Advertisement

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ…

06:12 PM Jun 28, 2021 | Team Udayavani |

ಕೋವಿಡ್‌ -19 ರೋಗವು ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚಿಬಿಟ್ಟಿದೆ.ಶರವೇಗದಲ್ಲಿ ಹಬ್ಬುತ್ತಿರುವ ಈ ರೋಗ, ಎಲ್ಲರಲ್ಲಿಯೂ ಭಯ ಹುಟ್ಟಿಸಿದೆ. ಹೆಚ್ಚಿನರೋಗ ನಿರೋಧಕ ಶಕ್ತಿ ಹೊಂದಿದ್ದರೆ ಕೊರೊನಾದ ಕಪಿಮುಷ್ಟಿಯಿಂದ ಪಾರಾಗಬಹುದು.

Advertisement

 ಮನೆಮದ್ದುಗಳನ್ನು ಬಳಸಿ ನಮ್ಮ ದೇಹದರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಗೊತ್ತೇ?„

4-5 ತುಳಸಿ ಎಲೆಗಳನ್ನು 10 ನಿಮಿಷ ನೀರಿನಲ್ಲಿ ನೆನೆಸಿ, ಆನೀರನ್ನು ಕುದಿಸಬೇಕು. ನಂತರ ಅದಕ್ಕೆ ಸ್ವಲ್ಪ ಕಾಳುಮೆಣಸನ್ನುಹುಡಿ ಹಾಗೂ ಚಿಕ್ಕ ತುಂಡು ಶುಂಠಿಯನ್ನು ಜಜ್ಜಿ ಹಾಕಿ ಚೆನ್ನಾಗಿ ಕುದಿಸಬೇಕು. ಸ್ವಲ್ಪತಣ್ಣಗಾದ ಬಳಿಕ ಈ ಪಾನೀಯವನ್ನು ಸೇವಿಸಿ.

„ ಕೊತ್ತಂಬರಿ ಬೀಜ, ಜೀರಿಗೆ,ಕಾಳುಮೆಣಸು, ದಾಲಿcàನಿ, ಲವಂಗ, ಏಲಕ್ಕಿ ಹುಡಿ ಮಾಡಿಇಟ್ಟುಕೊಳ್ಳಬೇಕು. ಒಂದು ಚಮಚ ಹುಡಿಯನ್ನು ಹಾಲಿಗೆ ಹಾಕಿ, ಸ್ವಲ್ಪ ಬೆಲ್ಲ,ಅರಿಶಿನ,ಶುಂಠಿ ಸೇರಿಸಿ ಕುದಿಸಿ ಕಷಾಯ ಮಾಡಬೇಕು. ಇದನ್ನು ನಿತ್ಯ ಸೇವಿಸಿದರೆ ಒಳ್ಳೆಯದು.

„ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 2 ಎಸಳು ಬೆಳ್ಳುಳ್ಳಿಯನ್ನು ಸೇವಿಸುವುದು ಉತ್ತಮ.ಸಾರಿಗೆ ಒಗ್ಗರಣೆ ಹಾಕುವ ಸಂದರ್ಭದಲ್ಲಿ ಬೆಳ್ಳುಳ್ಳಿ ಬಳಸಿಯೂ ಸೇವಿಸಬಹುದು.

Advertisement

„ ಬೇಯಿಸಿದ ಅನ್ನದ ಗಂಜಿಯನ್ನು ಕುಡಿಯುವುದು ಆರೋಗ್ಯಕರ. ಬೇಕಿದ್ದರೆಅದಕ್ಕೆ ಸ್ವಲ್ಪ ಉಪ್ಪು ಹಾಗೂ ಈರುಳ್ಳಿಯನ್ನು ಹಾಕಬಹುದು.

„ ಪ್ರತಿ ಆಹಾರ ಪದಾರ್ಥದಲ್ಲಿ ಚಿಟಿಕೆ ಪ್ರಮಾಣದ ಅರಿಶಿನವನ್ನು ಹಾಕಿದರೆ ಒಳ್ಳೆಯದು.ಮಲಗುವ ಮುನ್ನ ಹಾಲಿಗೆ ಅರಿಶಿನ ಹಾಕಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು.

 ಡಾ. ಶ್ರೀಲತಾ ಪದ್ಯಾಣ

Advertisement

Udayavani is now on Telegram. Click here to join our channel and stay updated with the latest news.

Next