Advertisement

ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳ: ಸಂಭ್ರಮಾಚರಣೆ

05:03 PM Oct 09, 2022 | Team Udayavani |

ಚಾಮರಾಜನಗರ: ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ನಗರದ ಭುವನೇಶ್ವರಿ ವೃತ್ತದಲ್ಲಿ ಸಮಾವೇಶಗೊಂಡ ಎಸ್ಸಿ, ಎಸ್ಟಿ ಸಮುದಾಯದವರು ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ, ಜ್ಞಾನಪ್ರಕಾಶ್‌ ಸ್ವಾಮೀಜಿ, ಮಾದಾರಚೆನ್ನಯ್ಯಸ್ವಾಮೀಜಿ ಸೇರಿದಂತೆ ಶೋಷಿತ ಸಮುದಾಯಗಳ ಶ್ರೀಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ, ಸರ್ಕಾರಕ್ಕೆ ಜೈಕಾರ ಕೂಗಿ ಸಂಭ್ರಮಿಸಿದರು.

Advertisement

ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂ ದಪುರಿಸ್ವಾಮೀಜಿಯವರು ನ್ಯಾ. ನಾಗ ಮೋಹನ್‌ ದಾಸ್‌ ಆಯೋಗದ ವರದಿ ಯನ್ನು ಯಥಾವತ್‌ ಜಾರಿಗೊಳಿಸುವಂತೆ ಕಳೆದ 243 ದಿನಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ನಡೆಸಿದರು, ಅದರ ಫ‌ಲವಾಗಿ ಸರ್ಕಾರ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ. 2‌

011 ಜನಸಂಖ್ಯೆ ಮೀಸಲಾತಿ ಕೊಡಲು ತೀರ್ಮಾನ ಕೈಗೊಂಡಿದೆ. ಇದಕ್ಕಾಗಿ ಸಹಕರಿಸಿದ ಮುಖ್ಯಮಂತ್ರಿಗಳಿಗೆ, ವಿರೋಧಪಕ್ಷದ ನಾಯಕರುಗಳಿಗೆ ಈ ಮೂಲಕ ಅಭಿನಂದನೆ ಸಲ್ಲಿಸಿದರು.

ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಬಿಜೆಪಿ ಎಸ್ಟಿ ಮೋರ್ಚಾದ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಲ್ಲಂಬಳ್ಳಿ ಸೋಮನಾಯಕ, ನಾಯಕರ ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷ ಪು. ಶ್ರೀನಿವಾಸನಾಯಕ, ಅರಕಲವಾಡಿ ನಾಗೇಂದ್ರ ನಗರಸಭಾ ಸದಸ್ಯ ಶಿವರಾಜ್, ನಗರಸಭಾ ಮಾಜಿ ಅಧ್ಯಕ್ಷರು ಗಳಾದ ಸುರೇಶ್ನಾಯಕ, ಮಹದೇವ ನಾಯಕ, ಯ.ರಾಜುನಾಯಕ, ಸುರೇಶ್ನಾಗ್, ಕೃಷ್ಣನಾಯಕ, ನಾಗೇಂದ್ರ, ಶಿವುವಿರಾಟ್ ಸಿಂಗನಪುರ ಮಹೇಶ್, ಬುಲೆಟ್‌ ಚಂದ್ರು, ಕೆ.ಎಂ.ನಾಗರಾಜು, ರವಿಚಂದ್ರಪ್ರಸಾದ್, ಎಸ್.ಪಿ.ಮಹೇಶ್, ವೇಣುಗೋಪಾಲ್, ಬ್ಯಾಡಮೂಡ್ಲು ಬಸವಣ್ಣ, ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next