Advertisement

ಗ್ರಾಮಗಳಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಿ

12:41 AM Aug 26, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ  ಪರೀಕ್ಷೆಯ ಪ್ರಮಾಣವನ್ನು 1.75 ಲಕ್ಷಕ್ಕೆ ಹೆಚ್ಚಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

ಪ್ರತಿ ಜಿಲ್ಲೆಯಲ್ಲಿ ಒಟ್ಟಾರೆ ಪರೀಕ್ಷೆಯಲ್ಲಿ ಶೇ.70 ಆರ್‌ಟಿಪಿಸಿಆರ್‌ ಹಾಗೂ ಶೇ.30 ರ್ಯಾಪಿಡ್‌ಆ್ಯಂಟಿಜಿನ್‌ ಪರೀಕ್ಷೆ ನಡೆಸಬೇಕು. ಒಟ್ಟು ಪರೀಕ್ಷೆಯ ಅರ್ಧದಷ್ಟು ತಾಲೂಕು ಕೇಂದ್ರಗಳ ಹೊರಗೆ ನಡೆಯಬೇಕು ಎಂದು ತಿಳಿಸಲಾಗಿದೆ. ಒಟ್ಟು ಪರೀಕ್ಷೆಯಲ್ಲಿ ಕಡ್ಡಾಯವಾಗಿ ಶೇ.10 ಪರೀಕ್ಷೆ ಮಕ್ಕಳಿಗೆ ನಡೆಸಬೇಕು ಎಂದು ಆದೇಶಿಸಲಾಗಿದೆ. 15ರಿಂದ 18 ವರ್ಷದ ಮಕ್ಕಳಲ್ಲಿ  ಸೋಂಕಿನ ರೋಗ ಲಕ್ಷಣಗಳಿದ್ದರೆ ಕಡ್ಡಾಯವಾಗಿ ರ್ಯಾಪಿಡ್‌ ಆ್ಯಂಟಿಜಿನ್‌ ಪರೀಕ್ಷೆ ನಡೆಸಬೇಕು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್‌ ಸೂಚಿಸಿದ್ದಾರೆ.

ಬುಧವಾರ 1,224 ಮಂದಿಗೆ ಸೋಂಕು :

ರಾಜ್ಯದಲ್ಲಿ  ಬುಧವಾರ 1,224 ಮಂದಿಗೆ ಸೋಂಕು ತಗಲಿದ್ದು, 22 ಮಂದಿ ಮೃತಪಟ್ಟಿದ್ದಾರೆ. ಜತೆಗೆ 1,668 ಮಂದಿ ಗುಣಮುಖರಾಗಿದ್ದಾರೆ. ಮಂಗಳವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 5 ಸಾವಿರ (1.95 ಲಕ್ಷಕ್ಕೆ) ಹೆಚ್ಚಳವಾಗಿವೆ. ಹೊಸ ಪ್ರಕರಣ 35, ಸೋಂಕಿತರ ಸಾವು 7 ಕಡಿಮೆಯಾಗಿವೆ.  ಪಾಸಿಟಿವಿಟಿ ದರ ಶೇ.0.6ರಷ್ಟಿದ್ದು, ಮರಣ ದರ ಶೇ.2.3ರಿಂದ 1.8ಕ್ಕಿಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next