Advertisement

ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆ ಈಗ ಸುಲಭ

03:25 AM Jul 22, 2020 | Hari Prasad |

ಹೊಸದಿಲ್ಲಿ: ಪ್ರತೀವರ್ಷ ಆದಾಯ ತೆರಿಗೆ ಹಿಂಪಾವತಿ (ಐಟಿಆರ್‌) ಸಲ್ಲಿಕೆ ಸಮಯ ಬಂತೆಂದರೆ ಹಲವರು ತಲೆಕೆಡಿಸಿಕೊಳ್ಳುತ್ತಾರೆ. ಈ ಪ್ರಕ್ರಿಯೆ ಅಷ್ಟು ಜಟಿಲವಾಗಿ­ರು­ವುದೇ ಅದಕ್ಕೆ ಕಾರಣ.

Advertisement

ಪ್ರಸ್ತುತ ಕೇಂದ್ರ ಸರಕಾರ ಬಿಡುಗಡೆ ಮಾಡಲಿರುವ ಹೊಸ 26 ಎಎಸ್‌ ಪತ್ರಕದಲ್ಲಿ ಈ ಪ್ರಕ್ರಿಯೆ ಬಹಳ ಸರಳವಾಗಿರಲಿದೆ.

ಈ ಪತ್ರಕದಲ್ಲಿ ಹಿಂಪಾವತಿಗಾಗಿ ಸಲ್ಲಿಸಬೇಕಾದ ಎಲ್ಲ ಮಾಹಿತಿಗಳು ಅಡಕವಾಗಿ, ಸಿದ್ಧ ರೀತಿಯಲ್ಲಿ ನಿಮ್ಮ ಕೈಗೆ ಬರುತ್ತದೆ.

ಆದ್ದ­ರಿಂದ ನಿಮ್ಮ ಸಲ್ಲಿಕೆ ಪ್ರಕ್ರಿಯೆ ಬಹಳ ಸುಲಭವಾಗುತ್ತದೆ.

ಇದಕ್ಕೆ ಕಾರಣವೇನೆಂದರೆ ಬೇರೆ ಬೇರೆ ವಿಭಾಗಗಳಲ್ಲಿ ನಡೆದಿರುವ ಆರ್ಥಿಕ ವ್ಯವಹಾರಗಳ ಹೆಚ್ಚುವರಿ ಮಾಹಿತಿ ಇಲ್ಲಿ ಸಿಗುತ್ತದೆ.

Advertisement

ಅಂದರೆ 61 ಎ ಪತ್ರಕದಲ್ಲಿರುವ ಮಾಹಿತಿಗಳನ್ನೂ ಇಲ್ಲಿಯೇ ಲಗತ್ತಿಸಲಾಗಿರುತ್ತದೆ.

ಹಿಂದೆ ಟಿಡಿಎಸ್‌, ಟಿಸಿಎಸ್‌, ಇತರೆ ತೆರಿಗೆಗಳನ್ನು ಕಟ್ಟಿರುವ ವಿವರ, ಇನ್ನಿತರೆ ಸಂಗತಿಗಳ ಬಗ್ಗೆ ನಾವೇ ಮಾಹಿತಿ ನೀಡಬೇಕಾಗಿತ್ತು.

ಈಗ ಆ ಎಲ್ಲ ಮಾಹಿತಿಗಳು 26 ಎಎಸ್‌ನಲ್ಲೇ ಸಿದ್ಧವಾಗಿರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next