Advertisement

ದಾಖಲೆ ತೆರಿಗೆ ಸಂಗ್ರಹ

06:00 AM Aug 18, 2018 | Team Udayavani |

ಗುವಾಹಟಿ: ಪ್ರಸ್ತುತ ಸಾಲಿನಲ್ಲಿ (2017-18) ದೇಶಾದ್ಯಂತ ಆದಾಯ ತೆರಿಗೆ ಸಂಗ್ರಹವು ಬರೋಬ್ಬರಿ 10.03 ಲ.ಕೋ.ರೂ. ಆಗಿದ್ದು, ಇದು ದಾಖಲೆ ಪ್ರಮಾಣದ ಸಂಗ್ರಹ ಎನಿಸಿಕೊಂಡಿದೆ. ಕೇಂದ್ರ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಈ ಮಾಹಿತಿ ನೀಡಿದೆ.

Advertisement

ಗುವಾಹಟಿಯಲ್ಲಿ ಶುಕ್ರವಾರ ನಡೆದ ದಕ್ಷಿಣ ವಲಯ ಆದಾಯ ತೆರಿಗೆ ಅಧಿಕಾರಿಗಳ 2 ದಿನಗಳ ಸಮಾವೇಶದಲ್ಲಿ ಸಿಬಿಡಿಟಿ ಸದಸ್ಯ ಶಬ್ರಿ ಭಟ್ಟಸಾಲಿ, “2017-18ರಲ್ಲಿ 6.92 ಕೋ.ರೂ. ಐಟಿ ರಿಟರ್ನ್ಸ್ ಸಲ್ಲಿಕೆಯಾಗಿದೆ. 2016-17ರ ಅವಧಿಯಲ್ಲಿ 5.61 ಕೋ.ರೂ. ರಿಟರ್ನ್ಸ್ ಸಲ್ಲಿಕೆಯಾಗಿತ್ತು. ಈ ಬಾರಿ 1.31 ಕೋ.ರೂ. ಹೆಚ್ಚುವರಿ ರಿಟರ್ನ್ಸ್ ಸಲ್ಲಿಕೆಯಾದಂತಾಗಿದೆ’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next