Advertisement

ವಿಮಾನ ಪ್ರಯಾಣಿಕರ ವಿಶ್ವಾಸ ಹೆಚ್ಚಳ

03:19 PM Aug 28, 2020 | Suhan S |

ದೇವನಹಳ್ಳಿ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(ಬಿಐಎಎಲ್‌) ಆಯೋಜಿಸಿದ ಸಮೀಕ್ಷೆ-ವಾಯ್ಸ ಆಫ್ ಪ್ಯಾಕ್ಸ್‌ ಪ್ರಕಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನು ಷ್ಠಾನಗೊಳಿಸಲಾದ ಸದೃಢವಾದ ನೈರ್ಮಲಿಕರಣ ಕ್ರಮ ಮತ್ತು ಸಂಪರ್ಕ ಅಥವಾ ಸ್ಪರ್ಶರಹಿತ ಪ್ರಕ್ರಿಯೆಗಳು ಪ್ರಯಾಣಿಕರ ವಿಶ್ವಾಸ ಹೆಚ್ಚಿಸಿದೆ ಎಂದು ಬಿಐಎ ಎಲ್‌ನ ವಕ್ತಾರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ವಿಮಾನ ಪ್ರಯಾಣ ಕುರಿತ ಪ್ರೇಕ್ಷಕರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕಾಗಿ ಈ ಸಮೀಕ್ಷೆ ಏಪ್ರಿಲ್‌ 2020ರಿಂದ ಜುಲೈ 2020ರವರೆಗೆ ಐದು ಹಂತಗಳಲ್ಲಿ ನಡೆಸಲಾಯಿತು. ಮೇ 25, 2020ರಂದು ವಿಮಾನ ಪ್ರಯಾಣ ಮತ್ತೆ ಆರಂಭವಾದಾಗಿನಿಂದ ನೈರ್ಮಲೀಕರ ಕ್ರಮಗಳು ಸಕಾರಾತ್ಮಕ ಪರಿವರ್ತನೆ ಕಂಡಿವೆ ಎಂಬುದನ್ನು ಕೂಡ ಸಮೀಕ್ಷೆ ಹೊರಗೆಡವಿತ್ತು. (ಎರಡು ತಿಂಗಳ ಕೋವಿಡ್‌-ಸಾಂಕ್ರಾಮಿಕದಿಂದಾಗಿ ಉಂಟಾಗಿದ್ದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ನಂತರ ಸ್ವದೇಶಿ, ನಿಗದಿತ ವಿಮಾನ ಪ್ರಯಾಣಗಳು ಮತ್ತೆ ಆರಂಭ). ಹಂತ ಹಂತವಾಗಿ ಸುಧಾರಣೆ: ಮೊದಲ ಹಂತದಲ್ಲಿ ಶೇ.21ರಷ್ಟು ಜನರು ವಿಮಾನ ನಿಲ್ದಾಣದ ಸುರಕ್ಷತೆ ಮತ್ತು ನೈರ್ಮಲ್ಯದ ಪರೀಕ್ಷೆ ಕುರಿತು ಕಾಳಜಿ ಹೊಂದಿದ್ದರೂ, ಇದು 5ನೇ ಹಂತದ ಹೊತ್ತಿಗೆ ಶೇ.6ರಷ್ಟಕ್ಕೆ ಗಮನಾರ್ಹವಾಗಿ ಕಡಿಮೆಯಾಗಿತ್ತು. ಮತ್ತೂಂದು ಅನುಕೂಲಕರ ಲಕ್ಷಣವೆಂದರೆ, ಈ ಸಮೀಕ್ಷೆಯ ಹಂತಗಳಲ್ಲಿ ವಿಮಾನ ಪ್ರಯಾಣ ಮತ್ತು ವಿಮಾನ ನಿಲ್ದಾಣಗಳಿಗೆ ಸಂಬಂಧಿಸಿದಂತೆ ಉನ್ನತ ಸುರಕ್ಷತಾ ಗ್ರಹಿಕೆಗಳು ಹಂತ ಹಂತವಾಗಿ ಸುಧಾರಿಸಿದ್ದವು. ಶೇ.15ರಷ್ಟು ಹೆಚ್ಚಳ: ಮೊದಲ ಹಂತದಲ್ಲಿ ವಿಮಾನ ಪ್ರಯಾಣ ಸುರಕ್ಷಿತ ಸಾರಿಗೆ ಮಾದರಿ ಎಂದು ಪ್ರತಿಕ್ರಿಯಿಸಿದವರ ಪೈಕಿ ಶೇ.71ರಷ್ಟು ಜನರು ಪರಿ ಗಣಿಸಿದ್ದರು. ಅಂತಿಮ ಹಂತದಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ.89ರಷ್ಟು ಜನರು ವಿಮಾನ ಪ್ರಯಾಣ ಅತ್ಯಂತ ಸುರಕ್ಷಿತ ಎಂದು ಪರಿಗಣಿಸಿದ್ದರು. ರೈಲು ಮತ್ತು ಬಸ್‌ ನಿಲ್ದಾಣಗಳಿಗಿಂತಲೂ ವಿಮಾನ ನಿಲ್ದಾಣಗಳು ಹೆಚ್ಚು ಸುರಕ್ಷಿತ ಎಂಬ ಭಾವನೆಯಲ್ಲಿ ಶೇ.15ರಷ್ಟು ಹೆಚ್ಚಳ ಕಂಡುಬಂದಿದೆ.

ಏಪ್ರಿಲ್‌ ಮತ್ತು ಜುಲೈ 2020ರ ನಡುವೆ ಬಿಐಎಎಲ್‌ ಪರವಾಗಿ ಜಾಗತಿಕ ಸಂಶೋಧನಾ ಮತ್ತು ಸಲಹಾ ಸಂಸ್ಥೆಯಾದ ಲೀಡ್‌ಕಾÂಪ್‌ ವೆಂಚರ್ ಈ ಸಮೀಕ್ಷೆ ನಡೆಸಿತ್ತು. ಇದರಲ್ಲಿ 6,098 ಜನರು ಪ್ರತಿಕ್ರಿಯಿಸಿದ್ದರು. ಇದಕ್ಕಾಗಿ ವಿವಿಧ ವೃತ್ತಿ, ವಯಸ್ಸು, ಸಮೂಹ ಗಾತ್ರ, ವಿವಿಧ ವರ್ಗಗಳಲ್ಲಿ ಹಾರಾಟ ನಡೆಸುವ 1,50,000 ಪ್ರಯಾಣಿಕರ ವಿವರಗಳಿಂದ ವ್ಯವಸ್ಥಿತವಾದ ಮಾದರಿ ಆಯ್ದುಕೊಳ್ಳುವ ಕ್ರಮವನ್ನು ಬಳಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next