Advertisement

ವರದಿ ವಿಳಂಬದಿಂದಲೇ ಸೋಂಕು ಹೆಚ್ಚಳ

11:41 AM May 11, 2021 | Team Udayavani |

ವಿಜಯಪುರ: ಸ್ವ್ಯಾ ಟೆಸ್ಟ್ ಕೊಟ್ಟು ನಾಲ್ಕು ದಿನಗಳಾದರೂ ಪಾಸಿಟಿವ್‌ ಆಗಿದೆಯಾ? ಅಥವಾ ನೆಗಟಿವ್‌ ಎಂದುವರದಿ ಬರಲಿಲ್ಲ. ವರದಿಗಳು ತಡವಾಗುತ್ತಿರುವುದರಿಂದ ಸೋಂಕಿನ ಹೆಚ್ಚಳವಾಗಿದೆ ಎಂದು ಪುರಸಭಾ ಮಾಜಿ ಸದಸ್ಯ ಬಲಮುರಿ ಶ್ರೀನಿವಾಸಮೂರ್ತಿ ಆತಂಕ ವ್ಯಕ್ತಪಡಿಸಿದರು.

Advertisement

ಕೋವಿಡ್‌ ಪರೀಕ್ಷೆ ಮಾಡಿ ಸಿದವರು ವರದಿ ಬರುವವರೆಗೆ ತಮ್ಮ ಕೆಲಸಗಳಲ್ಲಿ, ವ್ಯವಹಾರಗಳಲ್ಲಿ ನಿರತರಾಗಿರುತ್ತಾರೆ. ನಾಲ್ಕೈದು ದಿನಗಳ ನಂತರ ಬಂದ ವರದಿ ಪಾಸಿಟಿವ್‌ ಆಗಿದ್ದರೆ, ಆ ವ್ಯಕ್ತಿಯಿಂದ ಅವನ ಸಂಪರ್ಕಕ್ಕೆ ಬಂದ ಬಹಳಷ್ಟು ಜನಕ್ಕೆ ಸೋಂಕುಹರಡಿರುತ್ತದೆ. ಇದೇ ಕಾರಣದಿಂದಲೇ ಸೋಂಕಿತರ ಪ್ರಮಾಣ ಮಿತಿ ಮೀರುತ್ತಿದೆ. 24 ಗಂಟೆಗಳಲ್ಲಿ ಪರೀಕ್ಷಾ ವರದಿ ಬಂದರೆಮಾತ್ರ ಸೋಂಕಿತರಿಂದ ಇತರಿಗೆ ಹರಡುವ ಕೋವಿಡ್‌ ತಡೆಗಟ್ಟಬಹುದು. ಈ ವ್ಯವಸ್ಥೆ ಆಗದಿದ್ದರೆ ಸೋಂಕಿನ ಪ್ರಮಾಣ ಇಳಿಮುಖವಾಗುವುದಿಲ್ಲ. ಪರೀಕ್ಷೆ ವರದಿ ಆದಷ್ಟು ಶೀಘ್ರ ನೀಡುವ ವ್ಯವಸ್ಥೆ ಮಾಡಬೇಕೆಂದು ಆರೋಗ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

18 ವರ್ಷ ಮೇಲ್ಪಟವರಿಗೆ ಕೋವಿಡ್ ಲಸಿಕೆ ಆರಂಭ :

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 18 ವರ್ಷದಿಂದ 44 ವಯಸ್ಸಿನ ಸಾರ್ವಜನಿಕರಿಗೆ ಮೇ 10 ರಿಂದ ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಜಿಲ್ಲೆಯ ಹೊಸ ಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲದ ಸಾರ್ವಜನಿಕ ಆಸ್ಪತ್ರೆ ಗಳಲ್ಲಿ ಪ್ರತಿದಿನ 150 ಫ‌ಲಾನುಭವಿಗಳಿಗೆ ಲಸಿಕೆ ಹಾಕುವ ಯೋಜನೆ ರೂಪಿಸಲಾಗಿದ್ದು, 18 ವರ್ಷದಿಂದ 44 ವಯಸ್ಸಿನ  ವೆಬ್‌ ಸೈಟ್‌ ಮೂಲಕ ನೋಂದಾವಣೆ ಮಾಡಿಕೊಂಡು, ಆದ್ಯತೆಯುಳ್ಳ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸೂಕ್ತ ದಿನಾಂಕ ಮತ್ತು ಸಮಯಕ್ಕೆ ಅಪಾಯಿಂಟ್‌ ಮೆಂಟ್‌ ಪಡೆದು, ಅದರ ಪ್ರತಿಯೊಂದಿಗೆ ಸಂಬಂಧಪಟ್ಟ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.‌

Advertisement
Advertisement

Udayavani is now on Telegram. Click here to join our channel and stay updated with the latest news.

Next