Advertisement

ದೇಶದ ಎಲ್ಲಾ ಪೋಸ್ಟ್ ಆಫೀಸ್ ಗಳಲ್ಲಿ ಐಟಿಆರ್ ಫೈಲಿಂಗ್ ಗೆ ಅವಕಾಶ  

05:30 PM Jul 18, 2021 | |

ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡುವುದಕ್ಕೆ ಎಲ್ಲರಿಗೂ ಆದಾಯ ತೆರಿಗೆ ಇಲಾಖೆ ಅನುಕೂಲ ಮಾಡಿಕೊಟ್ಟಿದೆ.

Advertisement

ಹೌದು, ಆದಾಯ ತೆರಿಗೆ ಪಾವತಿದಾರರು ಐಟಿಆರ್ ಫೈಲಿಂಗ್ ನನ್ನು ತಮಗೆ ಹತ್ತಿರದ ಪೋಸ್ಟ್​ ಆಫೀಸ್ ​ನ ಕಾಮನ್ ಸರ್ವೀಸ್ ಸೆಂಟರ್​ನಲ್ಲಿ (CSC) ಮಾಡಕೊಳ್ಳಬಹುದು ಎಂದು ಹೇಳಿದೆ.

ಇದನ್ನೂ ಓದಿ : ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ : ಮೈತ್ರಿ ಬಗ್ಗೆ ಪಕ್ಷ ಮುಕ್ತವಾಗಿದೆ : ಪ್ರಿಯಾಂಕ ಗಾಂಧಿ

ಈ ಬಗ್ಗೆ ಪ್ರತಿಕ್ರಿಯಿಸಿದ ಇಂಡಿಯಾ ಪೋಸ್ಟ್, ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡುವುದಕ್ಕೆ ಆದಾಯ ತೆರಿಗೆ ಇಲಾಖೆ ಅನುಕೂಲ ಮಾಡಿಕೊಟ್ಟಿರುವುದು ದೊಡ್ಡ ಅನುಕೂಲ ಆಗಿದೆ ಎಂದು ಹೇಳಿದೆ.

ಇನ್ನು, ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್​ಗಾಗಿ ದೂರ ಪ್ರಯಾಣ ಮಾಡಬೇಕಾಗಿಲ್ಲ. ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಸಿ ಎಸ್ ​ಸಿ ಕೌಂಟರ್​ ನಲ್ಲಿ ಆದಾಯ ತೆರಿಗೆ ರಿಟರ್ನ್ಸ್​ ಸೇವೆಯನ್ನು ಪಡೆಯಬಹುದು ಎಂದು ತಿಳಿಸಿದೆ.

Advertisement

ಪೋಸ್ಟಲ್, ಬ್ಯಾಂಕಿಂಗ್, ಇನ್ಷೂರೆನ್ಸ್ ಸೇವೆಗಳನ್ನು ಜನರಿಗೆ ಒಂದೇ ಕಡೆಯಲ್ಲಿ ನೀಡುವ ಪೋಸ್ಟ್​ ಆಫೀಸ್ ​ನ ಕಾಮನ್​ ಸರ್ವೀಸ್ ಸೆಂಟರ್​ ಕೌಂಟರ್​ ಗಳು ದೇಶವ್ಯಾಪಿ ಚಾಲ್ತಿಯಲ್ಲಿವೆ.

ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಇತರ ಹಲವು ಡಿಜಿಟಲ್ ಸೇವೆಗಳನ್ನು ಜನರಿಗೆ ಒದಗಿಸಲಾಗುತ್ತದೆ. ಆದಾಯ ತೆರಿಗೆ ವೆಬ್ ​ಸೈಟ್​ ಆದ https://www.incometax.gov.in./ ಹೊರತುಪಡಿಸಿ ತೆರಿಗೆ ಪಾವತಿದಾರರು ಪೋಸ್ಟ್​ ಆಫೀಸ್​ ನ ಕಾಮನ್ ಸರ್ವೀಸ್ ಸೆಂಟರ್ ​ಗಳನ್ನು ಬಳಸಿಕೊಳ್ಳಬಹುದಾಗಿದೆ.

 ಇದನ್ನೂ ಓದಿ : ಶರದ್ ಪವಾರ್ ಬಿಜೆಪಿಯೊಂದಿಗೆ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಬೇಕು: ಅಠಾವಳೆ

Advertisement

Udayavani is now on Telegram. Click here to join our channel and stay updated with the latest news.

Next