Advertisement
ವಿಧಾನ ಪರಿಷತ್‌ನಲ್ಲಿ ಗ್ರಾ.ಪಂ. ಸದಸ್ಯರ ಹಾಗೂ ಸಿಬಂದಿ ಗೌರವ ಧನ ಹೆಚ್ಚಳ ಮಾಡುವ ಬಗ್ಗೆ ನಿಯಮ 330ರಡಿ ವಿಷಯ ಪ್ರಸ್ತಾವಿಸಿ ಮಂಗಳವಾರ ಮಾತನಾಡಿದ ಅವರು, ಗ್ರಾ.ಪಂ. ಸದಸ್ಯರಿಗೆ ಮಾಸಿಕ 10 ಸಾವಿರ ರೂ. ಗೌರವಧನ ನೀಡಬೇಕು. ಚುನಾಯಿತ ಪ್ರತಿನಿಧಿಗಳಿಗೆ ವೈದ್ಯಕೀಯ ಸೌಲಭ್ಯ ಮತ್ತು ಆ ಜಿÇÉೆಗಳಲ್ಲಿ ಓಡಾಡಲು ಉಚಿತ ಬಸ್ ಸೌಕರ್ಯವನ್ನು ಹಾಗೂ 5 ವರ್ಷಗಳನ್ನು ಪೂರ್ಣ ಮಾಡಿದ ಚುನಾಯಿತ ಪ್ರತಿನಿಧಿಗಳಿಗೆ ಪಿಂಚಣಿಯನ್ನು ಕೊಡಬೇಕೆಂದು ಆಗ್ರಹಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾ.ಪಂ.ಗಳೇ ತಳಪಾಯ. ಗ್ರಾ.ಪಂ.ಗಳನ್ನು ನಾವು ಬಲಿಷ್ಠವಾಗಿಸಿದರೆ ಮಾತ್ರ ಮಾಹಾತ್ಮ ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗುವುದು. ಆದರೆ ಗ್ರಾ.ಪಂ. ಚುನಾವಣೆಯಲ್ಲಿ ಮೀಸಲಾತಿ ಪ್ರಕಾರ ಶೇ. 50ರಷ್ಟು ಮಹಿಳೆಯರು ಮತ್ತು ಪ.ಜಾತಿ/ಪಂಗಡ ಹಾಗೂ ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಿ ಬರುವುದರಿಂದ ಅವರು ಗೌರವಯುತವಾಗಿ ಬದುಕಲು ಮತ್ತು ಬಡವರಿಗೆ ಸ್ಪಂದಿಸಬೇಕಾದ ಚುನಾಯಿತ ಪ್ರತಿನಿಧಿಗಳು ಇಂದು ಆರ್ಥಿಕ ಸಂಕಷ್ಟದಲ್ಲಿದ್ದಾ ರೆ ಎನ್ನುವುದನ್ನು ನಾವು ಗಮನಿಸಬೇಕು ಎಂದರು. ಇದಕ್ಕೆ ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದ ಎಲ್ಲ 25 ಸದಸ್ಯರು ಬೆಂಬಲವೂ ಇದೆ ಎಂದರು. ಒಕ್ಕೊರಲ ಒತ್ತಾಯ: ಗ್ರಾ.ಪಂ. ಸದಸ್ಯರ ಗೌರವಧನ ಹೆಚ್ಚಳಕ್ಕೆ ಸಂಬಂಧಿಸಿ ಮೇಲ್ಮನೆಯಲ್ಲೂ ಪಕ್ಷಾತೀತವಾಗಿ ಸದಸ್ಯರು ಒಕ್ಕೊರಲಿನಿಂದ ದನಿ ಎತ್ತಿದರು. ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಇದೇ ಮಾ. 14ರಂದು ಸದಸ್ಯರ ಸಭೆ ಕರೆಯಲಾಗುವುದು. ಅಲ್ಲಿ ಎಲ್ಲರೂ ಸುದೀರ್ಘ ಚರ್ಚೆ ನಡೆಸೋಣ ಎಂದರು.