Advertisement

ನೈತಿಕ ಮತದಾನ ಜಾಗೃತಿ ಹೆಚ್ಚಾಗಲಿ:  ಸಿಂಧೂ ರೂಪೇಶ್‌

01:00 AM Mar 03, 2019 | Team Udayavani |

ಉಡುಪಿ: ತಪ್ಪದೇ ಮತದಾನ ಮಾಡುವ ಜತೆಗೆ ಯಾವುದೇ ಆಮಿಷಗಳಿಗೆ ಒಳಗಾಗದೆ “ನೈತಿಕ ಮತದಾನ’ ಮಾಡುವ ಕುರಿತು ಜಾಗೃತಿ ಹೆಚ್ಚಾಗಬೇಕು ಎಂದು ಜಿ.ಪಂ. ಸಿಇಒ, ಜಿಲ್ಲಾ ಸ್ವೀಪ್‌ ಸಮಿತಿ (ಮತದಾರರ ಜಾಗೃತಿ ಅಭಿಯಾನ) ಅಧ್ಯಕ್ಷೆ ಸಿಂದೂ ರೂಪೇಶ್‌ ಹೇಳಿದ್ದಾರೆ.

Advertisement

ಮಾ.2ರಂದು ಮತದಾನ ಜಾಗೃತಿಗಾಗಿ ಜಿಲ್ಲಾಡಳಿತ, ಸ್ವೀಪ್‌ ಸಮಿತಿ, ಶಿಕ್ಷಣ ಇಲಾಖೆ, ಚಿತ್ರಕಲಾ ಶಿಕ್ಷಕರ ಸಂಘ ಹಾಗೂ ಚಿತ್ರಕಲಾ ಮಂದಿರ ಕಲಾವಿದ್ಯಾಲಯದ ಸಹಯೋಗದಲ್ಲಿ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಜರಗಿದ ಚಿತ್ರಕಲಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿತ್ರಕಲೆ ಪರಿಣಾಮಕಾರಿ ಮಾಧ್ಯಮ. ಇದೇ ಕಾರಣದಿಂದ ಮತದಾನ ಜಾಗೃತಿಗೆ ಚಿತ್ರಕಲೆಯನ್ನು ಕೂಡ ಬಳಸಲಾಗುತ್ತಿದೆ. ಜಿಲ್ಲೆಯಾದ್ಯಂತ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ “ಮಿಂಚಿನ ನೋಂದಣಿ’ ನಡೆಯುತ್ತಿದೆ. ಈ ಬಾರಿ ಕಳೆದ ಚುನಾವಣೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದರು. 

ಪಾರ್ಟಿಸಿಪೇಟರಿ ಡೆಮಾಕ್ರಸಿ
ಡಾ| ಜಿ.ಶಂಕರ್‌ ಮಹಿಳೆಯರ ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ| ಭಾಸ್ಕರ್‌ ಶೆಟ್ಟಿ  ಮಾತನಾಡಿ ಮತದಾನ ಎಂಬುದು ದೇಶದ ಭವಿಷ್ಯ ರೂಪಿಸಲು ದೊರೆಯುವ ಉತ್ತಮ ಅವಕಾಶ. ಮತದಾನದ ಮೂಲಕ “ಪಾರ್ಲಿಮೆಂಟರಿ ಡೆಮಾಕ್ರಸಿ’ “ಪಾರ್ಟಿಸಿಪೆಟರಿ ಡೆಮಾಕ್ರಸಿ’ ಆಗಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಮಹಾನಗರದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಇಂತಹ ಸಂದರ್ಭ ಅಭ್ಯರ್ಥಿ ಒಟ್ಟು ಮತದಾನದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮತಗಳನ್ನು ಮಾತ್ರ ಪಡೆದು ಆಯ್ಕೆಯಾಗುತ್ತಾನೆ. ವಿದ್ಯಾವಂತರಲ್ಲಿ ಕೂಡ ಮತದಾನ ಜಾಗೃತಿ ಹೆಚ್ಚಿಸುವ ಅಗತ್ಯವಿದೆ ಎಂದರು.

ಜಿಲ್ಲಾಧಿಕಾರಿ ಹೆಪ್ಸಿಬಾ  ರಾಣಿ ಮತ್ತು ಎಸ್‌ಪಿ ನಿಶಾ ಜೇಮ್ಸ್‌ ಅವರು ಚಿತ್ರಕಲಾ ಶಿಬಿರಕ್ಕೆ ಭೇಟಿ ನೀಡಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. 

Advertisement

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜು, ಕಲಾ ವಿದ್ಯಾಲಯದ ನಿರ್ದೇಶಕ ಯು.ಸಿ. ನಿರಂಜನ್‌, ಚಿತ್ರಕಲಾ ಸಂಘದ ಅಧ್ಯಕ್ಷ  ಪ್ರಶಾಂತ್‌ ಉಪಸ್ಥಿತರಿದ್ದರು. ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌ ಸ್ವಾಗತಿಸಿ, ತಾ.ಪಂ. ಸಹಾಯಕ ನಿರ್ದೇಶಕ ಹರಿಕೃಷ್ಣ  ಶಿವತ್ತಾಯ ವಂದಿಸಿ, ಪಿಡಿಒ ಮಹೇಶ್‌ ನಿರ್ವಹಿಸಿದರು.

ಮದ್ಯರಹಿತ ಮತದಾನ ಜಾಗೃತಿ
ಧ.ಗ್ರಾ.ಯೋಜನೆಯ ಸದಸ್ಯರ ಮೂಲಕವೂ ಜಾಗೃತಿ ಕಾರ್ಯಕ್ರಮ ನಡೆಯುತ್ತಿವೆ. ಮುಖ್ಯವಾಗಿ ಕುಡಿದು ಮತದಾನ ಮಾಡದಂತೆ ಜಾಗೃತಿ ಮೂಡಿಸಲಾಗುತ್ತಿದೆ.
-ಪುರುಷೋತ್ತಮ, ಧ.ಗ್ರಾ.ಯೋಜನೆ ಉಡುಪಿ ಜಿಲ್ಲಾ ಯೋಜನಾ ನಿರ್ದೇಶಕ 

Advertisement

Udayavani is now on Telegram. Click here to join our channel and stay updated with the latest news.

Next