Advertisement

IT raid; ಹುಬ್ಬಳ್ಳಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳ ದಾಳಿ, ಪರಿಶೀಲನೆ

12:17 PM Jan 24, 2024 | Team Udayavani |

ಹುಬ್ಬಳ್ಳಿ: ಆದಾಯ ತೆರಿಗೆ ಇಲಾಖೆ‌ ಅಧಿಕಾರಿಗಳು ಕೆಜಿಪಿ ಜುವೆಲರ್ಸ್ ಮಾಲೀಕರ ನಿವಾಸ ಹಾಗೂ ಅಂಗಡಿ, ರೆಸಾರ್ಟ್ ಮೇಲೆ ಮಂಗಳವಾರ ಸಂಜೆ ಏಕಕಾಲಕ್ಕೆ ದಾಳಿ ನಡೆಸಿ, ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.

Advertisement

ಕುರಡೇಕರರಿಗೆ ಸಂಬಂಧಿಸಿದ ಇಲ್ಲಿನ ಸ್ಟೇಷನ್ ರಸ್ತೆಯ ಕೆಜಿಪಿ ಜುವೆಲರ್ಸ್, ಅಮರಗೋಳದ ರಾಯಲ್ ರಿಡ್ಜ್ ರೆಸಾರ್ಟ್, ಲ್ಯಾಮಿಂಗ್ಟನ್ ರಸ್ತೆಯ ಮಹಾದೇವಿ ಸಿಲ್ಕ್ಸ್ ಆ್ಯಂಡ್ ಸಾರೀಸ್, ಕುಬೇರಪುರಂ ಸಿಲ್ಕ್ಸ್ ಹಾಗೂ ಅಶೋಕನಗರದ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

ದಾಳಿ ವೇಳೆ 18 ಕೋಟಿ ರೂ ಗೂ ಅಧಿಕ ಮೌಲ್ಯದ ದಾಖಲಾತಿ ಹಾಗೂ ಆಭರಣ ಮತ್ತು ಹಣ ವಶಕ್ಕೆ ಪಡೆದುಕೊಂಡು ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.

ಬುಧವಾರವೂ ಪರಿಶೀಲನೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next