Advertisement
ತಾಲೂಕಿನ ಗದ್ದಿಗೆ ಶ್ರೀ ಕೆಂಡಗಣ್ಣೇಶ್ವರಸ್ವಾಮಿ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಗ್ರಾಮೀಣ ರೈತರಿಗೆ ಮತ್ತು ಉದ್ದಿಮೆದಾರರಿಗೆ ಹಣ್ಣು ಮತ್ತು ತರಕಾರಿ ಬೆಳೆಗಳ ಸಂಸ್ಕರಣೆ ಕುರಿತ ಪ್ರಾತ್ಯಕ್ಷತೆ ಉದ್ಘಾಟಿಸಿ, ಸಂಸದ್ ಆದರ್ಶ ಗ್ರಾಮ ಯೋಜನೆಗಳ ಅನುಷ್ಠಾನ ಬಗೆಗಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
Related Articles
Advertisement
ಆದರ್ಶ ಗ್ರಾಮಕ್ಕೆ ಆಯ್ಕೆಗೊಂಡಿರುವ ಈ ಪಂಚಾಯ್ತಿ ವ್ಯಾಪ್ತಿಯ ರೈತರಿಗೆ 120 ಹನಿ ನೀರಾವರಿ ಯೋಜನೆ ರೂಪಿಸಲಾಗಿದೆ. ಆದರೆ ಈವರೆಗೆ 90 ಅರ್ಜಿಗಳು ಬಂದಿವೆ ಅಲ್ಲದೆ 200 ಕೃಷಿ ಹೊಂಡ ನಿರ್ಮಿಸುವ ಗುರಿ ಹೊಂದಿದ್ದು, ಮೊದಲ ಕಂತಿನಲ್ಲಿ 20 ಕೃಷಿ ಹೊಂಡ ನಿರ್ಮಿಸುವ ಯೋಜನೆ ಸಿದ್ಧವಾಗಿದೆ ಎಂದು ಮಾಹಿತಿ ನೀಡಿದರು.
ಬರಪರಿಹಾರದಲ್ಲಿ ಲೋಪ: ಸಭೆಯಲ್ಲಿ ರೈತರು ಬರ ಪರಿಹಾರ ವಿತರಣೆಯಲ್ಲಿ ಲೋಪವಾಗಿದ್ದು, ಸಮರ್ಪಕ ವಿತರಣೆಗೆ ಸಂಸದರು ಕ್ರಮ ವಹಿಸಬೇಕು. ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೆ ರೈತರು ಹೆರಾಣಾಗಿದ್ದಾರೆ, ಕೊಡುವ ಕಿಲುಬು ಕಾಸಿಗೆ ವರ್ಷವಿಡೀ ಅಲೆಯಬೇಕು, ಆನ್‌ಲೈನ್ ನಲ್ಲಿ ಅರ್ಜಿಸಲ್ಲಿಸಿದ್ದರೂ ಈವರೆಗೂ ಪರಿಹಾರದ ಹಣ ಬಂದಿಲ್ಲವೆಂದು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಬರ ಪರಿಹಾರಕ್ಕೆ ಸಂಬಂಧಿಸಿದಂತೆ 18.600 ರೈತರು ಅರ್ಜಿ ಸಲ್ಲಿಸಿದ್ದಾರೆ, ಹಿಂಗಾರು-ಮುಂಗಾರು ಬೆಳೆಗಾರರು ಅರ್ಜಿ ಸಲ್ಲಿಸಿದ್ದಾರಲ್ಲದೆ, ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬೇಕಿರುವುದರಿಂದಾಗಿ ರೈತರು ಸಮಸ್ಯೆ ಎದುರಿಸುವಂತಾಗಿದೆ. ಕೆಲ ರೈತರು ಅರ್ಜಿ ಸಲ್ಲಿಸಿದ್ದರೂ ತಾಂತ್ರಿಕ ಸಮಸ್ಯೆಯಿಂದಾಗಿ ಅಪ್‌ಲೋಡ್ ಆಗದೆ ತೊಂದರೆಯಾಗಿದೆ ಎಂದು ಸ್ಥಳದಲ್ಲಿದ್ದ ಕೃಷಿ-ತೋಟಗಾರಿಕೆ ಅಧಿಕಾರಿಗಳಾದ ರಮೇಶ್ ಹಾಗೂ ವೆಂಕಟೇಶ್ ಮಾಹಿತಿ ನೀಡಿದರು.
ನಕಲಿ ರಸಗೊಬ್ಬರದ ಬಗ್ಗೆ ಎಚ್ಚರ: ತಾಲೂಕಾದ್ಯಂತ ಈಗಾಗಲೇ ಉತ್ತಮ ಮಳೆಯಾಗಿದ್ದು, ರೈತರು ರಸಗೊಬ್ಬರ ಬಳಸುವ ಮುನ್ನವೇ ಖಾಸಗಿ ಅಂಗಡಿಗಳಲ್ಲಿ ಮಾರಾಟ ಮಾಡುವ ರಸಗೊಬ್ಬರವನ್ನು ಮಂಡ್ಯದ ವಿಸಿ ಫಾರಂನಲ್ಲಿ ಪರೀಕ್ಷೆಗೊಳಪಡಿಸಿ, ಕಳೆದ ಸಾಲಿನಲ್ಲಾದಂತೆ ಗೊಂದಲಗಳು ಬೇಡವೆಂದು ಅಧಿಕಾರಿಗಳಿಗೆ ಸೂಚಿಸಿದರು.
ಎಡಿಸಿ ವೆಂಕಟೇಶ್, ಜಿಪಂ ಉಪ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಕರೀಮುದ್ದನಹಳ್ಳಿ ಗ್ರಾಪಂ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷೆ ಶಾರದಮ್ಮ, ಸದಸ್ಯರಾದ ವಸಂತಕುಮಾರ್, ವೆಂಕಟೇಶ್, ಮಹದೇವ, ಶಿವಣ್ಣ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಮುಖಂಡರು ಭಾಗವಹಿಸಿದ್ದರು.