Advertisement

Reply; ಭಾರತದ ಆರ್ಥಿಕತೆ ಸದೃಢ: ಬೈಡೆನ್‌ಗೆ ಜೈಶಂಕರ್‌ ಚಾಟಿ

02:04 AM May 05, 2024 | Team Udayavani |

ಹೊಸದಿಲ್ಲಿ: ಭಾರತವು ವಲಸಿಗರನ್ನು ಹೃದಯಪೂರ್ವಕವಾಗಿ ಸ್ವಾಗತಿಸಿದೆ. ಜತೆಗೆ ದೇಶದ ಆರ್ಥಿಕ ವ್ಯವಸ್ಥೆ ಕುಂಠಿತಗೊಂಡಿ ಲ್ಲವೆಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ತಿರುಗೇಟು ನೀಡಿದ್ದಾರೆ.

Advertisement

ಭಾರತಕ್ಕೆ ವಲಸಿಗರ ಭೀತಿ ಇದೆ ಎಂದು ಬೈಡೆನ್‌ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಜೈ ಶಂಕರ್‌ ಪ್ರತಿಕ್ರಿಯಿ ಸಿದ್ದು, ಭಾರತದ ಇತಿಹಾಸವನ್ನು ಅಧ್ಯಯನ ಮಾಡಿದರೆ ನಮ್ಮ ರಾಷ್ಟ್ರ ಹಿಂದಿ ನಿಂದಲೂ ವಲಸಿಗರಿಗೆ ಮುಕ್ತ ಅವಕಾಶ ಗಳನ್ನು ನೀಡಿರುವುದು ತಿಳಿಯ ಲಿದೆ. ಜಗತ್ತಿನ ಯಾವುದೇ ಮೂಲೆಯ ವಲಸಿಗರು ನಮ್ಮ ದೇಶಕ್ಕೆ ಬರುವುದರಿಂದ ಭಾರತವು ಪ್ರಪಂಚ ದಲ್ಲಿಯೇ ವಿಶಿಷ್ಟ ದೇಶವಾಗಿ ಗುರುತಿಸಿ ಕೊಂಡಿದೆ. ಅದಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆಯೇ ನಿರ್ದೇಶನ ಎಂದು ಹೇಳಿದ್ದಾರೆ.

ಬೈಡೆನ್‌ ಹೇಳಿದ್ದೇನು?: ಪ್ರಚಾರ ವೊಂದರಲ್ಲಿ ಅಮೆರಿಕದ ವಲಸೆ ನೀತಿ ಬಗ್ಗೆ ಬೈಡೆನ್‌ ಪ್ರಶಂಸೆ ವ್ಯಕ್ತಪಡಿಸಿ, ಚೀನ, ರಷ್ಯಾ, ಭಾರತ ಮತ್ತು ಜಪಾನ್‌ ರಾಷ್ಟ್ರಗಳ ನೀತಿ ಸಮರ್ಪಕವಾಗಿಲ್ಲ. ಜತೆಗೆ ಆ ರಾಷ್ಟ್ರಗಳು ವಲಸಿಗರ ಪ್ರವೇ ಶಕ್ಕೆ ಅನುವು ಮಾಡುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಹೊಂದಿಲ್ಲ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next