Advertisement

ಮಾರಾಟ ಮೇಳದಿಂದ ವ್ಯವಹಾರಿಕ ಜ್ಞಾನ ವೃದ್ಧಿ

07:37 AM Mar 23, 2019 | |

ತಿಪಟೂರು: ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಮಾರುಕಟ್ಟೆ ಕೌಶಲ್ಯ ಬೆಳೆಸಿಕೊಳ್ಳುವುದರಿಂದ ವ್ಯವಹಾರಿಕ ಜ್ಞಾನ ವೃದ್ಧಿಕೊಳ್ಳಲಿದೆ ಎಂದು ತಿಪಟೂರಿನ ಎಸ್‌ಬಿಐ ಬ್ಯಾಂಕ್‌ನ ಸಹ ವ್ಯವಸ್ಥಾಪಕ ಮುದ್ದಪ್ಪ ಸಲಹೆ ನೀಡಿದರು.

Advertisement

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ್ದ ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಣ ಎಷ್ಟು ಮುಖ್ಯವೋ ಹಾಗೆಯೇ ಇತರೆ ಕೌಶಲ್ಯ ಮೈಗೂಡಿಸಿಕೊಳ್ಳಬೇಕು.

ಮಾರಾಟ ಮೇಳದಿಂದ ವ್ಯವಹಾರಿಕ ಜ್ಞಾನದ ಜೊತೆಗೆ ಬುದ್ಧಿಶಕ್ತಿ ಚುರುಕಾಗುತ್ತದೆ. ಅಲ್ಲದೇ ಲೆಕ್ಕಾಚಾರ, ವ್ಯಾಪಾರ ವಹಿವಾಟಿನಿಂದ ಸ್ವಾವಲಂಬನೆ ಬದುಕು ರೂಪಿಸಲು ಈ ಮೇಳ ಅವಶ್ಯಕವಾಗಿದ್ದು, ಗ್ರಾಹಕರನ್ನು ಸೆಳೆಯುವ ಕೌಶಲ್ಯ ಅಳವಡಿಸಿಕೊಂಡಾಗ ಮಾತ್ರ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಸಾಧ್ಯ ಎಂದು ತಿಳಿಸಿದರು. 

ಸಕರಾತ್ಮಕ ಮನೋಭಾವ: ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಲ್ಲಿಯೇ ಆಸಕ್ತಿ, ಶ್ರದ್ಧೆ, ಸಕರಾತ್ಮಕ ಮನೋಭಾವ ಬೆಳೆಸಿಕೊಂಡಲ್ಲಿ ನಿರ್ದಿಷ್ಟ ಗುರಿ ತಲುಪಲು ಸಾಧ್ಯ ಎಂದರು.

ವ್ಯವಹಾರ ಜ್ಞಾನ: ತುಮಕೂರು ಸಿದ್ಧಾರ್ಥ ಕಾಲೇಜಿನ ಸಹ ಪ್ರಾಧ್ಯಾಪಕ ರಾಮಲಿಂಗಂ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಅಂಶ ಅಳವಡಿಸಿಕೊಂಡು ಸನ್ಮಾರ್ಗದತ್ತ ಹೋಗಬೇಕು. ಇಂಥ ಮಾರಾಟ ಮೇಳಗಳು ನಿಮಗೆ ಸಹಕಾರಿಯಾಗಲಿದ್ದು ಧೈರ್ಯ, ನಾಯಕತ್ವಗುಣ ಹಾಗೂ ವ್ಯವಹಾರ ಜ್ಞಾನ ಬೆಳೆಯಲಿದೆ ಎಂದರು.

Advertisement

ಪ್ರೋತ್ಸಾಹಿಸಿ: ಪ್ರಾಂಶುಪಾಲ ಪ್ರೊ. ಕೆ.ಎಂ.ರಾಜಣ್ಣ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮಾರುಕಟ್ಟೆ ಬಗ್ಗೆ ಪ್ರಾಯೋಗಿಕವಾಗಿ ಮನವರಿಕೆ ಮಾಡಲು ಪ್ರತಿವರ್ಷ ಮಾರಾಟ ಮೇಳ ಆಯೋಜಿಸಲಾಗುತ್ತದೆ. ಅವರೇ ತಯಾರಿಸಿರುವ ಹಾಗೂ ಮಾರುಕಟ್ಟೆಯಿಂದ ಕೊಂಡುಕೊಂಡು ಬಂದಿದ್ದು, ಇತರೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಅವರಿಗೆ ಪ್ರೋತ್ಸಾಹಿಸಬೇಕೆಂದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಪ್ರೊ. ನಾಗಭೂಷಣ್‌, ಪ್ರೊ. ಅನೂಪ್‌ಪ್ರಸಾದ್‌, ಪ್ರೊ.ನರಸಿಂಹರಾಜು, ಪ್ರೊ.ಎಚ್‌.ಬಿ. ಕುಮಾರಸ್ವಾಮಿ, ಪ್ರೊ.ಈರಯ್ಯ, ಪ್ರೊ.ಯಶೋಧ, ಡಾ.ಜ್ಯೋತಿಕಿರಣ್‌, ಪ್ರೊ.ಮಮತಾ, ಪ್ರೊ.ಸುಭದ್ರಮ್ಮ ಮತ್ತಿತರರಿದ್ದರು.

ವಿವಿಧ ತಿಂಡಿ ಮಾರಾಟ: ಮಾರಾಟ ಮೇಳದಲ್ಲಿ ವಿದ್ಯಾರ್ಥಿಗಳು ತಾವೇ ತಯಾರಿಸಿದ ಹಾಗೂ ಬೇಕಾದ ವಸ್ತುಗಳನ್ನು ಮಾರುಕಟ್ಟೆಯಿಂದ ಕೊಂಡು ತಂದು ಇಲ್ಲಿ ಮಾರಾಟ ಮಾಡುತ್ತಿದ್ದರು. ತಂಪು ಪಾನೀಯ, ಚುರುಮುರಿ, ಫ್ರೂಟ್‌ಸಲಾಡ್‌, ವಿವಿಧ ಬಗೆಯ ಹಣ್ಣುಗಳು, ಪುರಿ, ಬೋಂಡ ಅಂಗಡಿಗಳನ್ನು ತೆರೆದಿದ್ದರು.

ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಕೊಳ್ಳುವಲ್ಲಿ ನಿರತರಾಗಿದ್ದರು. ಬಿರು ಬಿಸಿಲಿದ್ದ ಕಾರಣ ಕಲ್ಲಂಗಡಿ ಹಣ್ಣು, ಮಜ್ಜಿಗೆ, ವಿವಿಧ ಬಗೆಯ ಜ್ಯೂಸ್‌ಗಳನ್ನು ಸೇವಿಸುವ ಮೂಲಕ ದಣಿವಾರಿಸಿಕೊಳ್ಳುತ್ತಿದ್ದ ದೃಶ್ಯಗಳು ಕಂಡುಬಂದವು.

Advertisement

Udayavani is now on Telegram. Click here to join our channel and stay updated with the latest news.

Next