Advertisement

29, 30, 31ರಂದೂ ತೆರೆದಿರುತ್ತೆ ಐಟಿ ಕಚೇರಿಗಳು

09:10 AM Mar 28, 2018 | Team Udayavani |

ನವದೆಹಲಿ: ಹಿಂದಿನ 2 ವರ್ಷಗಳ ರಿಟರ್ನ್ಸ್ ಸಲ್ಲಿಕೆ ಮಾಡಲು ಬಾಕಿ ಉಳಿದಿದ್ದು, ವಾರಾಂತ್ಯದ ಸರಣಿ ರಜೆ ಬಗ್ಗೆ ತಲೆಕೆಡಿಸಿಕೊಂಡಿದ್ದೀರಾ? ರಿಟರ್ನ್ಸ್ ಸಲ್ಲಿಕೆ ಮಾಡುವವರಿಗೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮಾ.29ರಿಂದ 31ರವರೆಗೆ ಆದಾಯ ತೆರಿಗೆ ಇಲಾಖೆ ತನ್ನ ಕಚೇರಿಗಳನ್ನು ತೆರೆದಿರಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. 2016-17 ಮತ್ತು 2017-18ನೇ ಸಾಲಿನ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಬಾಕಿ ಉಳಿದಿದ್ದರೆ ಮಾ.31ರ ಒಳಗಾಗಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮಾ.29 ಮತ್ತು 30ರಂದು ಮಹಾವೀರ ಜಯಂತಿ ಮತ್ತು ಗುಡ್‌ಫ್ರೈಡೇ ಪ್ರಯುಕ್ತ ಸರ್ಕಾರಿ ರಜಾದಿನವಾಗಿದ್ದರೂ ಕಚೇರಿಗಳು ಕಾರ್ಯನಿರ್ವಹಿಸಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next