ಮುಂಬಯಿ: ಮುಂಬಯಿಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ವೇಗವಾಗಿಹೆಚ್ಚುತ್ತಿರುವುದಕ್ಕೆ ಅನೇಕ ಕಾರಣಗಳಿದ್ದು, ಅದರಲ್ಲಿ
ಲೋಕಲ್ ರೈಲುಗಳನ್ನು ಸಾರ್ವಜನಿಕರಿಗೆಪ್ರಾರಂಭಿಸಿರುವುದು ಕೂಡ ಒಂದು ಕಾರಣವಿರ ಬಹುದು ಎಂದು ಕೋವಿಡ್ ಟಾಸ್ಕ್ ಫೋರ್ಸ್‌ನ ಡಾ| ಶಶಾಂಕ್ ಜೋಶಿ ಅವರು ತಿಳಿಸಿದ್ದಾರೆ.
ಈ ಹಿಂದೆ ಕಳೆದ ಡಿಸೆಂಬರ್ ಮತ್ತು ಜನವರಿ ಯಲ್ಲಿ ದೈನಂದಿನ ಕೋವಿಡ್ ಪ್ರಕರಣಗಳು ನಿಯಂತ್ರಣದಲ್ಲಿತ್ತು. ಮುಂಬಯಿಯಲ್ಲಿ ಜನವರಿಯಲ್ಲಿ ದಿನಕ್ಕೆ ಸರಾಸರಿ 350ರಿಂದ 450ರಷ್ಟು ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಫೆಬ್ರವರಿಯ 3ನೇ ವಾರದಿಂದ ಕೊರೊನಾ ಸೋಂಕಿಗೆ ಗುರಿಯಾಗುವ ಪ್ರಕರಣಗಳ ಸಂಖ್ಯೆಯು 800ಕ್ಕಿಂತ ಹೆಚ್ಚಾಗಿವೆ.
ಸಾರ್ವಜನಿಕರಿಗೆ ಲೋಕಲ್ ರೈಲುಗಳನ್ನುಸೀಮಿತ ಸಮಯದಲ್ಲಿ ಪ್ರಾರಂಭಿಸಿದ್ದರೂಮುಂಬಯಿ ಉಪನಗರಗಳ ರೈಲುಗಳಲ್ಲಿಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯು 20 ಲಕ್ಷದಿಂದ 35 ಲಕ್ಷಕ್ಕೆ ಏರಿಕೆಯಾಗಿವೆ. ಹೀಗಿರು ವಾಗ ಮುಂಬಯಿಯಲ್ಲಿ ಕೊರೊನಾ ಪ್ರಕರಣ ಹೆಚ್ಚುವ ಹಿಂದೆ ಇರುವ ಅನೇಕ ಕಾರಣಗಳ ಪೈಕಿ ಎಲ್ಲರಿಗೂ ಲೋಕಲ್ ರೈಲು ಸೇವೆಯನ್ನು ಪ್ರಾರಂಭಿಸಿರುವುದು ಕೂಡ ಒಂದು ಕಾರಣವಾಗಿದೆ ಎಂದು ಡಾ| ಶಶಾಂಕ ಜೋಶಿ ಹೇಳಿದ್ದಾರೆ.
ಫೆ. 12ರಿಂದ 18ರ ವರೆಗೆ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದು ವರದಿಯಿಂದ ಗಮನಿಸಬಹುದು. ಮುಂಬಯಿ ಯಲ್ಲಿ ಫೆ. 17ರಂದು 721 ಕೋವಿಡ್ ರೋಗಿಗಳು, ಫೆ. 18ರಂದು 736 ರೋಗಿಗಳು ಮತ್ತು ಫೆ. 19ರಂದು 823 ಹೊಸ ರೋಗಿಗಳು ಪತ್ತೆಯಾಗಿದ್ದಾರೆ. ಆದ್ದರಿಂದ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯನ್ನು ನಿಯಂತ್ರಿಸುವುದು ಮತ್ತು ಅದರ ಕಾರಣಗಳನ್ನು ಅರ್ಥ ಮಾಡಿಕೊಳ್ಳುವುದುಸ್ಥಳೀಯ ಆಡಳಿತಕ್ಕೆ ಸವಾಲಾಗಿದೆ.
ಕಠಿನ ನಿಯಮ :
ಮುಂಬಯಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯು ನಿಯಂತ್ರಿಸಬೇಕೆಂಬ ಉದ್ದೇಶದಿಂದ ಮುಂಬಯಿ ಮಹಾನಗರ ಪಾಲಿಕೆಯು ನಿಯಮಗಳನ್ನು ಕಠಿನಗೊಳಿಸಿದೆ. ಮಾಸ್ಕ್ ಧರಿಸದೆ ಬೀದಿಗಿಳಿಯುವವರ ವಿರುದ್ಧ ದಂಡ ವಿಧಿಸುವ ಕ್ರಮ ಇನ್ನಷ್ಟು ಕಠಿನಗೊಳಿಸಲಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಾಗಲು ಸ್ಥಳೀಯರನಿರ್ಲಕ್ಷ್ಯವೇ ಒಂದು ಕಾರಣವೆಂದು ಮುಂಬಯಿ ಮೇಯರ್ ಹೇಳಿದ್ದರು. ಆದ್ದರಿಂದ ನಾವು ಕೂಡ ನಮ್ಮ ಕಾಳಜಿ ವಹಿಸುವುದರ ಜತೆಗೆ ಆಡಳಿತದ ನಿಯಮಗಳನ್ನು ಪಾಲಿಸಬೇಕು ಎಂದರು.