Advertisement

ದ್ವಿದಳ ಧಾನ್ಯ ಉತ್ಪಾದನೆ ಹೆಚ್ಚಳ: ವಾರ್ಷಿಕ 15 ಸಾವಿರ ಕೋಟಿ ರೂ. ಲಾಭ

11:13 PM Feb 11, 2021 | Team Udayavani |

ನವದೆಹಲಿ: “ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ದ್ವಿದಳ ಧಾನ್ಯ ಉತ್ಪಾದನೆ ಭಾರೀ ಹೆಚ್ಚಳವಾಗಿದ್ದು, ಹೊರದೇಶಗಳಿಂದ ಆಮದು ಪ್ರಮಾಣ ಗಣನೀಯ ತಗ್ಗಿದೆ. ಇದರಿಂದ ದೇಶದ ಬೊಕ್ಕಸಕ್ಕೆ 15 ಸಾವಿರ ರೂ. ವಾರ್ಷಿಕವಾಗಿ ಲಾಭವಾಗುತ್ತಿದೆ’ ಎಂದು ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ತಿಳಿಸಿದ್ದಾರೆ.

Advertisement

ವಿಶ್ವ ದ್ವಿದಳ ಧಾನ್ಯ ದಿನ ಪ್ರಯುಕ್ತ ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಕೇಂದ್ರ (ಐಪಿಪಿಆರ್‌) ಏರ್ಪಡಿಸಿದ್ದ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.

“ದ್ವಿದಳ ಧಾನ್ಯ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಿದೆ. ಸರ್ಕಾರದ ಕಾಳಜಿಯಲ್ಲದೆ ರೈತರು, ವಿಜ್ಞಾನಿಗಳ ಶ್ರಮದಿಂದಾಗಿ ಕಳೆದ 6 ವರ್ಷಗಳಲ್ಲಿ ದ್ವಿದಳ ಧಾನ್ಯ ಉತ್ಪಾದನೆ ಭಾರೀ ಹೆಚ್ಚಳವಾಗಿದೆ. 2014ರಲ್ಲಿ 140 ಲಕ್ಷ ಟನ್‌ ಇದ್ದ ಉತ್ಪಾದನೆ, ಈಗ 240 ಲಕ್ಷ ಟನ್‌ಗೆ ಏರಿಕೆಯಾಗಿದೆ’ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ:ಪಾರ್ಕಿಂಗ್‌ ಜಾಗ ಅತಿಕ್ರಮಿಸಿದರೆ ಟ್ರೇಡ್‌ ಲೈಸನ್ಸ್‌ ರದ್ದು : ಜಿಲ್ಲಾಧಿಕಾರಿ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next