Advertisement

ಬಾಂಗ್ಲಾದಲ್ಲಿ ಭಾರತೀಯ ಸಿನಿಮಾ ಪ್ರಸಾರ ಹೆಚ್ಚಳ 

09:54 PM Jul 28, 2023 | Team Udayavani |

ಕೋಲ್ಕತ: ಬಾಂಗ್ಲಾದಲ್ಲಿ ಭಾರತೀಯ ಸಿನಿಮಾಗಳ ಪ್ರದರ್ಶನ ಪ್ರಮಾಣ ಹೆಚ್ಚಿಸುವುದಾಗಿ ಎಂದು ಬಾಂಗ್ಲಾ ವಾರ್ತಾ ಸಚಿವ ಮೊಹಮ್ಮದ್‌ ಹಸನ್‌ ಮೆಹಮೂದ್‌ ಹೇಳಿದ್ದಾರೆ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತದ ನಂದನ್‌ನಲ್ಲಿ ಆಯೋಜಿಸಿರುವ ಐದನೇ ಬಾಂಗ್ಲಾದೇಶ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಉಭಯ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯಕ್ಕಾಗಿ ಕರೆ ನೀಡಿದರು.

Advertisement

“ಬಾಂಗ್ಲಾದೇಶದಲ್ಲಿ ಹತ್ತು ಹಿಂದಿ ಚಲನಚಿತ್ರಗಳ ಬಿಡುಗಡೆಗೆ ಅನುವು ಮಾಡಿಕೊಡಲಾಗಿದೆ. ಇದೇ ರೀತಿ ಅನೇಕ ಬಾಂಗ್ಲಾ ಸಿನಿಮಾಗಳು ಭಾರತದಲ್ಲಿ ತೆರೆ ಕಾಣುತ್ತಿವೆ. ಇದು ಸಂತಸದ ವಿಷಯವಾಗಿದೆ’ ಎಂದಿದ್ದಾರೆ. ಚಲನಚಿತ್ರೋತ್ಸವದಲ್ಲಿ ಪಶ್ಚಿಮ ಬಂಗಾಳ ಶಿಕ್ಷಣ ಸಚಿವ ಬ್ರಾತ್ಯಾ ಬಸು, ಖ್ಯಾತ ನಿರ್ದೇಶಕ ಗೌತಮ್‌ ಘೋಸ್‌ ಸೇರಿದಂತೆ ಸಿನಿಮಾ ಕ್ಷೇತ್ರದ ಅನೇಕ ಗಣ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next