Advertisement

ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಳ?

02:23 PM Jan 31, 2021 | Team Udayavani |

ಬೆಂಗಳೂರು: ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್‌) ಇದೀಗ ರೈತರಿಂದ ಹಾಲು ಖರೀದಿ ಮಾಡುವ ದರವನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಲು ಮುಂದಾಗಿದೆ. ಹಾಲು ಉತ್ಪಾದನೆ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಬಮೂಲ್‌ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ.

Advertisement

ಬೆಂಗಳೂರು ಸಹಕಾರ ಹಾಲು ಒಕ್ಕೂಟ ವ್ಯಾಪ್ತಿಗೆ ಬೆಂಗಳೂರು ನಗರ, ಗ್ರಾಮಾಂತರ ಮತು ರಾಮನಗರ ಜಿಲ್ಲೆಗಳು ಸೇರಿವೆ. ಈ ವ್ಯಾಪ್ತಿಯಲ್ಲಿ ಸುಮಾರು 1.5 ಲಕ್ಷ ರೈತರಿದ್ದಾರೆ. ಅವೆರೆಲ್ಲರಿಗೂ ಅನುಕೂಲವಾಗಲಿ  ಫೆ.4ರಂದು ಡೇರಿ ವೃತ್ತದಲ್ಲಿರುವ ಬಮೂಲ್‌ನ ಕೇಂದ್ರ ಕಚೇರಿಯಲ್ಲಿ ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ ಸಭೆ ನಡೆಯಲಿದೆ.

ಈ ಸಭೆಯಲ್ಲಿ ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಳದ ಬಗ್ಗೆ ಚರ್ಚೆ ನಡೆಯಲಿದೆ. ಮಂಡಳಿಯ ಸಭೆಯ ನಂತರ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋವಿಡ್‌ ಸಂದರ್ಭದಲ್ಲಿ ಬಮೂಲ್‌ ಸ್ವಲ್ಪಮಟ್ಟಿನ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು.ಆದರೆ ಈಗ ಚೇತರಿಕೆಯತ್ತ ಮರಳಿದೆ. ಆ ಹಿನ್ನೆಲೆಯಲ್ಲಿ ರೈತರಿಂದ ಖರೀದಿ ಮಾಡುವ ಹಾಲಿನ ದರವನ್ನು ಹೆಚ್ಚಳ ಮಾಡುವುದಕ್ಕೆ ಒಕ್ಕೂಟ ನಿರ್ಧರಿಸಿದೆ ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹ ಮೂರ್ತಿ ಹೇಳಿದ್ದಾರೆ. ಹಾಲು ಉತ್ಪಾದನೆಯನ್ನು ಮತ್ತಷ್ಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಮೂಲ್‌ ಹಲವು ಕಾರ್ಯ ಯೋಜನೆಗಳನ್ನು ರೂಪಿಸಿದೆ.

ಆಡಳಿತ ಮಂಡಳಿಯ ಸದಸ್ಯರ ಒಮ್ಮತದ ಸಲಹೆ ಪಡೆದು ಶೀಘ್ರದಲ್ಲೆ ಹಾಲು ಖರೀದಿ ದರವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಪ್ರತಿ ದಿನ 16 ಲಕ್ಷ ಲೀ. ಹಾಲು ಉತ್ಪಾದನೆ: ಬೆಂಗಳೂರು ಸಹಕಾರ ಹಾಲು ಒಕ್ಕೂಟ ಪ್ರತಿ ದಿನ ಸುಮಾರು 16 ಲಕ್ಷ ಲೀಟರ್‌ ಹಾಲುಉತ್ಪಾದಿಸುತ್ತದೆ. ಇದರಲ್ಲಿ ಸುಮಾರು 10 ಲಕ್ಷ ಲೀಟರ್‌ ನಿತ್ಯ ಮಾರಾಟವಾಗುತ್ತದೆ. ಉಳಿದ  ಹಾಲನ್ನು ಮೊಸಲು, ಬೆಣ್ಣೆ, ಗಿಣ್ಣು ಮತ್ತು ಹಾಲಿನ ಪೌಂಡರ್‌ ಸೇರಿದಂತೆ ಇನ್ನಿತರ ನಂದಿನ ಉತ್ಪನ್ನಗಳ ಉತ್ಪಾದನೆಗೆ ಬಳಕೆ ಮಾಡಿ ಕೊಳ್ಳಲಾಗುವುದು ಎಂದು ಬಮೂಲ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಇದನ್ನೂ ಓದಿ:ಮ್ಯಾನ್‌ಹೋಲ್‌ ಸ್ವತ್ಛತೆಗೆ ರೋಬೋಟ್‌ ಬಳಕೆ

ಕನಕಪುರ ಘಟಕದಿಂದ ವಿದೇಶಕ್ಕೆ ರಫ್ತು

ವಿದೇಶಗಳಿಗೆ ನಂದಿ ಹಾಲು ಉತ್ಪನ್ನಗಳನ್ನು ರಫ್ತು ಮಾಡಲು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಕನಕಪುರ ಹಾಲು ಉತ್ಪಾದಕ ಘಟಕಕ್ಕೆ ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಚಿವಾಲಯ ಅಧಿಕೃತ ರಫ್ತು ಪರವಾನಿಗೆ ನೀಡಿದೆ. ಆ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಿಗೆ ಕನಕಪುರ ಹಾಲು ಉತ್ಪಾದನಾ ಘಟಕದಿಂದ ನಂದಿನಿ ಹಾಲಿನ ಉತ್ಪನ್ನಗಳನ್ನು ರಫ್ತು ಮಾಡಲಾಗುವುದು ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next