆ. ಪ್ರಸಕ್ತ ಆರ್ಥಿಕ ವರ್ಷದ 10 ತಿಂಗಳುಗಳ ಅವಧಿಯಲ್ಲಿ  ಒಟ್ಟು 62.49 ಲಕ್ಷ ಮಂದಿ ಹೊಸದಾಗಿ ಇಪಿಎಫ್ಒ ಚಂದಾದಾರರಾಗಿದ್ದಾರೆ.

ಯಾವ ರಾಜ್ಯದಲ್ಲಿ ಹೆಚ್ಚು? :

ಮಹಾರಾಷ್ಟ್ರದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಹೊಸದಾಗಿ ಇಪಿಎಫ್ ಖಾತೆ ತೆರೆಯಲಾಗಿದೆ. ಬಳಿಕದ ಸ್ಥಾನದಲ್ಲಿ ಹರಿಯಾಣ, ಗುಜರಾತ್‌, ತಮಿಳುನಾಡು ಮತ್ತು ಕರ್ನಾಟಕ ಇದೆ. ಮಹಿಳೆಯರ ಸಂಖ್ಯೆ ಹೆಚ್ಚಳ

ಜನವರಿ ಅಂಕಿಅಂಶಗಳ ಪ್ರಕಾರ ಹೊಸ ಚಂದಾದಾರರ ಪೈಕಿ ಮಹಿಳೆಯರ ಸಂಖ್ಯೆ 2.61 ಲಕ್ಷಗಳಷ್ಟಿದೆ. ಕಳೆದ ಡಿಸೆಂಬರ್‌ಗೆ ಹೋಲಿಸಿದರೆ ಶೇ.30ರಷ್ಟು ಅಧಿಕ.

Advertisement

ಯಾವ ವರ್ಷ ಎಷ್ಟೆಷ್ಟು? :

ಇಪಿಎಫ್ಒ ಪ್ರಕಾರ 2019-20ನೇ ಹಣಕಾಸು ವರ್ಷದಲ್ಲಿ 78.58 ಲಕ್ಷ ಹೊಸ ಸದಸ್ಯರು ಸೇರ್ಪಡೆಗೊಂಡಿ ದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 2020ರ ಎಪ್ರಿಲ…-ಅಕ್ಟೋಬರ್‌ ಮಧ್ಯೆ ಒಟ್ಟು 39.33 ಲಕ್ಷ ಹೊಸ ಚಂದಾದಾರರು ಸೇರ್ಪಡೆಯಾಗಿ ದ್ದಾರೆ. 2018-19ರ ಆರ್ಥಿಕ ವರ್ಷದಲ್ಲಿ ಈ ಸಂಖ್ಯೆ 61.12 ಲಕ್ಷಗಳಾಗಿತ್ತು.

ಯಾವ ವಯಸ್ಸಿನವರು :

ಜನವರಿ 2021ರ ಅವಧಿಯಲ್ಲಿ, 22-25ರ ವಯಸ್ಸಿನವರು ಹೊಸ ಖಾತೆಯನ್ನು ತೆರೆದಿದ್ದಾರೆ. ಇವರ ಪ್ರಮಾಣ ಸುಮಾರು 3.48 ಲಕ್ಷ ಇದೆ. ಈ ವಯಸ್ಸಿನವರನ್ನು ಉದ್ಯೋಗ ಮಾರುಕಟ್ಟೆಯಲ್ಲಿ ಹೊಸಬರು ಎಂದು ಪರಿಗಣಿಸಬ ಹುದು. ಬಳಿಕದ ಸ್ಥಾನದಲ್ಲಿ 29-35 ವಯಸ್ಸಿನವರು ಸುಮಾರು 2.69 ಲಕ್ಷ ದಾಖಲಾತಿಗಳನ್ನು ಹೊಂದಿ ದ್ದಾರೆ. ಇವರು ಉದ್ಯೋಗವನ್ನು ಬದಲಾಯಿಸಿದ ಮತ್ತು ಇಪಿಎಫ್ಒ ದ ಬೆಂಬಲ ಪಡೆಯಲು ಸೇರ್ಪಡೆಗೊಂಡ ಅನುಭವಿ ಕಾರ್ಮಿಕರು ಅಥವಾ ನೌಕರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next