Advertisement

ಕೃಷಿ ಯಂತ್ರೋಪಕರಣ ಕೇಂದ್ರ ಹೆಚ್ಚಳ

07:10 AM Sep 05, 2017 | |

ಬೆಂಗಳೂರು: ರಾಜ್ಯದಲ್ಲಿ ರೈತರಿಗೆ ಕಡಿಮೆ ಬೆಲೆಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ನೀಡುವ ಕೃಷಿ ಯಂತ್ರಧಾರೆ ಕಾರ್ಯಕ್ರಮವನ್ನು ಇನ್ನೂ 250 ಹೋಬಳಿಗಳಿಗೆ ವಿಸ್ತರಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

Advertisement

ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ. 

ರಾಜ್ಯದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೃಷಿ ಯಂತ್ರಧಾರೆ ಯೋಜನೆ ಜಾರಿಯಲ್ಲಿದೆ. ಇದುವರೆಗೂ ಕೃಷಿ ಇಲಾಖೆಯ ಯೋಜನೆಯಾಗಿ ಜಾರಿಯಲ್ಲಿತ್ತು. ಈಗ ಈ ಯೋಜನೆಗೆ ಉತ್ತೇಜನ ನೀಡಲು ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಲು ಮುಂದಾಗಿದ್ದು, ಈಗ ಇದು ಸರ್ಕಾರದ ಯೋಜನೆಯಾಗಿ ಮಾರ್ಪಟ್ಟಿದೆ. ಇದಕ್ಕಾಗಿ ಸರ್ಕಾರ 122 ಕೋಟಿ ರೂ. ನೀಡಲು ತೀರ್ಮಾನಿಸಿದೆ ಎಂದು ಹೇಳಿದರು.

ರಾಜ್ಯದ 743 ಹೋಬಳಿಗಳಲ್ಲಿ ಸುಮಾರು 500 ಹೋಬಳಿಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ. ಈಗ 250 ಹೋಬಳಿಗಳಲ್ಲಿ ಹೆಚ್ಚಿನ ಕೇಂದ್ರಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ಹೊಸದಾಗಿ ಆರಂಭವಾಗುವ ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರಕ್ಕೆ ಸರ್ಕಾರ 1.5 ಲಕ್ಷ ರೂ. ಮೂಲಸೌಕರ್ಯ ಅಭಿವೃದಿಟಛಿಗಾಗಿ ನೀಡಲಿದೆ. ವಾರ್ಷಿಕ 10 ಲಕ್ಷ ರೂ. ವಹಿವಾಟು ನಡೆಸುವ ಕೇಂದ್ರಗಳಿಗೆ 5 ಲಕ್ಷ ರೂ. ಸಹಾಯಧನ ನೀಡಲಾಗುವುದು.

10 ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುವ ಕೇಂದ್ರಗಳಿಗೆ 2.5 ಲಕ್ಷ ಸಹಾಯಧನ ನೀಡಲಾಗುವುದು ಎಂದು ಜಯಚಂದ್ರ ತಿಳಿಸಿದರು.

Advertisement

ತೋಟಗಾರಿಕೆಗೂ ಕೃಷಿ ಭಾಗ್ಯ: ಕೃಷಿ ಭಾಗ್ಯ ಯೋಜನೆಯನ್ನು ತೋಟಗಾರಿಕೆ ಇಲಾಖೆಗೂ ವಿಸ್ತರಿಸಲು ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. 2017-18 ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿರುವಂತೆ ಕೃಷಿ ಭಾಗ್ಯ ಯೋಜನೆಗೆ 200 ಕೋಟಿ ರೂ. ಮೀಸಲಿಡಲಾಗಿದ್ದು, ನೀರಾವರಿ ಇಲ್ಲದ ಪ್ರದೇಶಗಳ 25 ಜಿಲ್ಲೆಗಳ 128 ತಾಲೂಕುಗಳಲ್ಲಿ ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ ನೀಡಿದೆ.

ಈ ಯೋಜನೆ ಅನುಷ್ಠಾನಕ್ಕೆ ಎಸ್ಸಿ, ಎಸ್ಟಿ ಸಮುದಾಯದವರಿಗೆ ಶೇ.90 ರಿಯಾಯ್ತಿ ಹಾಗೂ ಇತರ ವರ್ಗದವರಿಗೆ ಶೇ.50 ರಷ್ಟು ಧನ ಸಹಾಯ ನೀಡಲಾಗುವುದು. ಈ ಯೋಜನೆಯ ಲಾಭ ಪಡೆಯಲು ರೈತರು ಕನಿಷ್ಠ 500 ರಿಂದ 4000 ಮೀಟ ವಿಸ್ತೀರ್ಣದ ಪಾಲಿಹೌಸ್‌ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಇತರ ನಿರ್ಣಯಗಳು
– 2017-18 ನೇ ಸಾಲಿನಲ್ಲಿ ಆರ್‌ಕೆಎಸ್‌ಕೆ ಮತ್ತು ಆರ್‌ಬಿಎಸ್‌ ಕೆ ಕಾರ್ಯಕ್ರಮದಡಿಯಲ್ಲಿ ಐರನ್‌, ಫೋಲಿಕ್‌ ಆ್ಯಸಿಡ್‌ ಮತ್ತು ಆಲ್‌ಬೆಂಡ್‌ಜೋಲ್‌ ಮಾತ್ರೆಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 10.40 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಹಾಗೂ ಶುಚಿ ಕಾರ್ಯಕ್ರಮದಡಿಯಲ್ಲಿ 47.96 ಕೋಟಿ ರೂ.ವೆಚ್ಚದಲ್ಲಿ ಸ್ಯಾನಿಟರಿ ನ್ಯಾಪಕಿನ್‌ ಪ್ಯಾಡ್‌ ಗಳನ್ನು ಖರೀದಿಸಲು ಸಂಪುಟ ಒಪ್ಪಿಗೆ ನೀಡಿದೆ.

– ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿರುವ 135 ಹಾಗೂ ಕೇಂದ್ರ ಸರ್ಕಾರದಿಂದ ಬಂದಿರುವ 8 ನಿಷ್ಪ್ರಯೋಜಕ ಕಾನೂನುಗಳನ್ನು ಕೈ ಬಿಡಲು ಸಂಪುಟ ನಿರ್ಧರಿಸಿದೆ. ಜಾರಿಗೆ ತರಲು ಸಾಧ್ಯವಾಗದಿರುವಂತಹ ಧನ ವಿನಿಯೋಗ, ಸ್ಟಾಂಪ್‌ ಡ್ನೂಟಿಯಂತಹ ಕಾನೂನುಗಳನ್ನು ಕೈ ಬಿಡಲು ಸಂಪುಟ ಅನುಮತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next