Advertisement

ದತ್ತು ಸ್ವೀಕಾರ ಹೆಚ್ಚಳ

12:41 PM Aug 15, 2019 | mahesh |

ದತ್ತು ಸ್ವೀಕಾರ: ಮಹಿಳೆಯರೇ ಹೆಚ್ಚು
ಹೆಣ್ಣು ಮಕ್ಕಳಿಗೆ ವಿಶೇಷ ಬೇಡಿಕೆ

Advertisement

ಮಣಿಪಾಲ: ಅನಾಥ, ನಿರ್ಗತಿಕರಿಗೂ ಒಂದು ಜೀವನ ಇದೆ. ಮಕ್ಕಳಿಲ್ಲದವರಿಗೆ, ಮಗು ಪಡೆಯಲು ಅಶಕ್ತರಾದವರಿಗೆ, ಅವಿವಾಹಿತರಿಗೆ ಹೀಗೆ ಮಗುವನ್ನು ಹೊಂದಬಯಸುವರು ದತ್ತು ಸ್ವೀಕಾರದ ಮೂಲಕ ತಾಯಿ ಇಲ್ಲದ ಮಗುವನ್ನು ಪಡೆದುಕೊಳ್ಳಬಹುದಾಗಿದೆ. ಕಾನೂನುಬದ್ಧವಾಗಿ ಈ ಪ್ರಕ್ರಿಯೆ ನಡೆಯುತ್ತದೆ. ಭಾರತದಲ್ಲಿ ಇತ್ತೀಚಿನ ವರ್ಷ ಗಳಲ್ಲಿ ದತ್ತು ಸ್ವೀಕರಿಸುವವರ ಸಂಖ್ಯೆ ಹೆಚ್ಚಾಗಿದ್ದು, ವಿದೇಶದಿಂದಲೂ ದತ್ತು ಪಡೆದುಕೊಳ್ಳಲಾಗುತ್ತದೆ.

ದತ್ತು ಪಡೆಯುವುದು ಹೇಗೆ?
ದತ್ತು ಪಡೆಯಲು ಇಚ್ಛಿಸುವವರು ಅಧಿಕೃತ ಏಜೆನ್ಸಿಗಳು ಅಥವ ಕ್ಯಾರಾ (CARA) ನಿಂದ ಮಾನ್ಯತೆ ಹೊಂದಿದ ಸಂಸ್ಥೆಗಳನ್ನು ಸಂಪರ್ಕಿಸಬೇಕು. ಅಲ್ಲಿ ದತ್ತು ಸ್ವೀಕರಿಸುವವರ/ದಂಪತಿಗಳ ವೈದ್ಯಕೀಯ ಅರ್ಹತಾ ದೃಢೀಕರಣ, ಉದ್ಯೋಗ ಹಾಗೂ ಆದಾಯ ದೃಢೀಕರಣ, ಹುಟ್ಟಿದ ಪ್ರಮಾಣ ಪತ್ರ, ವಿವಾಹವಾಗಿದ್ದಲ್ಲಿ ಅದರ ಪುರಾವೆ, ಆಸ್ತಿಯ ವಿವರ ಸೇರಿದಂತೆ ಹಲವು ದಾಖಲೆಗಳನ್ನು ನೀಡಬೇಕು. ಹಲವು ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ ಮಗುವನ್ನು ದತ್ತು ಸ್ವೀಕರಿಸಲಾಗುತ್ತದೆ.

ಏನಿದು ಕ್ಯಾರಾ?
ಅನಾಥರಿಗೆ, ನಿರ್ಗತಿಕರಿಗೆ ಆಶ್ರಯ ನೀಡಲು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (CARA) ಕೆಲಸ ಮಾಡುತ್ತಿದೆ. ಇದು ಮಿತಿಯಲ್ಲಿ ಕೆಲವು ಸಂಸ್ಥೆಗಳನ್ನು ಹೊಂದಿದ್ದು, ಅವುಗಳು ಈ ದತ್ತು ಸ್ವೀಕಾರ ಪ್ರಕ್ರಿಯೆಗಳನ್ನು ನೋಡಿಕೊಳ್ಳುತ್ತಿವೆ.

ಹೆಣ್ಣು ಮಗುವೇ ಹೆಚ್ಚು
ದೇಶದಲ್ಲಿ 2018-19ರ ಸಾಲಿನಲ್ಲಿ 3,374 ಮಕ್ಕಳನ್ನು ದತ್ತು ಸ್ವೀಕರಿಸಲಾಗಿದ್ದು, ಇವರಲ್ಲಿ 2,360 ಹೆಣ್ಣು ಮಕ್ಕಳು. ಇದು ಇತ್ತೀಚೆಗಿನ ದಾಖಲೆಯೂ ಹೌದು.

Advertisement

5,400
ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (ಕ್ಯಾರಾ)ದ ಅಡಿಯಲ್ಲಿ ಮಾನ್ಯತೆ ಪಡೆದುಕೊಂಡ ಸಂಸ್ಥೆಗಳು.

24, 000
ಕ್ಯಾರಾದ ಅಡಿಯಲ್ಲಿ ದತ್ತು ಸ್ವೀಕಾರಕ್ಕೆ ಹೆಸರು ನೋಂದಾಯಿಸಿಕೊಂಡ ಕುಟುಂಬಗಳು/ವ್ಯಕ್ತಿಗಳು.

331
ದೇಶದಲ್ಲಿರುವ ಸಿಂಗಲ್‌ ಪೇರೆಂಟ್ಸ್‌ (ಅವಿವಾಹಿತರು, ವಿಚ್ಛೇದಿತರು ಸೇರಿ)

10.:3
ಈಗ ದತ್ತು ಸ್ವೀಕಾರಕ್ಕೆ ಲಭ್ಯವಿರುವ ಮಕ್ಕಳು.

38 ಶೇಕಡ
ದಂಪತಿಗಳಾಗಿದ್ದುಕೊಂಡು ಮಕ್ಕಳಿರುವ ಮಂದಿ. (ವಿಶ್ವದಲ್ಲಿ)

8 ಶೇಕಡ
ಜಗತ್ತಿನ ಶೇ. 8ರಷ್ಟು ಮಂದಿ ಪೋಷಕರು ಒಬ್ಬರೇ ಇದ್ದಾರೆ. ಅಂದರೆ ಇವರು ಅವಿವಾಹಿತರಾಗಿರಬಹುದು ಅಥವಾ ವಿಚ್ಛೇದಿತರಾಗಿ ಮಗುವನ್ನು ದತ್ತು ಪಡೆದುಕೊಂಡಿದ್ದಾರೆ.

10 ಕೋಟಿ
ಜಗತ್ತಿನಲ್ಲಿನ ತಾಯಂದಿರು ಮದುವೆಯಾಗದೇ ಅಥವಾ ವಿಚ್ಛೇದಿತಗೊಂಡು ದತ್ತು ಮಗುವನ್ನು ಪಡೆದುಕೊಂಡವರ ಸಂಖ್ಯೆ.

84 ಶೇ.
ಏಕಾಂಗಿಯಾಗಿದ್ದು, ದತ್ತು ಪಡೆದವರಲ್ಲಿ ಶೇ. 83 ಮಂದಿ ಮಹಿಳೆಯರು

Advertisement

Udayavani is now on Telegram. Click here to join our channel and stay updated with the latest news.

Next